ನವದೆಹಲಿ: ಸಿಬಿಐ ವಿಶೇಷ ನ್ಯಾಯಾಧೀಶ ಶಿವಪಾಲ್ ಸಿಂಗ್ ಅವರ ನಿವಾಸದಿಂದ ಕನಿಷ್ಠ 60 ಸಾವಿರ ರೂ. ಮೌಲ್ಯದ ನಗದು 2 ಲಕ್ಷ ರೂ ಮೌಲ್ಯದ ಆಭರಣ. ಉತ್ತರ ಪ್ರದೇಶದ ಜಲಾನ್ನಲ್ಲಿರುವ ಅವರ ನಿವಾಸದಲ್ಲಿ ಬುಧವಾರ ರಾತ್ರಿಕಳ್ಳತನ ನಡೆದಿದೆ.


COMMERCIAL BREAK
SCROLL TO CONTINUE READING

ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಶಿವಪಾಲ್ ಸಿಂಗ್ ಅವರ ಸಹೋದರ ಸುರೇಂದ್ರ ಸಿಂಗ್ ಅವರು  ಕಳ್ಳತನ ನಡೆದಿರುವುದು ಅವರಿಗೆ ಗುರುವಾರ ಬೆಳಗ್ಗೆ ತಿಳಿದುಬಂದಿದೆ.ಈಗ ಈ ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ ಎನ್ನಲಾಗಿದೆ.


ಮೇವು ಹಗರಣ ಪ್ರಕರಣದ ವಿಚಾರವಾಗಿ ಲಾಲೂ ಪ್ರಸಾದ್ ಅವರಿಗೆ ಜಾರ್ಖಂಡ್ನ ರಾಂಚಿಯಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯ ಶಿಕ್ಷೆಯನ್ನು ನೀಡಿತ್ತು ಆಗ ಶಿವಪಾಲ್ ಸಿಂಗ್ ಅವರು  ನ್ಯಾಯಾಧೀಶರಾಗಿದ್ದರು ಎಂದು ತಿಳಿದುಬಂದಿದೆ.


ಇತ್ತೀಚಿಗೆ ಲಾಲೂ ಪ್ರಸಾದ್ ಅವರಿಗೆ  ಆರೋಗ್ಯ ಮತ್ತು ಮಗನ ಮದುವೆಯ ಕಾರಣದಿಂದಾಗಿ  ತಾತ್ಕಾಲಿಕವಾಗಿ ಬಿಡುವನ್ನು ಕೋರ್ಟ್ ನೀಡಿತ್ತು. ಕೆಲವು ದಿನಗಳ ಕಾಲ ಲಾಲೂ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.