1ನೇ ತರಗತಿಗೆ 4.27 ಲಕ್ಷ ರೂ. ಫೀಸ್; ಖಾಸಗಿ ಶಾಲೆಯೊಂದರ ಶುಲ್ಕ ರಶೀದಿ ವೈರಲ್..!
ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಫೀಸ್ ಸ್ಟ್ರೆಕ್ಚರ್‌ನಲ್ಲಿ ನೋಂದಣಿ ಶುಲ್ಕ 2 ಸಾವಿರ ರೂ., ಪ್ರವೇಶ ಶುಲ್ಕ 40 ಸಾವಿರ ರೂ., ವಾರ್ಷಿಕ ಶಾಲಾ ಶುಲ್ಕ 2 ಲಕ್ಷ 52 ಸಾವಿರ ರೂ., ರಿಫಂಡೆಬಲ್ ಮನಿ 5 ಸಾವಿರ ರೂ., ಬಸ್‌ಚಾರ್ಜ್ 1 ಲಕ್ಷ 8 ಸಾವಿರ ರೂ., ಬುಕ್ ಹಾಗೂ ಸಮವಸ್ತ್ರದ ಶುಲ್ಕ 20 ಸಾವಿರ ರೂ., ಹೀಗೆ ಇವೆಲ್ಲವೂ ಸೇರಿ ವರ್ಷಕ್ಕೆ ಸುಮಾರು 4 ಲಕ್ಷ 27 ಸಾವಿರ ರೂ. ಎಂದಿದೆ.
Rs 4.27 lakh fee for class 1: ಕರ್ನಾಟಕ ಸೇರಿದಂತೆ ದೇಶದಾದ್ಯಂತ ಖಾಸಗಿ ಶಾಲೆಗಳ ಡೊನೇಷನ್ ಹಾವಳಿ ಜೋರಾಗಿದೆ. ವರ್ಷದಿಂದ ವರ್ಷಕ್ಕೆ ಖಾಸಗಿ ಶಾಲೆಗಳ ಶುಲ್ಕ ಏರಿಕೆಯಾಗುತ್ತಲೇ ಇದೆ. LKG, UKGಗೆ ಇಂದು ಶುಲ್ಕದ ರೂಪದಲ್ಲಿ ಲಕ್ಷ ಲಕ್ಷ ಹಣ ಪೀಕಲಾಗುತ್ತಿದೆ. ಇದರಿಂದ ಜನಸಾಮಾನ್ಯರು ಸಂಕಷ್ಟ ಎದುರಿಸುವಂತಾಗಿದೆ. ಮಕ್ಕಳ ಫೀಸ್ ಹೊಂದಿಸಲು ಇನ್ನಿಲ್ಲದ ಸರ್ಕಸ್ ಮಾಡಬೇಕಾಗಿದೆ.
ಮಕ್ಕಳನ್ನು ಗುಣಮಟ್ಟದ ಶಾಲೆ-ಕಾಲೇಜಿಗೆ ಸೇರಬೇಕೆಂದು ಅನೇಕರು ಲಕ್ಷ ಲಕ್ಷ ಶುಲ್ಕವನ್ನು ಪಾವತಿಸಿ ಓದಿಸುತ್ತಿರುತ್ತಾರೆ. ಆದರೆ ಇಂದು ಖಾಸಗಿ ಶಾಲೆಗಳು ರಕ್ತವನ್ನು ಹೀರುವಂತಹ ತಿಗಣೆಗಳಾಗಿ ಪರಿವರ್ತೆನೆಯಾಗಿವೆ. ಇದಕ್ಕೆ ನಿದರ್ಶನೆಂಬಂತೆ ಸೋಷಿಯಲ್ ಮೀಡಿಯಾದಲ್ಲಿ ಖಾಸಗಿ ಶಾಲೆಯೊಂದರ 1ನೇ ತರಗತಿಯ ಸ್ಕೂಲ್ ಫೀಸ್ ವೈರಲ್ ಆಗಿದೆ.
