ನವದೆಹಲಿ: ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಮುಂದುವರೆದಿದ್ದು, ಆ ಮೂಲಕ ಹಿಂದಿಗಿಂತಲೂ ಅದು ಅಧಿಕ ದರದಲ್ಲಿ ಹೆಚ್ಚಳಗೊಂಡಿದೆ.


COMMERCIAL BREAK
SCROLL TO CONTINUE READING

ದೇಶದ ನಾಲ್ಕು ಮಹಾನಗರಿಗಳಲ್ಲಿ ಮುಂಬೈ ಎಂದಿನಂತೆ ದುಬಾರಿ ಎನಿಸಿದೆ. ಇಲ್ಲಿ ಪೆಟ್ರೋಲ್ 87.89 ರೂಪಾಯಿ ಇದೆ. ಉಳಿದ ನಗರಗಳಾದ ಚೆನ್ನೈನಲ್ಲಿ 83.66, ಕೊಲ್ಕತ್ತಾದಲ್ಲಿ 83.39 ಹಾಗೂ ನವದೆಹಲಿಯಲ್ಲಿ 83.39 ರೂಗಳಾಗಿದೆ.ಪೆಟ್ರೋಲ್ ಮತ್ತು ಡಿಸೇಲ್ ಬೆಳೆಗಳ ಏರಿಕೆಯು ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಏರಿಕೆಗನುಗುಣವಾಗಿ ಜೊತೆಗೆ ಅಮೇರಿಕಾದ ಡಾಲರ್ ಎದುರು ರೂಪಾಯಿ ಮೌಲ್ಯ ಕಳೆದುಕೊಳ್ಳುತ್ತಿರುವ ಹಿನ್ನಲೆಯಲ್ಲಿ ಈ ವ್ಯತ್ಯಾಸವಾಗುತ್ತಿದೆ ಎಂದು ಹೇಳಲಾಗಿದೆ. 


ತೈಲ ಬೆಲೆ ಏರಿಕೆ ಕುರಿತಾಗಿ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಇತ್ತೀಚಿಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ  "ರೂಪಾಯಿ ಗಟ್ಟಿಯಾಗಿದೆ, ಆದರೆ ಸಮಸ್ಯೆ ಇರುವುದು ಡಾಲರ್ ನಲ್ಲಿ ಎಂದು ಪ್ರತಿಕ್ರಿಯೆ ನೀಡಿದ್ದರು.