ನವದೆಹಲಿ/ಕಾನ್ಪುರ : ವಿವಿಧ ಬ್ಯಾಂಕುಗಳಲ್ಲಿ 3,695 ಕೋಟಿ ರೂ.ಸಾಲ ಪಡೆದು ವಂಚಿಸಿರುವ ಕುರಿತು ಪೆನ್​ ತಯಾರಕ ಕಂಪನಿ ರೋಟೊಮ್ಯಾಕ್​ ಗ್ಲೋಬಲ್​ ಅಂಡ್​ ಅಫೀಶಿಯಲ್ಸ್​ ಪ್ರೈವೇಟ್​ ಲಿ. ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಸಿಬಿಐ ಸೋಮವಾರ ತಿಳಿಸಿದೆ.


COMMERCIAL BREAK
SCROLL TO CONTINUE READING

ಇದಕ್ಕೂ ಮುನ್ನ ರೋಟೊಮ್ಯಾಕ್​ ಪೆನ್ ಕಂಪನಿ ಮುಖ್ಯಸ್ಥ ವಿಕ್ರಂ ಕೊಠಾರಿಯ ಕಾನ್ಪುರ ನಿವಾಸ ಮತ್ತು ಕಚೇರಿಗೆ ದಾಳಿ ಮಾಡಿದ ಸಿಬಿಐ ವ್ಯಾಪಕ ಶೋಧ ಕಾರ್ಯಾಚರಣೆ ಕೈಗೊಂಡಿತ್ತು. 


ಬ್ಯಾಂಕ್ ಸಾಲ ವಂಚನೆ ಸಂಬಂಧ ತನಿಕೆ ಆರಮಭಿಸಿರುವ ಸಿಬಿಐ, ಸುಮಾರು 800 ಕೋಟಿ ರೂ. ಮೊತ್ತದ ವಂಚನೆಗೈದಿರುವುದಾಗಿ ಅಂದಾಜಿಸಲಾಗಿದೆ. ಬ್ಯಾಂಕ್‌ ಆಫ್ ಬರೋಡ ನೀಡಿದ ದೂರಿನ ಅನ್ವಯ ಏಳು ಬ್ಯಾಂಕುಗಳ ಒಕ್ಕೂಟವು ಕೊಠಾರಿ ಮತ್ತು ಆತನ ಕಂಪೆನಿಯಿಂದ 2,919 ಕೋಟಿ ರೂ. ಬಡ್ಡಿ ಮೊತ್ತದ ಜೊತೆಗೆ ಒಟ್ಟು ವಂಚನೆ ಮೊತ್ತ 3,695 ಕೋಟಿ ರೂ.ಗಳಾಗಿದೇ ಎಂದು ಸಿಬಿಐ ಮೂಲಗಳು ತಿಳಿಸಿವೆ ಎಂದು ಎಎನ್ಐ ವರದಿ ಮಾಡಿದೆ. 


ಅಲ್ಲದೆ, ನವದೆಹಲಿಯಲ್ಲಿರುವ ರೊಟೋಮ್ಯಾಕ್‌ ಕಂಪನಿ ನಿರ್ದೇಶಕರ ಕಚೇರಿ ಮತ್ತು ಮನೆಗಳ ಆವರಣಗಳನ್ನೂ ಸಿಬಿಐ ಸೀಲ್ ಮಾಡಿದೆ. 


ಕೊಠಾರಿ, ಕಾನ್ಪುರ್ ಮೂಲದ ರೊಟೊಮ್ಯಾಕ್ ಗ್ಲೋಬಲ್ ಪ್ರೈವೇಟ್ ಲಿಮಿಟೆಡ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದು, ಬ್ಯಾಂಕುಗಳ ಒಕ್ಕೂಟದಿಂದ ಹಣವನ್ನು ಪಡೆದಿದೆ ಎನ್ನಲಾಗಿದೆ. ಅವರ ಪತ್ನಿ ಸಾಧನಾ ಮತ್ತು ಮಗ ರಾಹುಲ್ ಈ ಕಂಪೆನಿಯ ನಿರ್ದೇಶಕರಾಗಿದ್ದಾರೆ. 


ನೀರವ್‌ ಮೋದಿ ಪಂಜಾಬ್‌ ನ್ಯಾಶನಲ್‌ ಬ್ಯಾಂಕಿಗೆ 11,400 ಕೋಟಿ ರೂ. ವಂಚಿಸಿದ ಬೆನ್ನಲ್ಲೇ ರೊಟೋಮ್ಯಾಕ್ ಪ್ರಕರಣವು ಭಾನುವಾರ ಬೆಳಕಿಗೆ ಬಂದಿದ್ದು, ಇದು ಎರಡನೇ ಅತೀ ದೊಡ್ಡ ಹಣಕಾಸು ವಂಚನೆ ಹಗರಣ ಎನ್ನಲಾಗಿದೆ.


ಆದರೆ, ಸಿಬಿಐ ಕಾನ್ಪುರಕ್ಕೆ ತೆರಳಿ ಮೂವರೂ ಆರೋಪಿಗಳನ್ನು ಪ್ರಶ್ನಿಸಬಹುದು. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನ್ಪುರದಲ್ಲಿ ಸಿಬಿಐ ಮೂರು ಇತರ ಸ್ಥಳಗಳ ಮೇಲೂ ದಾಳಿ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಮಹಾರಾಷ್ಟ್ರ, ಇಂಡಿಯನ್ ಓವರ್ಸೀಸ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಅಲಹಾಬಾದ್ ಬ್ಯಾಂಕ್ ಮತ್ತು ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮೊದಲಾದವುಗಳು ಈ ಬ್ಯಾಂಕುಗಳ ಸಾಲಿನಲ್ಲಿವೆ. 


ಸಿಬಿಐ ದೂರಿಗೆ ಪ್ರತಿಕ್ರಿಯಿಸಿರುವ ರೋಟೊಮ್ಯಾಕ್​ ನಿರ್ದೇಶಕ ವಿಕ್ರಮ್​ ಕೊಠಾರಿ, ನಾನು ಬ್ಯಾಂಕುಗಳಿಂದ ಲೋನ್​ ಪಡೆದಿರುವುದು ಸತ್ಯ. ಆದರೆ, ಅದನ್ನು ಮರುಪಾವತಿಸಿಲ್ಲ ಎಂಬುದು ಶುದ್ಧ ಸುಳ್ಳು ಎಂದು ಅವರ ವಿರುದ್ಧ ದಾಖಲಾಗಿರುವ ದೂರನ್ನು ಅಲ್ಲಗಳೆದಿದ್ದಾರೆ.