ನವದೆಹಲಿ: ಇಲ್ಲಿನ ಕಾಶ್ಮೀರಿ ಗೇಟ್ ಮೆಟ್ರೋ ನಿಲ್ದಾಣದಲ್ಲಿ 500 ರೂ. ಮುಖಬೆಲೆಯ ಸುಮಾರು 4,64,000 ರೂ. ಮೊತ್ತದ ನಕಲಿ ನೋಟುಗಳನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಪೊಲೀಸರು ವಶಪಡಿಸಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಶನಿವಾರ ಸಂಜೆ 5.30ರ ಸುಮಾರಿಗೆ ಈ ಘಟನೆ ನಡೆದಿದ್ದು, ಕಾಶ್ಮೀರಿ ಗೇಟ್ ಮೆಟ್ರೋ ನಿಲ್ದಾಣದಲ್ಲಿ ಎಂದಿನಂತೆ ಪೊಲೀಸರು ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಸಿಐಎಸ್ಎಫ್ ಕ್ವಿಕ್ ರಿಯಾಕ್ಷನ್ ಟೀಮ್ ಸಬ್-ಇನ್ಸ್‌ಪೆಕ್ಟರ್ ಬೈರೇಂದರ್ ಕುಮಾರ್ ಅವರು ಗೇಟ್ ನಂ ಬಳಿ 8 ಬಳಿ ನಕಲಿ ನೋಟುಗಳ ಚೀಲ ಬಿದ್ದಿರುವುದು ಪತ್ತೆಯಾಗಿದೆ. 


ಕೂಡಲೇ ಸಿಐಎಸ್ಎಫ್ ನಿಯಂತ್ರಣ ಕೊಠಡಿಯ ಸ್ಟೇಷನ್ ಶಿಫ್ಟ್ ಉಸ್ತುವಾರಿಗೆ ಸಬ್ ಇನ್ಸ್‌ಪೆಕ್ಟರ್ ಭೈರೆಂದರ್ ಕುಮಾರ್ ವಿಷಯ ಮುಟ್ಟಿಸಿದ್ದಾರೆ. ಬಳಿಕ ಚೀಲದ ಒಳಗೆ 4,64,000 ರೂ. ಮೊತ್ತದ ನಕಲಿ ನೋಟುಗಳಿರುವ ಬಗ್ಗೆ ಸಿಐಎಸ್ಎಫ್ ಮತ್ತು ಡಿಎಂಆರ್ಪಿಯ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ, ಈ ಪ್ರಕರಣದ ಮುಂದಿನ ಕ್ರಮಕ್ಕಾಗಿ ನಕಲಿ ಕರೆನ್ಸಿಯೊಂದಿಗೆ ಚೀಲವನ್ನು ದೆಹಲಿ ಮೆಟ್ರೋ ರೈಲು ಪೊಲೀಸರಿಗೆ ಹಸ್ತಾಂತರಿಸಲಾಯಿತು ಎಂದು ಭಾನುವಾರ ಪೊಲೀಸರು ತಿಳಿಸಿದ್ದಾರೆ.