ನವದೆಹಲಿ: ಅಯೋಧ್ಯೆಯ ಶ್ರೀ ರಾಮ್ ಜನಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟ್‌ನ ಬ್ಯಾಂಕ್ ಖಾತೆಯಿಂದ 6 ಲಕ್ಷ ರೂ.ಗಳನ್ನು ವಂಚಿಸಲಾಗಿದೆ.ಈ ಕುರಿತಾಗಿ ಈಗ ಅಯೋಧ್ಯೆ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಪ್ರಕರಣದ ತನಿಖೆ ನಡೆಸಲು ಸೈಬರ್ ತಜ್ಞರ ತಂಡವನ್ನೂ ಕೋರಲಾಗಿದೆ.


COMMERCIAL BREAK
SCROLL TO CONTINUE READING

ವರದಿಯ ಪ್ರಕಾರ, ಲಕ್ನೋದ ಎರಡು ಬ್ಯಾಂಕುಗಳಿಂದ ಚೆಕ್  ಕ್ಲೋನಿಂಗ್ ಮೂಲಕ ಹಣವನ್ನು ತೆಗೆದುಕೊಳ್ಳಲಾಗಿದೆ.ಬ್ಯಾಂಕ್ ಆಫ್ ಬರೋಡಾ ಶಾಖೆಯಿಂದ 9.86 ಲಕ್ಷ ರೂ.ಗಳನ್ನು ಹಿಂಪಡೆಯಲು ವಂಚಕ ಮೂರನೇ ಪ್ರಯತ್ನ ಮಾಡಿದಾಗ ಈ ವಿಷಯ ಬೆಳಕಿಗೆ ಬಂದಿದೆ.


ಬ್ಯಾಂಕ್ ವ್ಯವಸ್ಥಾಪಕರು ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್ ಅವರಿಗೆ ಪರಿಶೀಲನಾ ಕರೆ ನೀಡಿದರು, ಅವರು ಅಂತಹ ಯಾವುದೇ ಚೆಕ್ ನೀಡಿಲ್ಲ ಎಂದು ನಿರಾಕರಿಸಿದರು. "ಹೆಚ್ಚಿನ ವಿಚಾರಣೆಯಲ್ಲಿ, ಹಣವನ್ನು ಮೊದಲೇ ಹಿಂತೆಗೆದುಕೊಳ್ಳಲಾಗಿದೆ ಎಂದು ಕಂಡುಬಂದಿದೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಸೆಪ್ಟೆಂಬರ್ 1 ರಂದು 2.5 ಲಕ್ಷ ರೂ.ಗಳನ್ನು ಬ್ಯಾಂಕಿನಿಂದ ತೆಗೆದುಕೊಳ್ಳಲಾಗಿದೆ ಮತ್ತು ಎರಡು ದಿನಗಳ ನಂತರ 3.5 ಲಕ್ಷ ರೂ.ಗಳನ್ನು ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.ಈಗ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ ಎಂದು ಅಯೋಧ್ಯ ವೃತ್ತ ಅಧಿಕಾರಿ ರಾಜೇಶ್ ಕುಮಾರ್ ರೈ ತಿಳಿಸಿದ್ದಾರೆ.


ಕೆಲವು ದಿನಗಳ ಹಿಂದಷ್ಟೇ ರಾಮ ಮಂದಿರಕ್ಕಾಗಿ  ದೇಣಿಗೆ ಕೋರುತ್ತಿದ್ದ ನಕಲಿ ವೆಬ್‌ಸೈಟ್ ಬೆಳಕಿಗೆ ಬಂದಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.