ನವದೆಹಲಿ: KYC(KNOW YOUR CUSTOMER) ನಿಯಮಗಳಲ್ಲಿ RBI ದೊಡ್ಡ ಬದಲಾವಣೆಯನ್ನು ತಂದಿದ್ದು, ಈ ಹೊಸ ನಿಯಮದ ಅಡಿ ನಿಮ್ಮ ಕೆಲಸ ಇನ್ನಷ್ಟು ಸುಲಭವಾಗಲಿದೆ. ಹೌದು, ಇನ್ಮುಂದೆ ಬ್ಯಾಂಕ್ ಗಳು ವಿಡಿಯೋ ಮುಖಾಂತರ ಕೂಡ ತಮ್ಮ ಗ್ರಾಹಕರ KYC ಮಾಹಿತಿ ಕಲೆಹಾಕಬಹುದಾಗಿದೆ. ಅಂದರೆ, ಇನ್ಮುಂದೆ ಬ್ಯಾಂಕ್ KYC ಮಾಹಿತಿ ನೀಡಲು ನೀವು ಬ್ಯಾಂಕ್ ಗೆ ಚಕ್ಕರ್ ಹೊಡೆಯುವುದು ಅಗತ್ಯವಿಲ್ಲ. ಮನೆಯಲ್ಲಿ ಕುಳಿತು ಕೂಡ ಗ್ರಾಹಕರು ವಿಡಿಯೋ ಕಸ್ಟಮರ್ ಐಡೆಂಟಿಫಿಕೇಶನ್ ಪ್ರೊಗ್ರಾಮ್(V-CIP) ಬಳಸಿ ತಮ್ಮ KYC ಮಾಡಿಸಬಹುದಾಗಿದೆ.


COMMERCIAL BREAK
SCROLL TO CONTINUE READING

ಈ ಹೊಸ ತಂತ್ರಜ್ಞಾನ ಬಳಸಿ ಕೆವೈಸಿ ಮಾಡಿಸಿ
NBFC ಹಾಗೂ ಸಾಲ ನೀಡುವ ಎಲ್ಲ ಸಂಸ್ಥೆಗಳು ವೀಡಿಯೊ ಬೇಸ್ಡ್ ಐಡೆಂಟಿಫಿಕೇಶನ್  ಪ್ರೋಸೆಸ್ ಬಳಸಿ ಕೆವೈಸಿ ಮಾಡಿಸಬಹುದಾಗಿದೆ. ಒಂದು ವೇಳೆ ನೀವು ಕೂಡ ಸಾಲಕ್ಕೆ ಅಪ್ಲೈ ಮಾಡಿದ್ದರೆ ಮತ್ತು ಕಾರಣಾಂತರಗಳಿಂದ ನಿಮ್ಮ KYC ಪ್ರಕ್ರಿಯೆ ನಿಂತು ಹೋಗಿದ್ದರೆ, ನೀವು ಕೂಡ ವಿಡಿಯೋ ಕೆವೈಸಿ ಬಳಸಿ ನಿಮ್ಮ ಕೆಲಸ ಬೇಗ ಮಾಡಿಕೊಳ್ಳಬಹುದಾಗಿದೆ. RBI ಮಾಡಿರುವ ಈ ಹೊಸ ನಿಯಮದಿಂದ ರಿಮೋಟ್ ಏರಿಯಾಗಳಲ್ಲಿ ವಾಸಿಸುವವರಿಗೆ ಹೆಚ್ಚಿನ ಅನುಕೂಲವಾಗಲಿದೆ.


