ನವದೆಹಲಿ: ಬಿಎಸ್ಪಿಯ ಮಾಯಾವತಿ ಲಕ್ನೋ ಮತ್ತು ನೋಯ್ಡಾದಲ್ಲಿ ಆನೆ ಪ್ರತಿಮೆಗಳ ನಿರ್ಮಾಣಕ್ಕಾಗಿ ಖರ್ಚು ಮಾಡಿದ ಸಾರ್ವಜನಿಕ ಹಣವನ್ನು ಮರುಪಾವತಿಸಬೇಕೆಂದು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ.


COMMERCIAL BREAK
SCROLL TO CONTINUE READING

ಸಾರ್ವಜನಿಕ ಹಣವನ್ನು ಸ್ವಂತ ಪ್ರತಿಮೆಗಳನ್ನು ನಿರ್ಮಿಸುವುದಕ್ಕಾಗಿ ಮತ್ತು ಪಕ್ಷದ ಪ್ರಚಾರಕ್ಕಾಗಿ ಬಳಸುವಂತಿಲ್ಲ ಎಂದು ವಾದಿಸಿ ಸುಪ್ರೀಂಕೋರ್ಟ್ ನಲ್ಲಿ ವಕೀಲರು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಯ್ ನೀವು ಸಾರ್ವಜನಿಕ ಹಣದಲ್ಲಿ ತಮ್ಮ ಮೂರ್ತಿಯನ್ನು ಮತ್ತು ತಮ್ಮ ಪಕ್ಷದ ಚಿನ್ಹೆಯನ್ನು ನಿರ್ಮಿಸಿದ್ದಿರಿ, ಆದ್ದರಿಂದ ಇದನ್ನು ಮರುಪಾವತಿಸಬೇಕೆಂದು ಅವರು ಅಭಿಪ್ರಾಯಪಟ್ಟರು.ನ್ಯಾಯಮೂರ್ತಿ ದೀಪಕ್ ಗುಪ್ತಾ ಮತ್ತು ಸಂಜೀವ್ ಖನ್ನಾ ಅವರನ್ನೊಳಗೊಂಡ ಪೀಠವು ಏಪ್ರಿಲ್ 2 ರಂದು ಮುಂದಿನ ವಿಚಾರಣೆ ನಡೆಸಲಿದೆ ಎನ್ನಲಾಗಿದೆ.


ಸದ್ಯ ನ್ಯಾಯಾಲಯವು ತಾತ್ಕಾಲಿಕ ಅಭಿಪ್ರಾಯವನ್ನು ತಿಳಿಸಿದ್ದು ಇದಕ್ಕೆ ಸ್ವಲ್ಪ ಸಮಯ ಹಿಡಿಯುತ್ತದೆ. ಆದ್ದರಿಂದ ಈ ವಿಚಾರಣೆಯನ್ನು ಎಪ್ರಿಲ್ 2 ರಂದು ನಡೆಸಲಿದೆ ಎಂದು ಅವರು ತಿಳಿಸಿದರು.