ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ 43ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ರಿಲಿಯನ್ಸ್ ಜಿಯೋ, ಜಿಯೋ ಗ್ಲಾಸ್ ಬಿಡುಗಡೆ ಮಾಡಿದೆ. ಜಿಯೋ ಗ್ಲಾಸ್ ಒಂದು ಮಿಕ್ಸೆಡ್ ರಿಯಾಲಿಟಿ ಸ್ಮಾರ್ಟ್ ಗ್ಲಾಸ್ ಆಗಿದ್ದು, ಇದರೊಂದಿಗೆ ವಿಡಿಯೋ ಕಾಲ್ ಸೌಲಭ್ಯ ಒದಗಿಸಲಾಗಿದೆ. ಇದರಲ್ಲಿ ನಿಮಗೆ ವರ್ಚ್ಯುವಲ್ ಅಸಿಸ್ಟೆಂಟ್ ಸಪೋರ್ಟ್ ಕೂಡ ಸಿಗಲಿದೆ. ಕಂಪನಿ ಇದನ್ನು ವಿಶೇಷವಾಗಿ ಹೊಲೋಗ್ರಾಂ ಕಂಟೆಂಟ್ ಗಾಗಿ ವಿನ್ಯಾಸಗೊಳಿಸಿದೆ. ಕೇಬಲ್ ಬಳಸಿ ಇದನ್ನು ನೀವು ನಿಮ್ಮ ಸ್ಮಾರ್ಟ್ ಫೋನ್ ಜೊತೆಗೆ ಕನೆಕ್ಟ್ ಮಾಡಬಹುದು. ಈ ಡಿವೈಸ್ ತೂಕ 75ಗ್ರಾಮ್ ಗಳಷ್ಟಾಗಿದೆ.


COMMERCIAL BREAK
SCROLL TO CONTINUE READING

Jio Glass ವೈಶಿಷ್ಟ್ಯಗಳೇನು?
ವಾರ್ಷಿಕ ಸಭೆಯಲ್ಲಿ ಕಂಪನಿ ಈ ಉಪಕರಣದ ಡೆಮೋ ಕೂಡ ಪ್ರಸ್ತುತಪಡಿಸಿದೆ. ಇದರಲ್ಲಿ ನೀವು ಮಾತುಗಳಿಂದ ಇನ್ಸ್ತ್ರಕ್ಶನ್ ನೀಡುವ ಮೂಲಕ ಏಕಕಾಲಕ್ಕೆ ಇಬ್ಬರ ಜೊತೆ ವಿಡಿಯೋ ಕಾಲಿಂಗ್ ನಡೆಸಬಹುದು. ಬಳಕೆದಾರರಿಗೆ ಹೈ ಕ್ವಾಲಿಟಿ ವಿಡಿಯೋ ಎಕ್ಸ್ಪೀರಿಯೆನ್ಸ್ ನೀಡಲು ಕಂಪನಿ ಸಾಕಷ್ಟು ಪ್ರಯತ್ನಗಳನ್ನು ಮಾಡಿದೆ. ಇದು 3D ಹೊಲೋಗ್ರಾಫಿಕ್ ವಿಡಿಯೋ ಕಾಲ್ ಸಪೋರ್ಟ್ ನೊಂದಿಗೆ ಸಿಗುತ್ತದೆ. ಅಂದರೆ, ವಿಡಿಯೋ ಕಾಲ್ ವೇಳೆ ನೀವು ನಿಮ್ಮ ಸಂಗಾತಿಯನ್ನು  3D ರೂಪದಲ್ಲಿ ನೋಡಬಹುದು. ಈ ಉಪಕರಣ Jio Glass 25 ಅಪ್ಲಿಕೇಶನ್ ಸಪೋರ್ಟ್ ಮಾಡುತ್ತದೆ.


ವಿಡಿಯೋ ಕಾನ್ಫರೆನ್ಸಿಂಗ್ ಆಪ್ JioMeet
43ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ JioMeet ಕುರಿತು ಮಾತನಾಡಿರುವ ಇಷಾ ಅಂಬಾನಿ, ಇದೊಂದು ಅತ್ಯಂತ ಅಗ್ಗದ ಹಾಗೂ ಅತ್ಯಂತ ಸುರಕ್ಷಿತ ವಿಡಿಯೋ ಕಾನ್ಫರೆನ್ಸಿಂಗ್ ಆಪ್ ಆಗಿದೆ ಎಂದು ಹೇಳಿದ್ದಾರೆ. ನಿಜ ಜೀವನದ ಅವಶ್ಯಕತೆಗಳಿಗೆ ಅನುಗುಣವಾಗಿ ಇದನ್ನು ವಿನಾಸಗೊಳಿಸಲಾಗಿದೆ ಎಂದು ಇಷಾ ಹೇಳಿದ್ದಾರೆ. ಆಪ್ ಕುರಿತು ಮಾತನಾಡಿರುವ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಇದುವರೆಗೆ ಸುಮಾರು 50 ಲಕ್ಷಕ್ಕೂ ಅಧಿಕ ಜನರು ಈ ಆಪ್ ಡೌನ್ಲೋಡ್ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆ ಮಾಡಲಾಗಿರುವ JioMeet ಒಂದು ಕ್ಲೌಡ್ ಆಧಾರಿತ ವಿಡಿಯೋ ಕಾನ್ಫರೆನ್ಸಿಂಗ್ ಆಪ್ ಆಗಿದೆ.


AGM ಸಭೆಯಲ್ಲಿ JioTV+ ಅನ್ನು ಕೂಡ ಅನಾವರಣಗೊಳಿಸಲಾಗಿದೆ. ಜಿಯೋ ಬಿಡುಗಡೆಗೊಳಿಸಿರುವ ಈ ಸೇವೆ ಬಳಕೆದಾರರ TV ವೀಕ್ಷಣೆಯ ಅನುಭವ ಬದಲಾಯಿಸಲಿದೆ. ಇದು ವಿಶಿಷ್ಟ ತಂತ್ರಜ್ಞಾನದ ಮೇಲೆ ಕಾರ್ಯನಿರ್ವಹಿಸಲಿದೆ. ಇದರಲ್ಲಿ ನೀಡಲಾಗಿರುವ ರಿಮೋಟ್ ಬಳಸಿ ನೀವು ನಿಮ್ಮ ಫೆವರೆಟ್ ಕಂಟೆಂಟ್ ಆಯ್ಕೆ ಮಾಡಬಹುದಾಗಿದೆ. ಇದರಲ್ಲಿ ಪ್ರತಿಯೊಂದು ಜಾನರ್ ಕಾರ್ಯಕ್ರಮಗಳು ಸಿಗಲಿವೆ ಹಾಗೂ ವೈಸ್ ಕಮಾಂಡ್ ನೀಡಿ ಕೂಡ ನೀವು ಕಂಟೆಂಟ್ ಅಕ್ಸೆಸ್ ಮಾಡಬಹುದು.