10ನೇ ತರಗತಿ ಪಾಸ್ ಆದವರಿಗೆ ರೈಲ್ವೇ ಇಲಾಖೆಯಲ್ಲಿ ಬಂಪರ್ ಅವಕಾಶ!
ವೆಸ್ಟರ್ನ್ ರೈಲ್ವೇಯ ವಿವಿಧ ಸ್ಥಾನಗಳಿಗೆ ಖಾಲಿಯಿರುವ 3,553 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ನವದೆಹಲಿ: 10ನೇ ತರಗತಿ ಪಾಸ್ ಆದವರಿಗೆ ರೈಲ್ವೇ ಇಲಾಖೆಯಲ್ಲಿ ಬಂಪರ್ ಅವಕಾಶವಿದೆ. ವೆಸ್ಟರ್ನ್ ರೈಲ್ವೇಯ ವಿವಿಧ ಸ್ಥಾನಗಳಿಗೆ ಖಾಲಿಯಿರುವ 3,553 ಹುದ್ದೆಗಳಿಗೆ ರೈಲ್ವೇ ಇಲಾಖೆ ಅರ್ಜಿ ಆಹ್ವಾನಿಸಿದೆ. . ಆರ್.ಆರ್.ಬಿ (ರೈಲ್ವೆ ನೇಮಕಾತಿ ಮಂಡಳಿ) ವೆಸ್ಟರ್ನ್ ರೈಲ್ವೇಯ ವಿವಿಧ ಸ್ಥಾನಗಳಿಗೆ ಖಾಲಿಯಿರುವ 3,553 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ವೆಸ್ಟರ್ನ್ ರೈಲ್ವೇ ಅಪ್ರೆಂಟಿಸ್ ಪೋಸ್ಟ್ಗಳಿಗೆ ಅರ್ಜಿ ಆಹ್ವಾನಿಸಿದ್ದು, ಈ ಹುದ್ದೆಗೆ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಜನವರಿ 9, 2019 ಅರ್ಜಿ ಸಲ್ಲಿಕೆಗೆ ಕೊನೆ ದಿನವಾಗಿದೆ.
ಅರ್ಹತೆ:
ವೆಸ್ಟರ್ನ್ ರೈಲ್ವೇಯಲ್ಲಿ ಕೆಲಸ ಮಾಡಲು ಆಸಕ್ತಿಯಿರುವ ಅಭ್ಯರ್ಥಿಗಳು ಭಾರತೀಯ ರೈಲ್ವೇ, wr.indianrailways.gov.in ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಈ ಸ್ಥಾನಗಳಿಗೆ ಅರ್ಜಿ ಸಲ್ಲಿಸಬಹುದು. 10 ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾದ, ಶೇ. 50 ಅಂಕಗಳನ್ನು ಹೊಂದಿರುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
ಅದೇ ಸಮಯದಲ್ಲಿ 24 ವರ್ಷ ಗರಿಷ್ಠ ವಯೋಮಿತಿಯವರೆಗೆ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. 12 ನೇ ತರಗತಿಯ ಪಾಸ್ ವಿದ್ಯಾರ್ಥಿಗಳು ಈ ಪೋಸ್ಟ್ ಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಇದಲ್ಲದೆ ಐಟಿಐ ಪ್ರಮಾಣಪತ್ರವನ್ನು ಅಭ್ಯರ್ಥಿಗಳು ಹೊಂದಿರುವುದು ಕಡ್ಡಾಯವಾಗಿದೆ. ಮೀಸಲಾತಿ ವಿಭಾಗದ ಅಭ್ಯರ್ಥಿಗಳಿಗೆ ನಿಯಮದಂತೆ ವಿನಾಯಿತಿ ನೀಡಲಾಗುವುದು.
ಖಾಲಿಯಿರುವ ಹುದ್ದೆಗಳು: 3553
ಹುದ್ದೆ: ಅಪ್ರೆಂಟಿಸ್
ಅರ್ಜಿ ಸಲ್ಲಿಸಲು ಹೀಗೆ ಮಾಡಿ:
ಅರ್ಹ ಅಭ್ಯರ್ಥಿಗಳು ವೆಸ್ಟರ್ನ್ ರೈಲ್ವೇಯ ಅಧಿಕೃತ ವೆಬ್ಸೈಟ್ wr.indianrailways.gov.in ಗೆ ಭೇಟಿ ನೀಡುವ ಮೂಲದ ಜನವರಿ 9, 2019 ರವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಸಮಯದಲ್ಲಿ ಎಲ್ಲಾ ಮಾಹಿತಿಯನ್ನು ಗಮನವಿಟ್ಟು ಭರ್ತಿ ಮಾಡಿ. ಆದ್ದರಿಂದ ಆನ್ಲೈನ್ ಫಾರ್ಮ್ ಅನ್ನು ಭರ್ತಿ ಮಾಡುವಾಗ, ನಿಮ್ಮ ಎಲ್ಲ ಶೈಕ್ಷಣಿಕ ಮತ್ತು ಅಗತ್ಯ ದಾಖಲೆಗಳನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ. ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ವರ್ಷ ತರಬೇತಿ ನೀಡಲಾಗುವುದು.