ಪಾಟ್ನಾ: ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಸೈಕಲ್ ತುಳಿಯುತ್ತಾ ಪ್ರತಿಭಟನೆ ಮಾಡುತ್ತಿದ್ದ ಬಿಹಾರದ ಆರ್ಜೆಡಿ ಪಕ್ಷದ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಯಾದವ್ ಬ್ಯಾಲೆನ್ಸ್ ತಪ್ಪಿ ಸೈಕಲ್ ನಿಂದ ಬಿದ್ದ ಘಟನೆ ಗುರುವಾರ ನಡೆದಿದೆ.


COMMERCIAL BREAK
SCROLL TO CONTINUE READING

ಸಾವಧಾನವಾಗಿ ಸೈಕಲ್ ಏರಿ ಮುಂದೆ ಚಲಿಸಿದ ತೇಜ್ ಪ್ರತಾಪ್ ಇದ್ದಕ್ಕಿದ್ದಂತೆ ವೇಗ ಹೆಚ್ಚಿಸಿ, ಮುಂದೆ ಚಲಿಸಿದರು. ಆದರೆ ತಿರುವಿನಲ್ಲಿಯೂ ವೇಗ ನಿಯಂತ್ರಿಸದ ಕಾರಣ ಆಯತಪ್ಪಿ ಕೆಳಗೆ ಬೀಳುವಂತಾಯಿತು. ಕೂಡಲೇ ತೇಜ್ ಪ್ರತಾಪ್ ಜೊತೆಗಿದ್ದ ಭದ್ರತಾ ಸಿಬ್ಬಂದಿ ಮತ್ತು ಕಾರ್ಯಕರ್ತರು, ಅವರು ಮೇಲೇಳಲು ಸಹಾಯ ಮಾಡಿದರು. ಆದರೆ, ಈ ಘಟನೆಯನ್ನು ಆ ಸ್ಥಳದಲ್ಲಿ ನೆರೆದಿದ್ದ ಜನ ತಮ್ಮ ಮೊಬೈಲ್ ಗಳಲ್ಲಿ ರೆಕಾರ್ಡ್ ಮಾಡಿಕೊಳ್ಳುತ್ತಿದ್ದರು. ಇದೀಗ ಆ ವೀಡಿಯೋ ಸಖತ್ ವೈರಲ್ ಆಗಿದೆ....



ಸೈಕಲ್ ಜಾಥಾ ಸಂದರ್ಭದಲ್ಲಿ ಮಾತನಾಡಿದ ತೇಜ್ ಪ್ರತಾಪ್, "ಪೆಟ್ರೋಲ್-ಡೀಸೆಲ್ ಇತ್ತೀಚಿನ ದಿನಗಳಲ್ಲಿ ಹೆಚ್ಚು ವೆಚ್ಚದಾಯಕವಾಗಿವೆ. ಹಾಗಾಗಿ ಸೈಕಲ್ ಬಳಸುವುದು ಉತ್ತಮ. ಇದು ಆರೋಗ್ಯಕ್ಕೂ ಒಳ್ಳೆಯದು" ಎಂದು ಹೇಳಿದ್ದಾರೆ.