ನವದೆಹಲಿ: ಪಾಲ್ಘರ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ RSS ಮುಖ್ಯಸ್ಥ ಮೋಹನ್ ಭಾಗವತ್ ಭಾನುವಾರ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಈ ಘಟನೆಯಲ್ಲಿ ಸಂತರನ್ನು ಹೊಡೆದು ಹತ್ಯೆಗೈಯಲಾಗಿದೆ. ಭಯ ಹಾಗೂ ಕ್ರೋಧದ ಮೇಲೆ ನಿಯಂತ್ರಣವಿರಲಿ. ಅಲ್ಲಿ ಸಂತರು ಯಾರೊಬ್ಬರ ಅಹಿತ ಬಯಸಿರಲಿಲ್ಲ ಎಂದು ಭಾಗವತ್ ಹೇಳಿದ್ದಾರೆ. ಇದೆ ವೇಳೆಗೆ ತಬ್ಲಿಘಿ ಜಮಾತ್ ಕುರಿತು ಕೂಡ ಹೇಳಿಕೆ ನೀಡಿರುವ ಅವರು, ಒಂದು ವೇಳೆ ಭಯ ಹಾಗೂ ಕ್ರೋಧದ ಕಾರಣ ತಪ್ಪನ್ನು ಎಸಗಿದರೆ ಇಡೀ ಸಮುದಾಯವನ್ನು ದೂಷಿಸಿ ಅವರಿಂದ ಅಂತರ ಕಾಯ್ದುಕೊಳ್ಳುವುದು ಸರಿಯಲ್ಲ ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಈ ದೇಶದಲ್ಲಿ ರೋಚ್ಚಿಗೆಬ್ಬಿಸುವ ಜನರಿಗೇನು ಕೂಡ ಕಮ್ಮಿ ಇಲ್ಲ ಹಾಗೂ ಇಂತಹ ಘಟನೆಗಳ ಲಾಭ ಪಡೆಯುವ ಶಕ್ತಿಗಳೂ ಕೂಡ ಇವೆ. ದೇಶಾದ್ಯಂತ ಕೋರೋನಾ ವೈರಸ್ ಪಸರಿಸಲೂ ಇದೂ ಕೂಡ ಒಂದು ಕಾರಣ ಎಂದು ಅವರು ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಮೋಹನ್ ಭಾಗವತ್, "ನಾವು ಲಾಕ್ ಡೌನ್ ಪಾಲಿಸಬೇಕಾಗಿದೆ. ಈ ಸಂಕಷ್ಟದ ಪರಿಸ್ಥಿತಿಯಿಂದ ಹೊರಬೀಳಬೇಕಿದೆ. ನಮಗೆ ಬಂದಿರುವ ಸಂಕಷ್ಟದಲ್ಲಿಯೂ ಕೂಡ ನಾವು ಅವಸರಗಳ ಹುಡುಕಾಟ ನಡೆಸಬೇಕಿದ್ದು, ಸ್ವದೇಶೀ ಸಂಗತಿಗಳನ್ನು ಅನುಸರಿಸಬೇಕಿದ್ದು, ನಾವು ಸ್ವಾವಲಂಭಿಗಳಾಗುವ ಅವಶ್ಯಕತೆ ಇದೆ" ಎಂದಿದ್ದಾರೆ.


ಆನ್ಲೈನ್ ನಲ್ಲಿ ಸಂಘದ ಕಾರ್ಯಕರ್ತರ ಜೊತೆಗೆ ನಡೆಸಿರುವ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, " ಭಾರತ್ ತೇರೆ ತುಕಡೆ ಕರೆಂಗೆ ಎಂದು ಹೇಳಿಕೆ ನೀಡುವವರು ಇಂತಹ ಪ್ರಯತ್ನ ನಡೆಸುತ್ತಾರೆ, ಅದರಲ್ಲಿ ರಾಜಕೀಯ ಕೂಡ ಮಧ್ಯ ಪ್ರವೇಶಿಸುತ್ತದೆ. ಇದರಿಂದ ದೂರವಿರುವ ಅವಶ್ಯಕತೆ ಇದೆ. ಎಚ್ಚರಿಕೆಯಿಂದ ಇರಬೇಕು. ನಮ್ಮ ಮನಸ್ಸಿನಿಂಗ ಯಾವುದೇ ಸಂಗತಿ ಪ್ರತಿಕಾರಾತ್ಮಕವಾಗಿ ಹೊರಬೀಳಬಾರದು. ಭಾರತದ ಎಲ್ಲ ಜನರು ಭಾರತ ಮಾತೆಯ ಪುತ್ರರಾಗಿದ್ದಾರೆ, ನಮ್ಮ ಬಂಧುಗಳಾಗಿದ್ದಾರೆ. ಎಲ್ಲ ಸಮುದಾಗಳ ಮುಖಂಡರು ತಮ್ಮ ತಮ್ಮ ಸಮುದಾಯಗಳ ಜನರಿಗೆ ಇದನ್ನು ಮನವರಿಕೆ ಮಾಡಿಕೊಡುವ ಅವಶ್ಯಕತೆ ಇದೆ" ಎಂದಿದ್ದಾರೆ.


ಇದೇ ವೇಳೆ ಲಾಕ್ ಡೌನ್ ಅವಧಿಯಲ್ಲಿ ನೀರು-ಗಾಳಿಯ ಶುದ್ಧೀಕರಣವಾಗಿದೆ. ಇದರ ಕುರಿತು ಯೋಚಿಸುವ ಅಗತ್ಯತೆ ಇದೆ. ಲಾಕ್ ಡೌನ್ ಅವಧಿಯ ಬಳಿಕ ಪುನಃ ಉದ್ಯೋಗ ಸೃಷ್ಟಿಗಾಗಿ ಹೊಸ ಆಯಾಮಗಳನ್ನು ಅನುಸರಿಸುವ ಅಗತ್ಯತೆ ಇದೆ. ಮಹಾಮಾರಿ ದೇಶದಿಂದ ತೊಳಗುವವರೆಗೆ ಪರಿಹಾರ ಕಾರ್ಯಗಳನ್ನು ನಾವು ಮುಂದುವರೆಸುವ ಅವಶ್ಯಕತೆ ಇದೆ, ಕೊವಿಡ್ 19 ಸಾಂಕ್ರಾಮಿಕದಿಂದ ಪ್ರಭಾವಿತರಾಗಿರುವವರ ಎಲ್ಲರಿಗೂ ಕೂಡ ಸಹಾಯ ಮಾಡಬೇಕಿದೆ" ಎಂದು ಭಾಗವತ್ ಹೇಳಿದ್ದಾರೆ.