ನವದೆಹಲಿ: ಯುವಕರಾಗಲಿ ಅಥವಾ ವಯಸ್ಕರರೆ ಆಗಿರಲಿ ಅವರಲ್ಲಿ ರಾಯಲ್ ಎನ್ಫಿಲ್ಡ್ ಬುಲೆಟ್ ದ್ವಿಚಕ್ರ ವಾಹನದ ಬಗ್ಗೆ ಭಾರಿ ಕ್ರೇಜ್ ಹೊಂದಿರುತ್ತಾರೆ. ಅಷ್ಟೇ ಯಾಕೆ ಈ ಬಂಡಿಯನ್ನು ಹೋಲುವ ಹಾರ್ಲೆ ಡೇವಿಡ್ ಸನ್ ದ್ವಿಚಕ್ರ ವಾಹನಕ್ಕೂ ಕೂಡ ಜನರು ಹೆಚ್ಚಾಗಿ ಮೆಚ್ಚಿಕೊಳ್ಳುತ್ತಾರೆ. ಆದರೆ, ಬುಲೆಟ್ ಹಾಗೂ ಹಾರ್ಲೆ ಡೇವಿಡ್ ಸನ್ ಬಂಡಿಗಳ ಬೆಲೆಯಲ್ಲಿ ಭಾರಿ ಅಂತರವಿದೆ. ಬುಲೆಟ್ ಒಂದೆಡೆ ಕೈಗೆಟಕುವ ದರದಲ್ಲಿ ಸಿಗುತ್ತದೆ. ಆದರೆ, ಹಾರ್ಲೆ ಡೇವಿಡ್ ಸನ್ ಬಂಡಿ ಖರೀದಿಸಲು ನಿಮ್ಮ ಬಳಿ ಜಾಸ್ತಿ ಹಣವಿರುವ ಅಗತ್ಯತೆ ಇದೆ. ಹಲವು ಬಾರಿ ಜನರು ಕೇವಲ ಹಾರ್ಲೆ ಡೇವಿಡ್ ಸನ್ ಬೈಕ್ ಖರೀದಿಸುವ ಕುರಿತು ಕೇವಲ ಕನಸು ಮಾತ್ರ ಕಾಣುತ್ತಾರೆ. ಆದರೆ, ಹಣಕಾಸಿನ ಸಮಸ್ಯೆಯ ಕಾರಣ ಅವರು ಕೇವಲ ಬುಲೆಟ್ ಗೆ ಮಾತ್ರ ಸಂತುಷ್ಟರಾಗುತ್ತಾರೆ. ಆದರೆ, ದೇಶದಲ್ಲಿ ಬುಲೆಟ್ ಗೂ ಕೂಡ ಭಾರಿ ಬೇಡಿಕೆ ಇದೆ. ಒಂದು ವೇಳೆ ನಿಮಗೂ ಕೂಡ ನಿಮ್ಮ ಬಳಿ ಹಾರ್ಲೆ ಡೇವಿಡ್ ಸನ್ ಬೈಕ್ ಇರಬೇಕು ಎಂಬ ಬಯಕೆ ಇದ್ದರೆ, ಇಲ್ಲಿದೆ ಒಂದು ಸರಳ ವಿಧಾನ. ಈ ವಿಧಾನವನ್ನು ಅನುಸರಿಸಿ ನೀವು ನಿಮ್ಮ ಬಳಿ ಇರುವ ಬುಲೆಟ್ ವಾಹನವನ್ನು ಹಾರ್ಲೆ ಡೇವಿಡ್ ಸನ್ ಬೈಕ್ ಆಗಿ ಮಾರ್ಪಡಿಸಬಹುದು.


