ನವದೆಹಲಿ: ರಾಜ್ಯಸಭೆ ಉಪಸಭಾಪತಿ ಸ್ಥಾನಕ್ಕೆ ಆಗಸ್ಟ್ 9 ರಂದು ನಡೆಯಲಿರುವ ಚುನಾವಣೆಗೆ ಬಿ.ಕೆ.ಹರಿಪ್ರಸಾದ್ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಘೋಷಣೆ ಮಾಡಿದೆ. ಎನ್​ಡಿಎ ಅಭ್ಯರ್ಥಿ ಹರಿವಂಶ ನಾರಾಯಣ ಸಿಂಗ್​ ಅವರ ವಿರುದ್ಧ ಯುಪಿಎ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.


COMMERCIAL BREAK
SCROLL TO CONTINUE READING

245 ಸಂಖ್ಯಾಬಲದ ಸದನದಲ್ಲಿ ಅಭ್ಯರ್ಥಿಯು ಗೆಲ್ಲಲು 122 ಮತಗಳು ಬೇಕಾಗುತ್ತದೆ. ಬಿಹಾರದ ಒಂದು ಸ್ಥಾನ ಖಾಲಿ ಇದೆ. ವಿಪಕ್ಷದಿಂದ ವಂದನಾ ಕಣಕ್ಕೆ ಬಿಜೆಪಿ 71 ಸಂಖ್ಯಾಬಲ ಹೊಂದಿದ್ದು ಹಾಗೂ ಮಿತ್ರಪಕ್ಷಗಳ ನೆರವಿನಿಂದ 115 ಸಂಖ್ಯೆ ತಲುಪಬಹುದಾಗಿದೆ. ಹೀಗಾಗಿ, ಎಐಎಡಿಎಂಕೆಯ 13 ಸದಸ್ಯರ ಬೆಂಬಲದ ನಿರೀಕ್ಷೆಯಿದೆ. ಇದಲ್ಲದೆ, ಬಿಜೆಡಿಯ 9 ಸದಸ್ಯರ ನೆರವು ಸಿಕ್ಕರೆ, ಬಿಜೆಪಿ ಅಭ್ಯರ್ಥಿಗೆ ಜಯ ಲಭಿಸಲಿದೆ. 


ತೆಲುಗು ದೇಶಂ ಪಾರ್ಟಿ 6 ಜನ ಸದಸ್ಯರನ್ನು ಹೊಂದಿದ್ದು, ಈಗ ಎನ್ಡಿಎ ಮೈತ್ರಿಕೂಟದಿಂದ ದೂರಾಗಿದ್ದು, ವಿಪಕ್ಷಗಳು ಟಿಡಿಪಿ ಬೆಂಬಲದ ನಿರೀಕ್ಷೆಯಲ್ಲಿದ್ದು, 117 ಮತಗಳನ್ನು ಹೊಂದಲಿದೆ. ಯುಪಿಎ ಪರ 112 ಮತಗಳಿವೆ.