ನವದೆಹಲಿ: RRB Recruitment 2020-21 - ರೇಲ್ವೆ ವಿಭಾಗದಲ್ಲಿ ನೌಕರಿಗಾಗಿ ಅರ್ಜಿ ಸಲ್ಲಿಸಿದವರಿಗೊಂದು ಸಂತಸದ ಸುದ್ದಿ ಪ್ರಕಟಗೊಂಡಿದೆ. ಹೌದು. ರೈಲು ವಿಭಾಗದಲ್ಲಿ 1.4 ಲಕ್ಷ ಖಾಲಿ ಇರುವ ಹುದ್ದೆಗಳಿಗಾಗಿ ಶೀಘ್ರವೇ ಭರ್ತಿ ಪ್ರಕ್ರಿಯೆ ಆರಂಭಗೊಳ್ಳಲಿದೆ. ಈ ಪ್ರಕ್ರಿಯೆ ಒಟ್ಟು ಮೂರು ಹಂತಗಳಲ್ಲಿ ಪೂರ್ಣಗೊಳ್ಳಲಿವೆ. ಇದಕ್ಕಾಗಿ ಇಡೀ ದೇಶಾದ್ಯಂತ ಭಾರಿ ಸಿದ್ಧತೆಗಳನ್ನು ನಡೆಸಲಾಗುತ್ತಿವೆ. ಒಟ್ಟು ಖಾಲಿ ಇರುವ 1.4 ಲಕ್ಷ ಹುದ್ದೆಗಳಿಗಾಗಿ ಒಟ್ಟು 2 ಕೋಟಿ 44 ಲಕ್ಷ ಜನರು ಅರ್ಜಿ ಸಲ್ಲಿಸಿದ್ದಾರೆ.


COMMERCIAL BREAK
SCROLL TO CONTINUE READING

ಘೋಷಣಾ ಪತ್ರ ನೀಡುವುದು ಅನಿವಾರ್ಯ
ಭಾರತೀಯ ರೈಲು ಇಲಾಖೆ ಡಿಸೆಂಬರ್ 15ರಂದು ಭರ್ತಿ ಪ್ರಕ್ರಿಯೆ ಆರಂಭಿಸಲಿದೆ. ಕೊರೊನಾ ಮಹಾಮಾರಿಯ ಹಿನ್ನೆಲೆ ಈ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಈ ಪರೀಕ್ಷೆಗಳನ್ನು ನಡೆಸಲು ಇಲಾಖೆ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಪರೀಕ್ಷಾ ಕೇಂದ್ರಗಳಲ್ಲಿ ಕೊರೊನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಎಂದು ಇಲಾಖೆ ಹೇಳಿದೆ. ಪರೀಕ್ಷಾರ್ಥಿಗಳು ಮಾಸ್ಕ್ ಧರಿಸಿ ಪರೀಕ್ಷಾ ಕೇಂದ್ರಕ್ಕೆ ಬರುವುದು ಅನಿವಾರ್ಯ. ಜೊತೆಗೆ ಅಭ್ಯರ್ಥಿಗಳು ಕೊವಿಡ್ 19 ಟೆಸ್ಟ್ ಮಾಡಿಸಿರುವ ಹಾಗೂ ಅವರಿಗೆ ಕೊರೊನಾ ಇಲ್ಲದಿರುವುದರ ಪ್ರಮಾಣಪತ್ರ ನೀಡುವುದು ಕೂಡ ಅನಿವಾರ್ಯವಾಗಿದೆ. ಈ ಪ್ರಮಾಣ ಪತ್ರ ಸಲ್ಲಿಸದೆ ಇರುವವರಿಗೆ ಪರೀಕ್ಷಾ ಕೊಠಡಿಗೆ ಪ್ರವೇಶ ನೀಡಲಾಗುವುದಿಲ್ಲ ಎಂದು ಇಲಾಖೆ ಈಗಾಗಲೇ ಸ್ಪಷ್ಟಪಡಿಸಿದೆ.


ಇಲ್ಲಿದೆ ಮೂರು ಹಂತಗಳ ವಿವರ
ಈ ಭರ್ತಿ ಪ್ರಕ್ರಿಯೆ ಒಟ್ಟು ಮೂರು ಹಂತಗಳಲ್ಲಿ ಸಾಗಲಿದೆ.


1. ಮೊದಲ ಹಂತದಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಯಲಿದೆ. ಇದು ಡಿ.15 ರಿಂದ ಡಿ.18ರವರೆಗೆ ನಡೆಯಲಿದೆ.
2. ಎರಡನೇ ಪರೀಕ್ಷೆ ಸಿಬಿಟಿ ಅಂದರೆ ಸೆಕಂಡ್ ಫಸೆ ಆಫ್ ಸಿಬಿಟಿ ಫಾರ್ ನಾನ್ ಟೆಕ್ನಿಕಲ್ ಪಾಪ್ಯುಲರ್ ಕೆಟಗರಿಯಲ್ಲಿ ನಡೆಯಲಿದೆ, ಇದನ್ನು ಡಿಸೆಂಬರ್ 28, 2020 ರಿಂದ ಮಾರ್ಚ್ 2021ರ ನಡುವೆ  ಆಯೋಜಿಸಲಾಗುತ್ತಿದೆ.
3. ಸಂಭಾವ್ಯ ಮೂರನೇ ಹಂತ ಏಪ್ರಿಲ್ 2021ರಲ್ಲಿ ನಡೆಯಲಿದೆ. ಇದು ಸಿಬಿಟಿ ಲೆವಲ್ 1 ಕ್ಕಾಗಿ ನಡೆಯಲಿದ್ದು, ಏಪ್ರಿಲ್ ನಿಂದ ಜೂನ್ 2021 ರವರೆಗೆ ಆಯೋಜಿಸಲಾಗುತ್ತಿದೆ.


ಪರೀಕ್ಷೆಗೆ ಆಗಮಿಸುವ ಎಲ್ಲಾ ಅಭ್ಯರ್ಥಿಗಳಿಗೆ ರೇಲ್ವೆ ರಿಕ್ರ್ಯೂಟ್ಮೆಂಟ್ ಬೋರ್ಡ್ (Railway Becruitment Board)  ನಲ್ಲಿ ನೀಡಲಾಗಿರುವ ಮಾರ್ಗಸೂಚಿಗಳನ್ನು ಹಾಗೂ ಕೊರೊನಾ ಪ್ರೋಟೋಕಾಲ್ ಗಳನ್ನು ಅನುಸರಿಸಲು ಮಂಡಳಿ ಸೂಚನೆ ನೀಡಿದೆ.