COMMERCIAL BREAK
SCROLL TO CONTINUE READING

ನಮ್ಮ ಬಳಿ ಇರುವ ವಿಡಿಯೋಗಳು ಇದೀಗ ಭಾರಿ ವೈರಲ್ ಆಗಲಾರಂಭಿಸಿವೆ. ಈ ವಿಡಿಯೋಗಳಲ್ಲಿ ನಿಮ್ಮ ಬಳಿ ಇರುವ Bullet ದ್ವಿಚಕ್ರವಾಹನಕ್ಕೆ ನೀವು ಹೇಗೆ Harley Davidson ಲುಕ್ ನೀಡಬಹುದು ಎಂಬುದನ್ನು ಹೇಳಲಾಗಿದೆ. ಇದಕ್ಕಾಗಿ ಮೊದಲು ನಿಮ್ಮ ಬಳಿ ಬುಲೆಟ್ ವಾಹನವಿರಬೇಕು. ಅದರಲ್ಲೂ ವಿಶೇಷವಾಗಿ ನಿಮ್ಮ ಬಳಿ ಬುಲೆಟ್ 350 ಥಂಡರ್ ಬರ್ಡ್ ಬೈಕ್ ಇರಬೇಕು. ವಿಡಿಯೋನಲ್ಲಿ ನೀಡಲಾಗಿರುವ ಮಾಡಿಫೈಡ್ ಇಂಜಿನ್ ಗೆ ಕ್ರೋಮ್ ನಿಂದ ಸಿಂಗರಿಸಲಾಗಿದೆ ಜೊತೆಗೆ ಹಾರ್ಲೆ ಡೇವಿಡ್ ಸನ್ ಬೈಕ್ ನ ರೂಪ ನೀಡಲು ಪೆಟ್ರೋಲ್ ಟ್ಯಾಂಕ್ ನಲ್ಲಿಯೂ ಕೂಡ ಬದಲಾವಣೆ ಮಾಡಲಾಗಿದೆ. ಈ ಮಾಡಿಫೈಡ್ ಬೈಕ್ ನ ಪೆಟ್ರೋಲ್ ಟ್ಯಾಂಕ್ ಹಾಗೂ ಫ್ರಂಟ್ ಸಸ್ಪೆನ್ಶನ್ ಇನ್ನಷ್ಟು ಆಕರ್ಷಕಗೊಳಿಸುತ್ತದೆ. ಈ ಬೈಕ್ ಅನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದರ ಚಕ್ರಗಳಲ್ಲಿಯೂ ಕೂಡ ಭಾರಿ ಬದಲಾವಣೆ ಮಾಡಲಾಗಿದೆ. ಈ ಬುಲೆಟ್ ಬೈಕ್ ಗೆ ಹಾರ್ಲೆ ಡೇವಿಡ್ ಸನ್ ರೂಪ ನೀಡಲು ಒಟ್ಟು 1.40 ಲಕ್ಷ ರೂ. ವೆಚ್ಚ ಮಾಡಲಾಗಿದೆ.


ಈ ಮಾಡಿಫೈಡ್ ಬುಲೆಟ್, ಹಾರ್ಲೆ ಡೇವಿಡ್ ಸನ್ ನ ಐರನ್ 883 ಬೈಕ್ ರೀತಿ ಕಾಣಿಸುತ್ತಿದೆ. ಈ ಬೈಕ್ ನ ಪೆಟ್ರೋಲ್ ಟ್ಯಾಂಕ್ ಗೆ ಮ್ಯಾಟ್ ಫಿನಿಶ್ ಗ್ರೇ ಪೇಯಿಂಟ್ ಬಳಸಲಾಗಿದೆ. ಬೈಕ್ ನ ಚಕ್ರಗಳಲ್ಲಿ ಅಲಾಯ್ ವ್ಹೀಲ್ ಬಳಸಲಾಗಿದ್ದು, ಅವುಗಳನ್ನು ಕಪ್ಪು ಬಣ್ಣದಿಂದ ಪೇಯಿಂಟ್ ಮಾಡಲಾಗಿದೆ. ಈ ಬೈಕ್ ನ ಫ್ರಂಟ್ ಲುಕ್ ಹಾರ್ಲೆ ಐರನ್ 883 ಬೈಕ್ ನ ಫ್ರಂಟ್ ಲುಕ್ ಗೆ ಸಂಪೂರ್ಣ ಹೋಲಿಕೆಯಾಗುತ್ತದೆ. ಈ ಕುರಿತು ಇನ್ನಷ್ಟು ಹೆಚ್ಚಿನ ಮಾಹಿತಿ ತಿಳಿಯಲು ವಿಡಿಯೋ ಅನ್ನು ವೀಕ್ಷಿಸಿ. ಒಂದು ವೇಳೆ ನೀವೂ ಕೂಡ ನಿಮ್ಮ ಬೈಕ್ ಅನ್ನು ಈ ರೀತಿ ಮಾರ್ಪಡಿಸಲು ಬಯಸುತ್ತಿದ್ದರೆ, ನೀವು ಓರ್ವ ನಿಪುಣ ಮೆಕ್ಯಾನಿಕ್ ಅನ್ನು ಸಂಪರ್ಕಿಸಬೇಕು.