ಇದನ್ನೂ ಓದಿ: ಧರ್ಮದ ಹೆಸರಿನಲ್ಲಿ ಜನರನ್ನು ವಿಂಗಡಿಸಿ ರಾಜಕೀಯ ಮಾಡ್ತಾರೆ
ಕೇವಲ 1ನೇ ತರಗತಿಗೆ ಬರೋಬ್ಬರಿ 4.27 ಲಕ್ಷ ರೂ. ಶುಲ್ಕ ವಿಧಿಸಲಾಗಿದೆ. ಈ ವಿಷಯವನ್ನು ರಿಷಬ್ ಜೈನ್ ಎಂಬುವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಆಘಾತಕ ವ್ಯಕ್ತಪಡಿಸಿದ್ದಾರೆ. ರಿಷಬ್ ಜೈನ್ ತಮ್ಮ ಮಗಳಿಗೆ 1ನೇ ತರಗತಿಗೆ ಸೇರಿಸಲೆಂದು ಶಾಲೆಯೊಂದಕ್ಕೆ ಭೇಟಿ ನೀಡಿದ್ದಾರೆ. ಆ ಶಾಲೆಯವರು ನೀಡಿದ ಅಡ್ಮಿಷನ್ ಶುಲ್ಕದ ಪಟ್ಟಿಯನ್ನು ಕಂಡು ಬೆಚ್ಚಿಬಿದ್ದಿದ್ದಾರೆ.
ರಾಯಚೂರಿನಲ್ಲಿ ವಾಹನಗಳ ಮೇಲೆ ಕಲ್ಲು ತೂರಿ ದರೋಡೆಗೆ ಯತ್ನ!
ರಿಷಬ್ ಜೈನ್ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ಏನಿದೆ?
ರಿಷಬ್ ಜೈನ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಫೀಸ್ ಸ್ಟ್ರೆಕ್ಚರ್‌ನಲ್ಲಿ ನೋಂದಣಿ ಶುಲ್ಕ 2 ಸಾವಿರ ರೂ., ಪ್ರವೇಶ ಶುಲ್ಕ 40 ಸಾವಿರ ರೂ., ವಾರ್ಷಿಕ ಶಾಲಾ ಶುಲ್ಕ 2 ಲಕ್ಷ 52 ಸಾವಿರ ರೂ., ರಿಫಂಡೆಬಲ್ ಮನಿ 5 ಸಾವಿರ ರೂ., ಬಸ್‌ಚಾರ್ಜ್ 1 ಲಕ್ಷ 8 ಸಾವಿರ ರೂ., ಬುಕ್ ಹಾಗೂ ಸಮವಸ್ತ್ರದ ಶುಲ್ಕ 20 ಸಾವಿರ ರೂ., ಹೀಗೆ ಇವೆಲ್ಲವೂ ಸೇರಿ ವರ್ಷಕ್ಕೆ ಸುಮಾರು 4 ಲಕ್ಷ 27 ಸಾವಿರ ರೂ. ಎಂದಿದೆ. ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಅವರ ಈ ಪೋಸ್ಟ್ ನೋಡಿದ ನೆಟಿಜನ್ಸ್ ಖಾಸಗಿ ಶಾಲೆಗಳ ಧನದಾಹಕ್ಕೆ ಛೀಮಾರಿ ಹಾಕುತ್ತಿದ್ದಾರೆ.
ಇಂದು ಶಿಕ್ಷಣ ಎನ್ನುವುದು ಉಳ್ಳವರಿಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ಬಡವರಿಗೆ ಮತ್ತು ಮಧ್ಯಮ ವರ್ಗದ ಜನರಿಗೆ ಬಹುದೊಡ್ಡ ಸಂಕಷ್ಟವಾಗಿದೆ. ಏಕೆಂದರೆ ಗುಣಮಟ್ಟದ ಶಿಕ್ಷಣದ ಹೆಸರಿನಲ್ಲಿ ಇಂದು ಖಾಸಗಿ ಶಾಳೆಗಳು ಹಗಲು ದರೋಡೆ ಮಾಡುತ್ತಿವೆ. ಮಕ್ಕಳ ಶಿಕ್ಷಣಕ್ಕೆ ಲಕ್ಷ ಲಕ್ಷ ಹಣ ಹೊಂದಿಸಲು ಹೆಣಗಾಡುವ ಸಾವಿರಾರು ಜನರು ಹಿಡಿಶಾಪ ಹಾಕುವಂತಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.