RRB Recruitment 2019: ಭಾರತೀಯ ರೈಲ್ವೆಯಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಒಳ್ಳೆಯ ಸುದ್ದಿ ಇದೆ. ಆರ್‌ಆರ್‌ಬಿ ರೈಲ್ವೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 1216 ಹುದ್ದೆಗಳಿಗೆ ನೇಮಕಾತಿಗೆ ರೈಲ್ವೆ ಇಲಾಖೆ ಅರ್ಜಿ ಆಹ್ವಾನಿಸಿದ್ದು, 8 ಮತ್ತು ಹತ್ತನೇ ತರಗತಿ ಪಾಸ್ ಆದವರು ಈ ಹುದ್ದೆಗಳಿಗೆ ಅರ್ಜಿಗಳನ್ನು ಸಹ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 6 ಜನವರಿ 2020. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬಹುದು. ಈ ವಿವಿಧ ಪೋಸ್ಟ್‌ಗಳಲ್ಲಿ ಫಿಟ್ಟರ್, ಶೀಟ್ ಮೆಟಲ್ ವರ್ಕರ್, ವೆಲ್ಡರ್, ಮೆಕ್ಯಾನಿಕ್, ಕಾರ್ಪೆಂಟರ್, ಪೇಂಟರ್, ಟ್ರೇಡ್ ವೆಲ್ಡರ್ ಮತ್ತು ಇತರ ಪೋಸ್ಟ್‌ಗಳು ಸೇರಿವೆ.


COMMERCIAL BREAK
SCROLL TO CONTINUE READING

ಆಸಕ್ತ ಅಭ್ಯರ್ಥಿಗಳು ಹತ್ತನೇ ತರಗತಿ  ಪಾಸ್ ಆಗಿರಬೇಕು. 8 ನೇ ತರಗತಿ ಪಾಸ್ ಆದವರೂ ಕೂಡ ಟ್ರೇಡ್ ವೆಲ್ಡರ್, ಶೀಟ್ ಮೆಟಲ್ ವರ್ಕರ್, ಕಾರ್ಪೆಂಟರ್ ಮತ್ತು ವೈರ್‌ಮ್ಯಾನ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ, ಅಭ್ಯರ್ಥಿಗೆ ಕನಿಷ್ಠ 15 ವರ್ಷ ವಯಸ್ಸಾಗಿರಬೇಕು. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳನ್ನು ಅವರ 10 ನೇ ಮಾರ್ಕ್‌ಶೀಟ್‌ನ ಆಧಾರದ ಮೇಲೆ ಮಾತ್ರ ಆಯ್ಕೆ ಮಾಡಲಾಗುತ್ತದೆ. ಇದಕ್ಕಾಗಿ ಅವರು ಯಾವುದೇ ಲಿಖಿತ ಪರೀಕ್ಷೆ ಬರೆಯಬೇಕಾಗಿಲ್ಲ ಎಂದು ಹೇಳಲಾಗಿದೆ.


ಈ ಎಲ್ಲಾ ಹುದ್ದೆಗಳಿಗೆ ಅರ್ಜಿ ಶುಲ್ಕವನ್ನು 100 ರೂ. ಆರ್‌ಆರ್‌ಬಿ ರೈಲ್ವೆಯ ಅಧಿಕೃತ ವೆಬ್‌ಸೈಟ್, rrcbbs.org.in ಗೆ ಲಾಗ್ ಇನ್ ಮಾಡುವ ಮೂಲಕ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಸಲ್ಲಿಸಬಹುದು. ಆನ್‌ಲೈನ್ ಅರ್ಜಿಯನ್ನು ಸಲ್ಲಿಸುವಲ್ಲಿ ಅಭ್ಯರ್ಥಿಗಳಿಗೆ ಯಾವುದೇ ಸಮಸ್ಯೆಯನ್ನು ಎದುರಾದರೆ, ಅವರು ದೂರವಾಣಿ ಸಂಖ್ಯೆ 9121276839, 9121276846 ಕ್ಕೆ ಕರೆ ಮಾಡಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು.