ನವದೆಹಲಿ: ಸಡಗರದ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ದೇಶದ ಪ್ರತಿಷ್ಟಿತ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ 8 ಹೊಸ ಆಫರ್ ಗಳನ್ನು ಘೋಷಣೆ ಮಾಡಿದೆ. 


COMMERCIAL BREAK
SCROLL TO CONTINUE READING

ದೀಪಾವಳಿ ಧಮಾಕ ಆಫರ್ ಭಾಗವಾಗಿ ಜಿಯೋ 1699 ರೂ.ಗಳ ವಾರ್ಷಿಕ ರೀಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದ್ದು, ಈ ಪ್ಲಾನ್ ನಲ್ಲಿ ಶೇ.100ರಷ್ಟು ಕ್ಯಾಶ್ ಬ್ಯಾಕ್, ಜಿಯೋಫೋನ್ ಗಿಫ್ಟ್ ಕಾರ್ಡ್ ಸೇರಿದಂತೆ ಸಾಕಷ್ಟು ಅಚ್ಚರಿ ಕೊಡುಗೆಗಳನ್ನು ನೀಡಿದೆ. 


1699 ರೂ. ವಾರ್ಷಿಕ ಪ್ಲಾನ್
ಜಿಯೋ ಒಂದು ವರ್ಷ ಅವಧಿಯ ಹೊಸ ಪ್ಲಾನ್ ಬಿಡುಗಡೆ ಮಾಡಿದ್ದು, ಇದರಲ್ಲಿ ಅನಿಯಮಿತ ಡಾಟಾ ಮತ್ತು ಕರೆ ಸೌಲಭ್ಯ ದೊರೆಯಲಿದೆ. ಬಳಕೆದಾರರಿಗೆ 365 ದಿನಗಳಿಗೆ 547.5 ಜಿಬಿ ಡಾಟಾ ಸೌಲಭ್ಯ ದೊರೆಯಲಿದೆ. 


ಶೇ.100 ಕ್ಯಾಶ್ ಬ್ಯಾಕ್ ಆಫರ್ 
ಆಯ್ದ ಪ್ರಿಪೇಯ್ಡ್ ಯೋಜನೆಗಳಲ್ಲಿ ರೂ 149 ಮತ್ತು ಅದಕ್ಕಿಂತ ಹೆಚ್ಚಿನ ಹೊಸ ಮತ್ತು ಈಗಾಗಲೇ ಇರುವ ಗ್ರಾಹಕರಿಗೆ ರಿಲಯನ್ಸ್ ಡಿಜಿಟಲ್ ಕೂಪನ್ಗಳ ರೂಪದಲ್ಲಿ ಶೇ.100ರಷ್ಟು ಕ್ಯಾಶ್ ಬ್ಯಾಕ್ ನೀಡಲಿದೆ.


ಶೇ.2200 ಇನ್'ಸ್ಟಾಂಟ್ ಆಫರ್
ಅಷ್ಟೇ ಅಲ್ಲದೆ, 50 ರೂ.ಗಳ 44 ವೋಚರ್ ಗಳ ಮೂಲಕ 2200 ರೂ. ಕ್ಯಾಶ್ ಬ್ಯಾಕ್ ದೊರೆಯಲಿದೆ. ಇದು MyJio Appನಲ್ಲಿ ರೀಚಾರ್ಜ್ ಮಾಡಲು ಗ್ರಾಹಕರು ಬಳಸಬಹುದು. 


ವಾಲೆಟ್ ಪಾರ್ಟ್ನರ್ ಆಫರ್
ಜಿಯೊ ರೀಚಾರ್ಜ್ ಸಮಯದಲ್ಲಿ ರೂ. 300 ವರೆಗೆ ತ್ವರಿತ ಕ್ಯಾಶ್ ಬ್ಯಾಕ್ ನೀಡಲು ಪ್ರಮುಖ ಡಿಜಿಟಲ್ ವ್ಯಾಲೆಟ್ನೊಂದಿಗೆ ಸಹಭಾಗಿತ್ವವನ್ನು ಹೊಂದಿದೆ.


ಜಿಯೋಫೋನ್ ಗಿಫ್ಟ್ ಕಾರ್ಡ್
ಈ ಪ್ಲಾನ್ ಅಡಿಯಲ್ಲಿ ನೀವು 1095ರೂ. ಪಾವತಿಸಿ ಜಿಯೋಫೋನ್ ಗಿಫ್ಟ್ ಕಾರ್ಡ್ ಮತ್ತು ಮಾನ್ಸೂನ್ ಹಂಗಮಾ ಪ್ಲಾನ್ ಅಡಿಯಲ್ಲಿ 6 ತಿಂಗಳ ಅನಿಯಮಿತ ಧ್ವನಿ ಮತ್ತು ಡಾಟಾ ಪ್ಯಾಕ್ ಪಡೆಯಬಹುದು.


ಜಿಯೋಫೋನ್ 2
ಪೇಟಿಎಂ ಮೂಲಕ 2,999 ರೂ. ಮೌಲ್ಯದ JioPhone 2 ಖರೀದಿಸುವವರಿಗೆ 200 ರೂ. ಕ್ಯಾಶ್ ಬ್ಯಾಕ್ ದೊರೆಯಲಿದೆ.


ಜಿಯೋಫಿ(JioFi)
ಲ್ಯಾಪ್ ಟಾಪ್ ಖರೀದಿಯ ಮೇಲೆ ಗ್ರಾಹಕರು 3000 ರೂ. ಮೌಲ್ಯದ JioFi ಮತ್ತು ಡೇಟಾ ಸೌಲಭ್ಯವನ್ನು ಪಡೆಯಬಹುದು.


LG ಸ್ಮಾರ್ಟ್ ಟಿವಿ ಜೊತೆ JioFi
LG ಸ್ಮಾರ್ಟ್ ಟಿವಿ ಖರೀದಿಸುವ ಗ್ರಾಹಕರು 2000 ರೂ. ಮೌಲ್ಯದ JioFi ಮತ್ತು ಡಾಟಾ ಲಾಭಗಳನ್ನು ಪಡೆಯಬಹುದು.