ಗ್ರಾಹಕರ ಒಪ್ಪಿಗೆ ಪಡೆದು ಈ ಪ್ರಕ್ರಿಯೆ ನಡೆಯಲಿದೆ
ಇದಕ್ಕೆ ಸಂಬಂಧಿಸಿದಂತೆ RBI ಜಾರಿಗೊಳಿಸಿರುವ ಅಧಿಸೂಚನೆಯ ಪ್ರಕಾರ ವಿಡಿಯೋ ಕೆವೈಸಿ ಗ್ರಾಹಕರ ಅನುಮತಿಯ ಮೇರೆಗೆ ನಡೆಸಬೇಕು ಎಂದು ಸ್ಪಷ್ಟಪಡಿಸಲಾಗಿದೆ. ಅಂದರೆ ವಿಡಿಯೋ ಚಿತ್ರೀಕರಿಸಲು ಬ್ಯಾಂಕ್ ಗಳು ಮೊದಲು ಗ್ರಾಹಕರ ಒಪ್ಪಿಗೆ ಪಡೆಯಬೇಕು. ಬಳಿಕವಷ್ಟೇ ಬ್ಯಾಂಕ್ ಗಳು ಈ ವೈಶಿಷ್ಟ್ಯದ ಲಾಭ ಪಡೆಯಬಹುದು. ಈ ರೀತಿಯ ಕೆವೈಸಿ ಮಾಡಿಸುವಾಗ ಗ್ರಾಹಕರ ಪ್ಯಾನ್ ಕಾರ್ಡ್ ಅನ್ನು ಬ್ಯಾಂಕ್ ಗಳು ಸ್ಪಷ್ಟವಾಗಿ ಚಿತ್ರೀಕರಿಸಬೇಕು ಎಂದು RBI ತನ್ನ ಸೂಚನೆಯಲ್ಲಿ ಹೇಳಿದೆ. ಒಂದು ವೇಳೆ ಗ್ರಾಹಕರು ಬ್ಯಾಂಕ್ ಗೆ ಇ-ಪ್ಯಾನ್ ಕಾರ್ಡ್ ನೀಡಿದರೆ ಅಂತಹ ಸಂದರ್ಭದಲ್ಲಿ ಇದಕ್ಕೆ ಸಡಿಲಿಕೆ ಇರಲಿದೆ.


ಬ್ಯಾಂಕ್ ಗಳು ಈ ರೀತಿ ವಿಡಿಯೋ ಕಾಲ್ ನಡೆಸಬೇಕು
ಇದರ ಹೊರತಾಗಿ ಬ್ಯಾಂಕ್ ಗಳಿಗೆ ಇನ್ನೂ ಕೆಲ ಷರತ್ತುಗಳನ್ನು RBI ವಿಧಿಸಿದೆ. ಈ ಶರತ್ತುಗಳ ಅನ್ವಯ ಬ್ಯಾಂಕ್ ಗಳು ವಿಡಿಯೋ ಕೆವೈಸಿ ಮಾಡಿಸಲು ಕೇವಲ ಬ್ಯಾಂಕ್ ಡೊಮೇನ್ ಮಾತ್ರ ಬಳಸಬೇಕು. ಅಂದರೆ, ಬ್ಯಾಂಕುಗಳು ಗೂಗಲ್ ಡ್ಯುಓ ಅಥವಾ ವಾಟ್ಸ್ ಆಪ್ ಗಳಂತಹ ಪ್ಲಾಟ್ಫಾರಂಗಳ ಬಳಕೆ ಮಾಡಬಾರದು ಎಂದು ಕೇಂದ್ರೀಯ ಬ್ಯಾಂಕ್ ಸ್ಪಷ್ಟಪಡಿಸಿದೆ. 


ವಿಡಿಯೋ ಕೆವೈಸಿ ಪ್ರೋಸೆಸ್ ಆರಂಭಿಸುವುದಕ್ಕೆ ಮೊದಲು ಬ್ಯಾಂಕ್  ಅಧಿಕಾರಿಗಳು ಮೊದಲು V-CIP ಅಪ್ಲಿಕೇಶನ್ ಹಾಗೂ ಬ್ಯಾಂಕ್ ವೆಬ್ಸೈಟ್ ಗಳನ್ನು ಲಿಂಕ್ ಮಾಡಬೇಕು. ಆ ಬಳಿಕ ಮಾತ್ರವೇ ಬ್ಯಾಂಕ್ ಗಳು ಈ ಪ್ರಕ್ರಿಯೆ ನಡೆಸಬೇಕು. ಈ ಪ್ರಕ್ರಿಯೆ ನಡೆಸಲು ತರಬೇತಿ ಪಡೆದ ಅಧಿಕಾರಿಯನ್ನು ಬ್ಯಾಂಕ್ ಗಳು ನೇಮಿಸಬೇಕು ಮತ್ತು ಅವರ ಕೈಯಾರೆಯೇ ಈ ಪ್ರಕ್ರಿಯೆ ನಡೆಸಬೇಕು ಎಂದು RBI ನಿರ್ದೇಶನ ನೀಡಿದೆ.