ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಆನ್‌ಲೈನ್ ಕಿರಾಣಿ ಸೇವೆಯನ್ನು ಪ್ರಾರಂಭಿಸಿದೆ .ಆ ಮೂಲಕ ಅಮೆಜಾನ್.ಕಾಂನ ಸ್ಥಳೀಯ ಘಟಕ ಮತ್ತು ವಾಲ್ಮಾರ್ಟ್ ಇಂಕ್‌ನ ಫ್ಲಿಪ್‌ಕಾರ್ಟ್ ಗೆ ಭಾರತೀಯ ಮಾರುಕಟ್ಟೆಯಲ್ಲಿ ಪ್ರತಿಸ್ಪರ್ಧಿಸುವ ಗುರಿಯನ್ನು ಹೊಂದಿದೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಜಿಯೋಮಾರ್ಟ್ ದೇಶಾದ್ಯಂತ 200 ಕ್ಕೂ ಹೆಚ್ಚು ಪಟ್ಟಣಗಳಲ್ಲಿ ದಿನಸಿ ಸಾಮಗ್ರಿಗಳನ್ನು ತಲುಪಿಸಲಿದೆ ಎಂದು ಭಾರತೀಯ ಸಂಘಟನೆಯ ದಿನಸಿ ಚಿಲ್ಲರೆ ಮುಖ್ಯ ಕಾರ್ಯನಿರ್ವಾಹಕ ದಾಮೋದರ್ ಮಾಲ್ ಶನಿವಾರ ತಡರಾತ್ರಿ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.


ಕಂಪನಿಯ ಡಿಜಿಟಲ್ ಘಟಕವಾದ ಜಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ ಶೇ 9.99 ರಷ್ಟು ಫೇಸ್‌ಬುಕ್ ಇಂಕ್ 5.7 ಬಿಲಿಯನ್ ಡಾಲರ್ ಖರ್ಚು ಮಾಡಲಿದೆ ಎಂದು ಘೋಷಿಸಿದ ಕೆಲವೇ ದಿನಗಳ ನಂತರ, ರಿಲಯನ್ಸ್ ಕಳೆದ ತಿಂಗಳ ಕೊನೆಯಲ್ಲಿ ಮುಂಬಯಿಯ ಆಯ್ದ ಪ್ರದೇಶಗಳಲ್ಲಿ ಜಿಯೋಮಾರ್ಟ್ ಪೈಲಟ್ ಕಾರ್ಯವನ್ನು ಪ್ರಾರಂಭಿಸಿತು.


ಆ ಪಾಲುದಾರಿಕೆಯು ಫೇಸ್‌ಬುಕ್‌ನ ವಾಟ್ಸಾಪ್ ಮೆಸೇಜಿಂಗ್ ಸೇವೆಗಾಗಿ ಭಾರತದ 40 ಕೋಟಿಬಳಕೆದಾರರ ನೆಲೆಯನ್ನು ಬಂಡವಾಳ ಮಾಡಿಕೊಳ್ಳುವ ಮೂಲಕ ಭಾರತದ ದಿನಸಿ ಮತ್ತು ಸಣ್ಣ ಉದ್ಯಮಗಳಿಗೆ ರಿಲಯನ್ಸ್ ಸೇವೆಯನ್ನು ಹೊರತರಲು ಸಹಾಯ ಮಾಡುತ್ತದೆ.