ಪತ್ರಕರ್ತೆ ಅತ್ಯಾಚಾರ ಆರೋಪಕ್ಕೆ ಸಂಬಂಧ `ಸಮ್ಮತ`ವಾದದ್ದು ಎಂದ ಅಕ್ಬರ್
ಮಾಜಿ ಸಚಿವ ಎಂ.ಜೆ. ಅಕ್ಬರ್ ಅವರ ವಿರುದ್ಧ ಯುಎಸ್ ಮೂಲದ ಪತ್ರಕರ್ತೆ ಮಾಡಿರುವ ಅತ್ಯಾಚಾರ ಆರೋಪಗಳು ಸುಳ್ಳು ಮತ್ತು ಇಬ್ಬರ ನಡುವಿನ ಸಂಬಂಧವು ಸಮ್ಮತವಾದದ್ದು ಎಂದು ಹೇಳಿದ್ದಾರೆ.
ನವದೆಹಲಿ: ಮಾಜಿ ಸಚಿವ ಎಂ.ಜೆ. ಅಕ್ಬರ್ ಅವರ ವಿರುದ್ಧ ಯುಎಸ್ ಮೂಲದ ಪತ್ರಕರ್ತೆ ಮಾಡಿರುವ ಅತ್ಯಾಚಾರ ಆರೋಪಗಳು ಸುಳ್ಳು ಮತ್ತು ಇಬ್ಬರ ನಡುವಿನ ಸಂಬಂಧವು ಸಮ್ಮತವಾದದ್ದು ಎಂದು ಹೇಳಿದ್ದಾರೆ.
ದಿ ವಾಷಿಂಗ್ಟನ್ ಪೋಸ್ಟ್ ನಲ್ಲಿ ಪತ್ರಕರ್ತೆ ಪಲ್ಲವಿ ಗೊಗೊಯ್ ಎರಡು ದಶಕಗಳ ಹಿಂದೆ ತಮ್ಮನ್ನು ಅಕ್ಬರ್ ಅವರು ಅತ್ಯಾಚಾರ ಮಾಡಿದ್ದರು ಎಂದು ಆರೋಪಿಸಿದ್ದರು.ಈಗ ಈ ಘಟನೆಗೆ ಸಂಬಂಧಿಸಿದಂತೆ ಎಎನ್ಐಗೆ ಪ್ರತಿಕ್ರಿಯಿಸಿರುವ ಎಂ.ಜೆ.ಅಕ್ಬರ್ "ಅಕ್ಟೋಬರ್ 29 ರಂದು, ವಾಷಿಂಗ್ಟನ್ ಪೋಸ್ಟ್ ನ್ನು ನನ್ನ ವಕೀಲರಿಗೆ ರವಾನಿಸಲಾಗಿದೆ.ಇದರಲ್ಲಿರುವ ಆರೋಪಗಳ್ಳು ಸುಳ್ಳು ಅವುಗಳನ್ನು ನಿರಾಕರಿಸಲಾಗಿದೆ" ಎಂದು ಅಕ್ಬರ್ ಸುದ್ದಿ ಸಂಸ್ಥೆ ANI ಗೆ ತಿಳಿಸಿದರು.
"1994 ರ ಸುಮಾರಿಗೆ,ಮಿಸ್ ಪಲ್ಲವಿ ಗೊಗೊಯ್ ಮತ್ತು ನಾನು ಹಲವಾರು ತಿಂಗಳುಗಳ ಕಾಲ ಒಮ್ಮತದ ಸಂಬಂಧವನ್ನು ಹೊಂದಿದ್ದೆವು.ಈ ಸಂಬಂಧವು ಸುದ್ದಿಗೆ ಕಾರಣವಾಗಿ ನಂತರ ನನ್ನ ಜೀವನದಲ್ಲಿ ಬಿರಕನ್ನು ಮೂಡಿಸಿ ನಂತರ ಈ ಸಂಬಂಧವು ಕೊನೆಗೊಂಡಿತು ಎಂದು ಅಕ್ಬರ್ ಹೇಳಿದರು.
ಇದೆ ವೇಳೆ ಈಗ ಪತಿ ಅಕ್ಬರ್ ಬೆಂಬಲಕ್ಕೆ ನಿಂತಿರುವ ಪತ್ನಿ "20 ವರ್ಷಗಳ ಹಿಂದೆ, ಪಲ್ಲವಿ ಗೊಗೊಯ್ ನಮ್ಮ ಮನೆಯಲ್ಲಿ ಅತೃಪ್ತಿ ಮತ್ತು ಬಿರುಕನ್ನು ಉಂಟುಮಾಡಿದೆ. ಆಕೆ ನನ್ನ ಸಮ್ಮುಖದಲ್ಲಿಯೇ ನನ್ನ ಗಂಡನ ಬಗ್ಗೆ ಒಲವು ತೋರಿಸಿಕೊಳ್ಳುವುದು ಮತ್ತು ಕರೆಗಳನ್ನು ಮಾಡುವುದನ್ನು ನಾನು ನೋಡಿದ್ದೇನೆ, ಇದರಿಂದ ಇಡೀ ಕುಟುಂಬದಲ್ಲಿ ಬಿರುಕು ಮೂಡಿತು ಎಂದು ಅಕ್ಬರ್ ಪತ್ನಿ ಮಲ್ಲಿಕಾ ಹೇಳಿದರು.