ನವದೆಹಲಿ : ಕರೋನಾ ರೂಪಾಂತರ ಒಮಿಕ್ರಾನ್‌ನ (Omicron) ಭೀತಿಯ ನಡುವೆ, ಇತ್ತೀಚೆಗೆ ಡಿಸಿಜಿಐ (DCGI ) ಮಕ್ಕಳಿಗೆ ನೀಡಲು ಕೋವಾಕ್ಸಿನ್ ಲಸಿಕೆಯನ್ನು ಅನುಮೋದಿಸಿದೆ. ತುರ್ತು ಸಂದರ್ಭದಲ್ಲಿ 12 ರಿಂದ 18 ವರ್ಷದ ಮಗುವಿಗೆ ಈ ಲಸಿಕೆಯನ್ನು (Vaccination) ನೀಡಬಹುದು. 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ನೀಡಲು ಡಿಜಿಸಿಐ ಅನುಮೋದನೆ ನೀಡಿದೆಯಾದರೂ, ಕೇಂದ್ರ ಸರ್ಕಾರವು 15 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಮಾತ್ರ ಲಸಿಕೆ ಡೋಸ್ ನೀಡಲು ನಿರ್ಧರಿಸಿದೆ. ಕೋವಿನ್ ಪೋರ್ಟಲ್‌ನಲ್ಲಿ (COWIN Portal) ಮಕ್ಕಳ ಲಸಿಕೆ ನೋಂದಣಿ ಜನವರಿ 1 ರಿಂದ ಪ್ರಾರಂಭವಾಗುತ್ತದೆ. 


COMMERCIAL BREAK
SCROLL TO CONTINUE READING

ಮಕ್ಕಳ ಲಸಿಕೆಗೆ ಅನುಮೋದನೆ : 
ದೇಶದಲ್ಲಿ ಓಮಿಕ್ರಾನ್  (Omicron) ಪ್ರಕರಣಗಳು ವೇಗವಾಗಿ ಹೆಚ್ಚುತ್ತಿದ್ದು, ಎಲ್ಲಾ ತಜ್ಞರು ಮಕ್ಕಳ ವ್ಯಾಕ್ಸಿನೇಷನ್ ಗೆ (Vaccination) ಹೆಚ್ಚಿನ ಒಟ್ಟು ನೀಡುತ್ತಿದ್ದಾರೆ. ಇದೀಗ ದೇಶದಲ್ಲಿ 15 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ನೀಡಲು ಸರ್ಕಾರ ನಿರ್ಧರಿಸಿದೆ. 


ಇದನ್ನೂ ಓದಿ : ಈ ರಾಜ್ಯಗಳಲ್ಲಿ ಮುಂದಿನ ಎರಡು ದಿನಗಳವರೆಗೆ ಶೀತ ಗಾಳಿಯೊಂದಿಗೆ ಸುರಿಯಲಿದೆ ಮಳೆ


ಭಾರತ ಸರ್ಕಾರದ ಸಿದ್ಧತೆ :
- ಜನವರಿ 1 ರಿಂದ CoWin ಪೋರ್ಟಲ್‌ನಲ್ಲಿ ಮಕ್ಕಳ ಲಸಿಕೆ ನೋಂದಣಿ ಪ್ರಾರಂಭವಾಗುತ್ತದೆ.
-ಈ ಸಮಯದಲ್ಲಿ, ವಿದ್ಯಾರ್ಥಿ ಗುರುತಿನ ಚೀಟಿಯಾಗಿ ಹತ್ತನೇ ತರಗತಿಯ ಐಡಿಯನ್ನು ಸೇರಿಸಲಾಗುತ್ತದೆ.
- ಜನವರಿ 3 ರಿಂದ ಮಕ್ಕಳಿಗೆ ಲಸಿಕೆ ಹಾಕುವ ಕಾರ್ಯ ಅಧಿಕೃತವಾಗಿ ಆರಂಭ.
- ಪ್ರಸ್ತುತ, ಭಾರತೀಯ ಮಕ್ಕಳಿಗೆ ಕೋವಾಕ್ಸಿನ್ (Covaxin) ಅನ್ನು ಹಾಕಲಾಗುತ್ತದೆ. 
- ಇದಕ್ಕಾಗಿ 28 ದಿನಗಳ ಅಂತರವನ್ನು ನಿಗದಿಪಡಿಸಲಾಗಿದೆ.


Precautionary Dose : 
- ಎಲ್ಲಾ ಫ್ರಂಟ್ ಲೈನ್ ವರ್ಕರ್ಸ್ ಮತ್ತು ಕೋವಿಡ್ ಯೋಧರು CoWin ನಲ್ಲಿ ನೋಂದಾಯಿಸಿಕೊಳ್ಳಬೇಕು.
- Precautionary Dose ತೆಗೆದುಕೊಳ್ಳುವವರಿಗೆ ಹಳೆಯ ಲಸಿಕೆಯನ್ನೇ ನೀಡಲಾಗುತ್ತದೆ . 
-ಈ ಡೋಸ್ ಕೂಡ ಉಚಿತವಾಗಿರುತ್ತದೆ. 


ಇದನ್ನೂ ಓದಿ : Viral Video: ವೈನ್ ಶಾಪ್‌ ಒಳಗೆ ನುಗ್ಗಿ, ಬಾಟಲಿ ತೆರೆದು ಮದ್ಯ ಸೇವಿಸಿದ ಕೋತಿ


ವಯಸ್ಸಾದವರಿಗೆ ಬೂಸ್ಟರ್ ಡೋಸ್ ವ್ಯವಸ್ಥೆ :
- ಹೊಸ ವರ್ಷದಲ್ಲಿ ನೋಂದಣಿ ಪ್ರಾರಂಭವಾಗುತ್ತದೆ 
- ಈ ಹಿಂದಿನಿಂತೆಯೇ ನಡೆಯಲಿದೆ ಪ್ರಕ್ರಿಯೆ  
- ಮೂರನೇ ಡೋಸ್‌ಗೆ, 9 ತಿಂಗಳ ಅಂತರವು ಅಗತ್ಯವಾಗಿರುತ್ತದೆ.


ನೀವು 60 ವರ್ಷ ವಯಸ್ಸಿನವರಾಗಿದ್ದು, ಎರಡೂ ಡೋಸ್‌ಗಳನ್ನು ತೆಗೆದುಕೊಂಡಿದ್ದರೆ, ಎರಡನೇ ಡೋಸ್‌ ಮತ್ತು ಮೂರನೇ ಅಂದರೆ ಬೂಸ್ಟರ್ ಡೋಸ್‌ನ ನಡುವಿನ ವ್ಯತ್ಯಾಸವು 9 ತಿಂಗಳುಗಳಿಗಿಂತ (39 ವಾರಗಳು) ಹೆಚ್ಚಾಗಿದ್ದರೆ ನೀವು ಅರ್ಹರಾಗುತ್ತೀರಿ . ನೋಂದಣಿಯೊಂದಿಗೆ, Comordibities ಪ್ರಮಾಣಪತ್ರವನ್ನು ನೀಡಬೇಕಾಗುತ್ತದೆ. ಇದಕ್ಕೆ ಸಂಬಂಧಿಸಿದ ಆಯ್ಕೆಯು CoWin ಪೋರ್ಟಲ್‌ನಲ್ಲಿಯೂ ಇರುತ್ತದೆ.


ನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.