ಬಿಜೆಪಿ ಜಯಭೇರಿಗೆ ಸಿಹಿ ಹಂಚಿದ್ದೇ ತಪ್ಪಾಯಿತು.! ತನ್ನವರಿಂದಲೇ ನಡೆಯಿತು ಮುಸ್ಲಿಂ ಯುವಕನ ಹತ್ಯೆ
ಬಿಜೆಪಿ ಬೆಂಬಲಿಗ ಬಾಬರ್ ಅವರ ಮೃತದೇಹವನ್ನು ಭಾನುವಾರ ಗ್ರಾಮಕ್ಕೆ ಕರೆತಂದಾಗ, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನವದೆಹಲಿ : ಉತ್ತರ ಪ್ರದೇಶದ (Uttar Pradesh) ಕುಶಿನಗರದ (Kushinagar) ರಾಮ್‌ಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯ ಕಟ್‌ಘರ್ಹಿ ಗ್ರಾಮದಲ್ಲಿ ಮುಸ್ಲಿಂ ಯುವಕನ ಹತ್ಯೆಯಾಗಿದೆ. ಹತ್ಯೆಯಾದ ಯುವಕನನ್ನು ಬಾಬರ್ (Babar) ಎಂದು ಗುರುತಿಸಲಾಗಿದೆ. ಬಾಬರ್ ಬಿಜೆಪಿ (BJP) ಪರ ಪ್ರಚಾರ ಮಾಡಿದ್ದು, ರಾಜ್ಯದಲ್ಲಿ ಬಿಜೆಪಿ ಸರ್ಕಾರ (BJP Government)ರಚನೆಯಾದಾಗ ಸಿಹಿ ಹಂಚಿದ್ದ. ಇದೇ ಕಾರಣಕ್ಕೆ ಬಾಬರ್ ನನ್ನು ತೀವ್ರವಾಗಿ ಥಳಿಸಲಾಗಿದೆ ಎನ್ನಲಾಗಿದೆ.
ಬಾಬರ್ ಮೃತದೇಹ ಕಂಡು ಗ್ರಾಮಸ್ಥರ ಅಕ್ರೋಶ :
ಈ ಘಟನೆ ಮಾರ್ಚ್ 20 ರಂದು ನಡೆದಿದೆ. ಬಿಜೆಪಿ ಬೆಂಬಲಿಗ ಬಾಬರ್ (BJP Supporter Babar) ಅವರ ಮೃತದೇಹವನ್ನು ಭಾನುವಾರ ಗ್ರಾಮಕ್ಕೆ ಕರೆತಂದಾಗ, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೃತದೇಹದ ಅಂತ್ಯ ಸಂಸ್ಕಾರ ನಡೆಸಲು ಕೂಡಾ ಕುಟುಂಬಸ್ಥರು ನಿರಾಕರಿಸಿದ್ದರು. ನಂತರ ಸ್ಥಳಕ್ಕೆ ಸ್ಥಳೀಯ ಆಡಳಿತ, ಸ್ಥಳೀಯ ಶಾಸಕರು ಬರಬೇಕಾಯಿತು.
ಇದನ್ನೂ ಓದಿ : Nationwide Strike: ಸರ್ಕಾರದ ನೀತಿಗಳನ್ನು ವಿರೋಧಿಸಿ ಇಂದು-ನಾಳೆ ಭಾರತ್ ಬಂದ್, 10 ಪ್ರಮುಖ ಅಂಶಗಳು
ಬಿಜೆಪಿ ಬೆಂಬಲಿಗ ಬಾಬರ್ ಹತ್ಯೆ :
ಬಾಬರ್ ಬಿಜೆಪಿ (BJP) ಪರ ಪ್ರಚಾರ ಮಾಡುತ್ತಿದ್ದರಿಂದ, ಅಕ್ಕಪಕ್ಕದಲ್ಲಿ ವಾಸವಿರುವ ಸಮುದಾಯದವರು ಸಿಟ್ಟಿಗೆದ್ದಿದ್ದಾರೆ ಎಂದು ಮೃತ ಬಾಬರ್ ಸಂಬಂಧಿಕರು ಆರೋಪಿಸಿದ್ದಾರೆ. ಈ ಕಾರಣದಿಂದಾಗಿ ಬಾಬರ್ ನನ್ನು (Babar) ತೀವ್ರವಾಗಿ ಥಳಿಸಲಾಗಿದೆ ಎನ್ನಲಾಗಿದೆ. ಇದಾದ ನಂತರ ಗಾಯಗೊಂಡಿರುವ ಬಾಬರ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಬಾಬರ್ ಮೃತಪಟ್ಟಿದ್ದಾರೆ (Muslim BJP Supporter Killed).
IMD Alert! ಮುಂದಿನ 5 ದಿನಗಳು ಆಕಾಶದಿಂದ ಬೆಂಕಿಯ ಸುರಿಮಳೆ, ಈ ರಾಜ್ಯಗಳಿಗೆ ಅಲರ್ಟ್ ಘೋಷಣೆ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.