ನವದೆಹಲಿ: ಕೋವಿಡ್ -19 ಲಸಿಕೆಗಳ ಮೊದಲ ಮತ್ತು ಎರಡನೆಯ ಡೋಸ್ - ಕೋವಾಕ್ಸಿನ್ ಮತ್ತು ಕೋವಿಶೀಲ್ಡ್ ಪಡೆದ ನಂತರ 21,000 ಕ್ಕೂ ಹೆಚ್ಚು ಜನರಿಗೆ ಕೊರೋನಾ ಪಾಸಿಟಿವ್ ಬಂದಿದೆ ಅಲ್ಲದೆ  5,500 ಕ್ಕೂ ಹೆಚ್ಚು ಜನರಿಗೆ ಇನ್ಫೆಕ್ಷನ್ ಆಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮಾಹಿತಿ ಬಿಡುಗಡೆ ಮಾಡಿದೆ.


COMMERCIAL BREAK
SCROLL TO CONTINUE READING

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಐಸಿಎಂಆರ್ ಮಹಾನಿರ್ದೇಶಕ ಬಲರಾಮ್ ಭಾರ್ಗವ(Balram Bhargava), ಕೋವಾಕ್ಸಿನ್‌ನ ಎರಡನೇ ಡೋಸ್ ಪಡೆದ 0.04 ಪ್ರತಿಶತದಷ್ಟು ಜನರಿಗೆ ಕೊರೋನಾ ಪಾಸಿಟಿವ್ ಬಂದಿದೆ, ಕೋವಿಶೀಲ್ಡ್  ಎರಡನೇ ಡೋಸ್ ತೆಗೆದುಕೊಂಡ 0.03 ಪ್ರತಿಶತದಷ್ಟು ಜನರು ಸೋಂಕಿಗೆ ಒಳಗಾಗಿದ್ದಾರೆ.


ಇದನ್ನೂ ಓದಿ: Covid-19: ಭಾರತದಲ್ಲಿ ಕರೋನಾ 2ನೇ ಅಲೆ ಯಾವಾಗ ಉತ್ತುಂಗಕ್ಕೇರಲಿದೆ? CEA ಕೆ.ವಿ.ಸುಬ್ರಮಣಿಯನ್ ಹೇಳಿದ್ದೇನು?


ಇಲ್ಲಿಯವರೆಗೆ ಎಷ್ಟು ಕೋವಾಕ್ಸಿನ್ ಲಸಿಕೆ ಬಳಸಲಾಗಿದೆ?


1.1 ಕೋಟಿ ಡೋಸ್ ಕೋವಾಕ್ಸಿನ್(Covaxin) ಅನ್ನು ನೀಡಲಾಗಿದೆ. ಅದರಲ್ಲಿ 93 ಲಕ್ಷ ಜನರು ಮೊದಲ ಡೋಸ್ ನಲ್ಲಿ ಪಡೆದಿದ್ದಾರೆ ಮತ್ತು ಅದರಲ್ಲಿ 4,208 ಜನರಿಗೆ ಸೋಂಕು ತಗುಲಿದೆ, ಇದು 10,000 ವ್ಯಕ್ತಿಗಳಿಗೆ ಇನ್ಫೆಕ್ಷನ್ ಆಗಿರುವುದು ಕಂಡು ಬಂದಿದೆ. ಇಲ್ಲಿಯವರೆಗೆ ಸುಮಾರು 17,37,178 ಜನರು ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ, ಅದರಲ್ಲಿ 695 ಜನರಿಗೆ ಮಾತ್ರ ಕಾವಿಡ್-19 ಪಾಸಿಟಿವ್ ಬಂದಿದೆ ಎಂದು ಭಾರ್ಗವ ಹೇಳಿದರು. ಮೊದಲ ಡೋಸ್ ನಂತರ ಶೇ 0.04 ಪ್ರತಿಶತ ಮತ್ತು ಎರಡನೇ ಡೋಸ್ ನಂತರ ಶೇ. 0.04 ಕೊರೋನಾ ಪಾಸಿಟಿವ್ ಬಂದಿದೆ ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: ಕರೋನಾ ಮಹಾಮಾರಿ ವಿರುದ್ದ ಸಮರಕ್ಕೆ ಬಂತು ವಾಯುಪಡೆ..!


ಇಲ್ಲಿಯವರೆಗೆ ಎಷ್ಟು ಕೋವಿಶೀಲ್ಡ್ ಲಸಿಕೆ ಬಳಸಲಾಗಿದೆ?


 11.6 ಕೋಟಿ ಡೋಸೇಜ್ ಕೋವಿಶೀಲ್ಡ್(Covishield) ನೀಡಲಾಗಿದೆ. 10 ಕೋಟಿ ಜನರು ಮೊದಲ ಡೋಸ್ ಪಡೆದಿದ್ದು. ಅದರಲ್ಲಿ 17,145 ಜನರು ಸೋಂಕಿಗೆ ಒಳಗಾಗಿದ್ದಾರೆ. ಸುಮಾರು 1,57,32,754 ವ್ಯಕ್ತಿಗಳು ಕೋವಿಶೀಲ್ಡ್ ಎರಡನೇ ಡೋಸ್ ತೆಗೆದುಕೊಂಡಿದ್ದಾರೆ. ಇದರಲ್ಲಿ 5,014 ಜನರಲ್ಲಿ ಸೋಂಕು ಕಂಡು ಬಂದಿದೆ.


ಇದನ್ನೂ ಓದಿ: ಇದು Super AC: ಈ ಏರ್ ಕಂಡಿಷನ್ ಗೆ ಕರೆಂಟ್ ಬೇಕಾಗಿಯೇ ಇಲ್ಲ


ಮೊದಲ ಡೋಸ್ ಪಡೆದ ನಂತರ ಶೇ. 0.02  ಮತ್ತು ಎರಡನೇ ಡೋಸ್ ಪಡೆದ ನಂತರ ಶೇ.0.03 ರಷ್ಟು ಜನರಲ್ಲಿ ಕೊರೋನಾ ಪಾಸಿಟಿವ್ ಕಂಡು ಬಂದಿದೆ. ಮಾಹಿತಿಯ ಪ್ರಕಾರ, ಎರಡು ಲಸಿಕೆಗಳ ಎರಡನೆಯ ಡೋಸ್ ಪಡೆದ ಮೇಲೆ 5,709 ಜನರು ಸೋಂಕಿಗೆ ಒಳಗಾಗಿದ್ದಾರೆ. "ಇದು ಬಹಳ ಕಡಿಮೆ ಸಂಖ್ಯೆ, ಜನರು ಆತಂಕ ಪಡುವ ಅಗತ್ಯವಿಲ್ಲ  ಎಂದು ಭಾರ್ಗವ ಹೇಳಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.