ನವದೆಹಲಿ: ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿಗೆ ಉತ್ತಮ ಪ್ರಧಾನಿಯಾಗುವ ಎಲ್ಲ ಗುಣಗಳಿವೆ ಎಂದು ಆರ್ಜೆಡಿ ನಾಯಕ ತೇಜಶ್ವಿ ಯಾದವ್ ಹೇಳಿದ್ದಾರೆ. ಆದರೆ ಬಿಜೆಪಿಯು ರಾಹುಲ್ ಗಾಂಧಿ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ನೂರಾರು ಕೋಟಿಗಳನ್ನು ಖರ್ಚು ಮಾಡಿದೆ ಎಂದರು.ಇದೇ ವೇಳೆ ಅವರು  ಪ್ರಧಾನಮಂತ್ರಿ ವಿಚಾರವನ್ನು ಮಹಾಮೈತ್ರಿ ಸದಸ್ಯರು 2019 ರ ಚುನಾವಣೆಯ ನಂತರ ಒಟ್ಟಾಗಿ ನಿರ್ಧರಿಸುತ್ತಾರೆ ಎಂದು ತಿಳಿಸಿದರು


COMMERCIAL BREAK
SCROLL TO CONTINUE READING

ಪಿಟಿಐಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ತೇಜಸ್ವಿ ಯಾದವ್ "ಅವರ ವಿರುದ್ಧ ಇಂತಹ ದೀರ್ಘಕಾಲದ ನಕಾರಾತ್ಮಕ ಅಭಿಯಾನದ ನಂತರವು ಕೂಡ ರಾಹುಲ್ ಗಾಂಧಿ ಜನರ ಹೃದಯವನ್ನು ಗೆದ್ದಿದ್ದಾರೆ ಎಂದರು.ರಾಜಸ್ಥಾನ, ಛತ್ತೀಸ್ಗಢ ಮತ್ತು ಮಧ್ಯಪ್ರದೇಶದ ಮೂರು ಪ್ರಮುಖ ರಾಜ್ಯಗಳಲ್ಲಿ ರಾಹುಲ್ ಗಾಂಧಿಯವರ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷವು ಜಯಗಳಿಸಿದೆ. ಪಕ್ಷದಲ್ಲಿ ಆತ್ಮವಿಶ್ವಾಸ ಮತ್ತು ಶಕ್ತಿಯನ್ನು ಹೆಚ್ಚಿಸಲಾಗಿದೆ. 2014 ರಲ್ಲಿ ನರೇಂದ್ರ ಮೋದಿಗೆ ಮತ ಚಲಾಯಿಸದ  ಶೇಕಡಾ 69 ರಷ್ಟು ಮತದಾರರ ಮನಸ್ಸಿನಲ್ಲಿ ಯಾದವ್ ಹೇಳಿದರು.


ರಾಹುಲ್ ಗಾಂಧಿಯವರಿಗೆ ಉತ್ತಮ ಪ್ರಧಾನಿಯಾಗಲು ಎಲ್ಲಾ ಗುಣಗಳಿವೆಯೇ ಎಂದು ಕೇಳಿದಾಗ ಉತ್ತರಿಸಿದ ರಾಹುಲ್ ಗಾಂಧಿ "ಹೌದು! ಅವರಿಗೆ ಎಲ್ಲಾ ಗುಣಗಳಿವೆ, ಅವರು ಭಾರತದ ಅತ್ಯಂತ ಹಳೆಯ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ ಮತ್ತು ಕಳೆದ 15 ವರ್ಷಗಳಿಂದ ಸಂಸತ್ತಿನಲ್ಲಿದ್ದಾರೆ. ಅವರ ಪಕ್ಷದಲ್ಲಿ ಐದು ಮುಖ್ಯಮಂತ್ರಿಗಳಿದ್ದಾರೆ  ಅವರನ್ನು ಮುನ್ನಡೆಸುತ್ತಿದ್ದಾರೆಂಬುದನ್ನು ಮರೆಯಬೇಡಿ ಆದ್ದರಿಂದ ಅವರ ನಾಯಕತ್ವ ಮತ್ತು ಗುಣಗಳ ಕುರಿತು ಯಾವುದೇ ಪ್ರಶ್ನೆ ಕೇಳಲು ಸಾಧ್ಯವಿಲ್ಲ ಎಂದರು.


ಕಳೆದ ತಿಂಗಳು ಕಾಂಗ್ರೆಸ್ ಪಕ್ಷದ ಮೈತ್ರಿಯಾಗಿರುವ ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ರಾಹುಲ್ ಗಾಂಧಿಯವರನ್ನು ಪ್ರಧಾನಿ ಅಭ್ಯರ್ಥಿ ಘೋಷಿಸಲು ತಿಳಿಸಿದ್ದರು.