ಚಂಡೀಗಢ: ರಾಷ್ಟ್ರೀಯ ರಾಜಧಾನಿ ದೆಹಲಿಗೆ 1995 ರಿಂದ ಹರಿಯಾಣದಿಂದ ಯಮುನಾ ನದಿ ನೀರನ್ನು ಪೂರೈಸಲಾಗುತ್ತಿದ್ದು, ದೆಹಲಿ ಸರ್ಕಾರ 100 ಕೋಟಿ ರೂ. ನೀರಿನ ಬಾಕಿ ಉಳಿಸಿಕೊಂಡಿದೆ ಎಂದು ಹರಿಯಾಣಾ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟಾರ್ ಮಂಗಳವಾರ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಖಟ್ಟಾರ್, "ಬಾಕಿ ಪಾವತಿಸುವಂತೆ ಕೋರಿ ನಾವು ನಿರಂತರವಾಗಿ ದೆಹಲಿ ಸರ್ಕಾರಕ್ಕೆ ಪತ್ರ ಬರೆಯುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ" ಎಂದರು.


ಒಪ್ಪಂದದ ಪ್ರಕಾರ, ಹರಿಯಾಣ ಪ್ರತಿ ದಿನವೂ ದೆಹಲಿಗೆ 719 ಕ್ಯೂಸೆಕ್ಸ್ ನೀರನ್ನು ಪೂರೈಸಬೇಕಾಗಿದೆ. ಆದರೆ, ಹರಿಯಾಣವು ದಿನಕ್ಕೆ 1049 ಕ್ಯೂಸೆಕ್ಸ್ ಯಮುನಾ ನದಿಯ ನೀರನ್ನು ದೆಹಲಿಗೆ ಪೂರೈಸುತ್ತಿದೆ ಎಂದು ಸಿಎಂ ಮನೋಹರ್ ಲಾಲ್ ಖಟ್ಟಾರ್ ತಿಳಿಸಿದರು.