Remdesivir is not effective in treating COVID-19 patients: ಕರೋನಾ ಸಾಂಕ್ರಾಮಿಕಕ್ಕೆ ಇನ್ನೂ ಯಾವುದೇ ನಿಖರವಾದ ಚಿಕಿತ್ಸೆ ಪತ್ತೆಯಾಗಿಲ್ಲ. ಮೊದಲಿಗೆ ತೀವ್ರ ಅನಾರೋಗ್ಯದಿಂದ ಬಳಸುತ್ತಿರುವ ಕರೋನಾ ರೋಗಿಗಳಿಗೆ ಪ್ಲಾಸ್ಮಾ ಚಿಕಿತ್ಸೆಯನ್ನು ಪರಿಣಾಮಕಾರಿ ಎಂದು ಹೇಳಲಾಗುತ್ತಿತ್ತು. ಆದರೆ   ಕೋವಿಡ್ -19 ಚಿಕಿತ್ಸೆಗೆ ಪ್ಲಾಸ್ಮಾ ಚಿಕಿತ್ಸೆಯನ್ನು ಅವೈಜ್ಞಾನಿಕ ಬಳಕೆ ಎಂದು ಹಲವರು ಟೀಕಿಸಿದ್ದರು. ಬಳಿಕ ಕರೋನಾ ರೋಗಿಗಳ ಚಿಕಿತ್ಸೆಯಲ್ಲಿ ಪ್ಲಾಸ್ಮಾ ಥೆರಪಿ ಪ್ರಯೋಜನಕಾರಿ ಎಂದು ಸಾಬೀತಾಗಿಲ್ಲದ ಹಿನ್ನಲೆಯಲ್ಲಿ ಪ್ರೋಟೋಕಾಲ್‌ನಿಂದ ಪ್ಲಾಸ್ಮಾ ಥೆರಪಿ ತೆಗೆದುಹಾಕಲಾಗಿದೆ. COVID-19 ಗಾಗಿ ಐಸಿಎಂಆರ್-ನ್ಯಾಷನಲ್ ಟಾಸ್ಕ್ ಫೋರ್ಸ್‌ನ ಸಲಹೆಯ ಮೇರೆಗೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇದೀಗ ಕರೋನಾ ಚಿಕಿತ್ಸೆಗಾಗಿ ಕೆಲ ದಿನಗಳ ಹಿಂದೆ ಭಾರೀ ಬೇಡಿಕೆ ಹೊಂದಿದ್ದ ರೆಮ್‌ಡೆಸಿವಿರ್ ಇಂಜೆಕ್ಷನ್ ಬಗ್ಗೆ ಕೂಡ ಅಪಸ್ವರ ಕೇಳಿ ಬರುತ್ತಿದ್ದು ಶೀಘ್ರದಲ್ಲೇ ಅದನ್ನೂ ಸಹ ಈ ಪ್ರೋಟೋಕಾಲ್‌ನಿಂದ ಕೈ ಬಿಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ಹೌದು, COVID-19 ಚಿಕಿತ್ಸೆಗೆ ಬಳಸಲಾಗುವ ಆಂಟಿ-ವೈರಲ್ ಔಷಧವಾದ ರೆಮ್‌ಡೆಸಿವಿರ್ ಅನ್ನು ಶೀಘ್ರದಲ್ಲೇ COVID-19 ಚಿಕಿತ್ಸೆಯಿಂದ ಕೈಬಿಡುವ ಬಗ್ಗೆ ಪರಿಗಣಿಸಲಾಗುತ್ತಿದೆ ಎಂದು ದೆಹಲಿಯ ಸರ್ ಗಂಗಾರಂ ಆಸ್ಪತ್ರೆಯ ನಿರ್ದೇಶಕ ಡಾ.ಡಿ.ಎಸ್. ರಾಣಾ   ಮಂಗಳವಾರ ತಿಳಿಸಿದ್ದಾರೆ.


Remdesivir) ಅನ್ನು ತೆಗೆದುಹಾಕಲು ಪರಿಗಣಿಸಲಾಗುತ್ತಿದೆ ಎಂದವರು ತಿಳಿಸಿದ್ದಾರೆ.


ಇದನ್ನೂ ಓದಿ- Plasma Therapy: ಕರೋನಾ ಚಿಕಿತ್ಸೆಯಿಂದ ಪ್ಲಾಸ್ಮಾ ಥೆರೆಪಿ ಕೈಬಿಟ್ಟ ಐಸಿಎಂಆರ್


COVID-19 ರೋಗಿಗಳ ಚಿಕಿತ್ಸೆಗಾಗಿ  (Corona Treatment)  ಕಳೆದ ವರ್ಷ ಜೂನ್‌ನಲ್ಲಿ ಭಾರತದಲ್ಲಿ ತುರ್ತು ಬಳಕೆಗಾಗಿ ರೆಮ್‌ಡೆಸಿವಿರ್ ಅನ್ನು ಅನುಮೋದಿಸಲಾಯಿತು. ಇದನ್ನು ಚುಚ್ಚುಮದ್ದಿನೊಂದಿಗೆ, ಚುಚ್ಚುಮದ್ದಿನ ರೂಪದಲ್ಲಿ ಮಾತ್ರ ಮಾರಾಟ ಮಾಡಬಹುದು ಮತ್ತು ಆಸ್ಪತ್ರೆಗಳು ಮತ್ತು ಔಷಧಾಲಯಗಳಿಗೆ ಮಾತ್ರ ಅದನ್ನು ಸಂಗ್ರಹಿಸಲು ಅನುಮತಿಸಲಾಗಿದೆ.


ದೇಶವನ್ನು ವ್ಯಾಪಿಸಿರುವ ಕರೋನವೈರಸ್ನ ಮಾರಕ ಎರಡನೇ ತರಂಗದ ಹಿನ್ನೆಲೆಯಲ್ಲಿ ಆಂಟಿ-ವೈರಲ್ ಔಷಧಕ್ಕೆ ಹೆಚ್ಚಿನ ಬೇಡಿಕೆಯ ಮಧ್ಯೆಯೇ ಇಂತಹ ಒಂದು ಹೇಳಿಕೆ ಹೊರಬಿದ್ದಿದೆ. ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಆಂಟಿ-ವೈರಲ್ ಔಷಧವು ಮ್ಯಾಜಿಕ್ ಬುಲೆಟ್ ಅಲ್ಲ ಎಂದು ಏಮ್ಸ್ ಮುಖ್ಯಸ್ಥ ಡಾ.ರಂದೀಪ್ ಗುಲೇರಿಯಾ ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದರು. ಅವರ ಪ್ರಕಾರ, ಈ ಔಷಧವು ತುಂಬಾ ಮುಂಚೆಯೇ ಅಥವಾ ತಡವಾಗಿ ನೀಡಿದರೆ ಹಾನಿಯನ್ನುಂಟುಮಾಡುತ್ತದೆ.


ಇದನ್ನೂ ಓದಿ- CoWIN ಅಪ್ಲಿಕೇಶನ್‌ನಲ್ಲಿ ನೋಂದಣಿ ಇನ್ನಷ್ಟು ಸುಲಭ, ಶೀಘ್ರದಲ್ಲೇ ಸಿಗಲಿದೆ ಈ ಸೌಲಭ್ಯ


ಗಮನಾರ್ಹವಾಗಿ ರೆಮ್‌ಡೆಸಿವಿರ್ ಅದೇ ಚುಚ್ಚುಮದ್ದಾಗಿದ್ದು, ಈ ಸಾಂಕ್ರಾಮಿಕ ಸಮಯದಲ್ಲಿ ವ್ಯಾಪಕವಾಗಿ ಇದರ ಬಗ್ಗೆ ಚರ್ಚೆಯಾಗಿತ್ತು. ಕರೋನಾ ರೋಗಿಗಳಿಗೆ ಸಂಜೀವಿನಿಯಂತೆಯೇ ಪರಿಗಣಿಸಲಾಗಿದ್ದ ಈ  ರೆಮ್‌ಡೆಸಿವಿರ್  ಇಂಜೆಕ್ಷನ್ ಇದ್ದಕ್ಕಿದ್ದಂತೆ ಕಣ್ಮರೆಯಾಗಿ ಒಂದು ರೀತಿಯ ಬಿಕ್ಕಟ್ಟಿನ ವಾತಾವರಣ ಸೃಷ್ಟಿಸಿತ್ತು. ಬಳಿಕ ಕಾಳಸಂತೆಯಲ್ಲಿ ಈ ಚುಚ್ಚುಮದ್ದನ್ನು ಸಾವಿರಾರು ರೂಪಾಯಿಗಳಿಗೆ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿತ್ತು. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.