ರಿಲಯನ್ಸ್ ಜಿಯೋ ತಂದಿದೆ JioFi ಎಕ್ಸ್ ಚೇಂಜ್ ಆಫರ್, ಪಡೆಯಿರಿ 2,200ರೂ. ಕ್ಯಾಶ್‍ಬ್ಯಾಕ್!
ಗ್ರಾಹಕರು ತಮ್ಮ ಹಳೆಯ ಜಿಯೋ ಅಲ್ಲದ ಮೋಡಮ್ ಅಥವಾ ಡಾಂಗಲ್ ಅನ್ನು ಬದಲಾವಣೆ ಮಾಡಿಕೊಳ್ಳುವ ಮೂಲಕ JioFi 4G hotspot ಸಾಧನವನ್ನು ಕೇವಲ 999 ರೂ.ಗಳಿಗೆ ಪಡೆಯಬಹುದು.
ಮುಂಬೈ: ಪ್ರಸಿದ್ಧ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ಹೊಸ ಆಫರ್ ಲಾಂಚ್ ಮಾಡಿದ್ದು, ವೈಫೈ ಡಾಂಗಲ್ ಖರೀದಿಸಲು ಬಯಸುವ ಗ್ರಾಹಕರಿಗೆ ಜಿಯೋಫೈ ಎಕ್ಸ್ ಚೇಂಜ್ ಆಫರ್ ನೀಡಲು ಮುಂದಾಗಿದೆ.
ಈ ಕೊಡುಗೆಯಲ್ಲಿ ಗ್ರಾಹಕರು ತಮ್ಮ ಹಳೆಯ ಜಿಯೋ ಅಲ್ಲದ ಮೋಡಮ್ ಅಥವಾ ಡಾಂಗಲ್ ಅನ್ನು ಬದಲಾವಣೆ ಮಾಡಿಕೊಳ್ಳುವ ಮೂಲಕ JioFi 4G hotspot ಸಾಧನವನ್ನು ಕೇವಲ 999 ರೂ.ಗಳಿಗೆ ಪಡೆಯಬಹುದು. ಇದು ಸೀಮಿತ ಅವಧಿಯ ಕೊಡುಗೆಯಾಗಿದ್ದು, ಎಲ್ಲಾ ರಿಲಯನ್ಸ್ ಜಿಯೋ ಮಳಿಗೆಗಳಲ್ಲಿ ಈ ಕೊಡುಗೆ ಲಭ್ಯವಿದೆ.
ಈ ಹೊಸ ಕೊಡುಗೆಯ ಪ್ರಕಾರ, ಜಿಯೋ ಬಳಕೆದಾರರು 2,200 ರೂಪಾಯಿ ಮೌಲ್ಯದ ಕ್ಯಾಶ್‍ಬ್ಯಾಕ್ ಪಡೆಯಬಹುದು. ಕೇವಲ 198 ರೂ. ಅಥವಾ 299 ರೂ.ಗಳ ರೀಚಾರ್ಜ್ ಮಾಡಿಸುವ ಮೂಲಕ ಗ್ರಾಹಕರು ಈ ಕ್ಯಾಶ್‍ಬ್ಯಾಕ್ ಪಡೆಯಬಹುದು.
ಈ ರೀಚಾರ್ಜ್ ಮೊತ್ತವನ್ನು SIM ಸಕ್ರಿಯಗೊಳಿಸುವಿಕೆಗಾಗಿಪಾವತಿಸಬೇಕಾಗುತ್ತದೆ. ರೀಚಾರ್ಜ್ ಮಾಡಿಸಿದ ಕೆಲವೇ ಕ್ಷಣಗಳಲ್ಲಿ 2,200 ರೂ. ಮೊತ್ತದ 50ರೂ. ಮೌಲ್ಯದ ಒಟ್ಟು 44 ವೋಚರ್ಗಳನ್ನು ಜಿಯೋ ನಿಮ್ಮ ಖಾತೆಗೆ ವರ್ಗಾಯಿಸುತ್ತದೆ. ಆದರೆ, ವೋಚರ್'ಗಳ ಅವಧಿ ಯಾವಾಗ ಮುಗಿಯುತ್ತದೆ ಎಂಬುದರ ಮಾಹಿತಿ ಲಭ್ಯವಾಗಿಲ್ಲ.
JioFi ಕೊಡುಗೆಯನ್ನು ಪಡೆಯುವುದು ಹೇಗೆ?
1. ಮೊದಲು 999ರೂ. ನೀಡಿ JioFi ಖರೀದಿಸಿ.
2. ನಂತರ 198ರೂ. ಅಥವಾ 299 ರೂ.+99 ರೂ.(ಜಿಯೋ ಪ್ರೈಮ್) ಪಾವತಿಸಿ ಸಿಮ್ ಆಕ್ಟಿವೇಟ್ ಮಾಡಿಸಿ.
3. ನಿಮ್ಮ ಹಳೆಯ NON-JIO ಡಾಂಗಲ್ ಅಥವಾ ಮೋಡೆಮ್ ಅನ್ನು ಯಾವುದೇ JioStore / Reliance Digital Store ನಲ್ಲಿ ಹಿಂತಿರುಗಿಸಿ.
4. ಅಲ್ಲಿ ನಿಮ್ಮ ಹಳೆಯ ಜಿಯೋ ಅಲ್ಲದ ಡೋಂಗಲ್ ಅಥವಾ ಮೋಡೆಮ್ ಸೀರಿಯಲ್ ಸಂಖ್ಯೆ ಮತ್ತು ನಿಮ್ಮ ಹೊಸ ಜಿಯೋಫೈ ಎಂಎಸ್ಐಎಸ್ಡಿಎನ್ ಸಂಖ್ಯೆ ಒದಗಿಸಿ.
5. ಇದಾದ ಕೂಡಲೇ ನಿಮ್ಮ MyJio ಖಾತೆಗೆ ಕ್ಯಾಶ್‍ಬ್ಯಾಕ್ ವೋಚರ್'ಗಳು ಕ್ರೆಡಿಟ್ ಆಗುತ್ತದೆ.
ಸೂಚನೆ: 2,200 ರೂ. ಮೊತ್ತದ 50ರೂ. ಮೌಲ್ಯದ ಒಟ್ಟು 44 ವೋಚರ್ಗಳನ್ನು ಜಿಯೋ ನಿಮ್ಮ ಖಾತೆಗೆ ವರ್ಗಾಯಿಸಲಾಗುತ್ತದೆ. 198 ರೂ. ಅಥವಾ 299 ರೂ.ಗಳ ರೀಚಾರ್ಜ್ ಮಾಡಿಸಿದರೆ ಮಾತ್ರ ಗ್ರಾಹಕರು ಈ ಕ್ಯಾಶ್‍ಬ್ಯಾಕ್ ಪಡೆಯಬಹುದು.