ಮುಂಬೈ: ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 12,000ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಜ್ರದ ವ್ಯಾಪಾರಿ ನೀರವ್ ಮೋದಿ ಅವರ ಮುಂಬೈ ಅಪಾರ್ಟ್ಮೆಂಟ್ನಲ್ಲಿ 12 ಸಾವಿರ ಕೋಟಿ ಪಿಎನ್ಬಿ ಮೋಸದ ಪ್ರಕರಣದಲ್ಲಿ 26 ಕೋಟಿ ಮೌಲ್ಯದ ಆಭರಣಗಳು, ದುಬಾರಿ ಕೈಗಡಿಯಾರಗಳು ಮತ್ತು ಅಮೃತಾ ಶೆರ್ಗಿಲ್ ಮತ್ತು ಎಮ್.ಎಫ್ ಹುಸೇನ್ರ ಅಮೂಲ್ಯ ವರ್ಣಚಿತ್ರಗಳನ್ನು ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಆ ಸಮಯದಲ್ಲಿ ಸಿಕ್ಕಿರುವ ಒಂದು ಉಂಗುರದ ಮೌಲ್ಯ 10ಕೋಟಿ.


COMMERCIAL BREAK
SCROLL TO CONTINUE READING


ಮುಂಬೈನ ವರ್ಲಿ ಪ್ರದೇಶದಲ್ಲಿರುವ 'ಸಮುದ್ರ ಮಹಲ್' ಅಪಾರ್ಟ್ಮೆಂಟ್ ಫ್ಲಾಟ್ ನಲ್ಲಿ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶೋಧ ನಡೆಸಿದ ಸಂದರ್ಭದಲ್ಲಿ, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ 26 ಕೋಟಿ ಮೌಲ್ಯದ ಆಭರಣಗಳು, ದುಬಾರಿ ಕೈಗಡಿಯಾರಗಳು ಮತ್ತು ಅಮೃತಾ ಶೆರ್ಗಿಲ್ ಮತ್ತು ಎಮ್.ಎಫ್ ಹುಸೇನ್ರ ಅಮೂಲ್ಯ ವರ್ಣಚಿತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.



ಸಿಬಿಐ ನೀರವ್ ಮೋದಿ ಮತ್ತು ಅವರ ಚಿಕ್ಕಪ್ಪ ಮತ್ತು ಗೀತಾಂಜಲಿ ಜೇಮ್ಸ್ ಪ್ರವರ್ತಕ ಮೆಹುಲ್ ಚೋಕ್ಸಿಯ ಪರಿಷ್ಕರಣೆಗಾಗಿ ಎರಡು ಎಫ್ಐಆರ್ ಗಳನ್ನು ದಾಖಲಿಸಿದೆ. 


7,638 ಕೋಟಿ ಮೌಲ್ಯದ ಆಸ್ತಿ ಜಪ್ತಿ
ಮುಂಬಯಿ ವಿಶೇಷ ನ್ಯಾಯಾಲಯ ಇಡಿ ವಿನಂತಿಯ ಮೇರೆಗೆ ಅವರ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿದೆ. ಫೆಬ್ರವರಿಯಲ್ಲಿ ಆರೋಪಿಗಳ ವಿರುದ್ಧ ಇಡಿ ಕ್ರಿಮಿನಲ್ ತನಿಖೆಯನ್ನು ಆರಂಭಿಸಿತು. ಇದರ ನಂತರ ಅವರು ದೇಶದಾದ್ಯಂತ 251 ಸ್ಥಳಗಳನ್ನು ಶೋಧ ನಡೆಸಿ ಇಲ್ಲಿಯವರೆಗೆ, ವಜ್ರಗಳು, ಚಿನ್ನ, ಅಮೂಲ್ಯ ರತ್ನಗಳು ಮತ್ತು ಇತರ ಆಸ್ತಿಗಳನ್ನು ಸೇರಿ 7,638 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ.