ನವದೆಹಲಿ: ಮುಖೇಶ್ ಅಂಬಾನಿ ಸ್ವಾಮ್ಯದ ರಿಲಯನ್ಸ್ ಇಂಡಸ್ಟ್ರೀಸ್ ಜುಲೈ-ಸೆಪ್ಟೆಂಬರ್ 2018 ರ ನಡುವೆ ಮೂರು ತಿಂಗಳಲ್ಲಿ ಒಟ್ಟು ನಿವ್ವಳ ಲಾಭ 9,516 ಕೋಟಿ ರೂ ಗಳಿಸಿದೆ.ಈ ಹಿಂದಿನ ಏಪ್ರಿಲ್-ಜುಲೈ ತ್ರೈಮಾಸಿಕ ಅವಧಿಯಲ್ಲಿ 9,459 ಕೋಟಿ ರೂ ನಿವ್ವಳ ಲಾಭ ಗಳಿಸಿತ್ತು.


COMMERCIAL BREAK
SCROLL TO CONTINUE READING

ಬಾಂಬೆ ಶೇರು ಮಾರುಕಟ್ಟೆಗೆ ಸಲ್ಲಿಸಿದ ವರದಿಯ ಮೇಲೆ ಆಧಾರದ ಮೇಲೆ ರಿಲಯನ್ಸ್ ಕಂಪನಿ ಲಾಭ ಕಳೆದ ತ್ರೈಮಾಸಿಕ ಅವಧಿಯಲ್ಲಿ  ಶೇ 0.6 ದಿಂದ ಶೇ 17.4 ರಷ್ಟಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.ರಿಲಯನ್ಸ್ ಜಿಯೊ ಇನ್ಫೋಕಾಮ್ ನ  ನಿವ್ವಳ ಲಾಭವು  681 ಕೋಟಿ ರೂ ಆಗಿದೆ ಎಂದು ವರದಿ ತಿಳಿಸಿದೆ. ಕಳೆದ ತ್ರೈಮಾಸಿಕದಲ್ಲಿ ಇದು 612 ಕೋಟಿ ರೂ ಆಗಿತ್ತು. ಈ ತ್ರೈಮಾಸಿಕ ಅವಧಿಯಲ್ಲಿ ಶೇ 11.2 ರಷ್ಟು ಆಧಾಯದಲ್ಲಿ ಬೆಳವಣಿಗೆಯನ್ನು ಕಂಡಿದೆ ಎಂದು ತಿಳಿದುಬಂದಿದೆ.


ರಿಲಯನ್ಸ್ ನ ಒಟ್ಟು ಆದಾಯ ಶೇ 54.5 ಹೆಚ್ಚಾಗಿದ್ದು 1,56,291 ಕೋಟಿ ರೂ. ಆಧಾಯವನ್ನು ಈ ವರ್ಷದ ಅವಧಿಯಲ್ಲಿ ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,01,169 ಕೋಟಿ ರೂ ಆಧಾಯವನ್ನು ಹೊಂದಿತ್ತು ಎಂದು ತಿಳಿದುಬಂದಿದೆ. ಒಟ್ಟಾರೆಯಾಗಿ ಶೇ 10.3 ರಷ್ಟು ಆಧಾಯದಲ್ಲಿ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.


ಡೆನ್ ನೆಟ್ ವರ್ಕ್ಸ್ ಲಿಮಿಟೆಡ್ ಮತ್ತು ಹಾಥ್ವೇ ಕೇಬಲ್ ಮತ್ತು ಡಾಟಾಕೋಮ್ ಲಿಮಿಟೆಡ್ನಲ್ಲಿ ರಿಲಯನ್ಸ್ ಹೂಡಿಕೆಯನ್ನು ಘೋಷಿಸಿತ್ತು. ಕಂಪನಿಯು ಆದ್ಯತೆಗೆ ಅನುಗುಣವಾಗಿ 2,045 ಕೋಟಿ ಪಾಯಿಗಳನ್ನು ಡೆನ್ ನೆಟ್ವರ್ಕ್ಗಳಲ್ಲಿ ಹೂಡಿಕೆ ಮಾಡಲಿದ್ದು ಶೇಕಡಾ 66 ರಷ್ಟು ಪಾಲನ್ನು ಪಡೆಯಲು ಈಗಾಗಲೇ ಅಸ್ಥಿತ್ವದಲ್ಲಿರುವ ಪ್ರವರ್ತಕರಿಗೆ 245 ಕೋಟಿ ರೂ ಹೂಡಿಕೆ ಮಾಡಲಿದೆ ಎನ್ನಲಾಗಿದೆ. ಆ ಮೂಲಕ  ಹಾಥ್ವೇ ಕೇಬಲ್ ನಲ್ಲಿ  2,940 ಕೋಟಿ ರೂ ಹೂಡಿಕೆ ಮೂಲಕ ಶೇ 51.3 ರಷ್ಟು ಪಾಲುದಾರಿಕೆಗೆ ಆದ್ಯತೆ ನೀಡಲಿದೆ ಎನ್ನಲಾಗಿದೆ.