`ಎರಡು ಮಕ್ಕಳ ಕಾನೂನಿನ ಕುರಿತು ನಾನು ಮಾತನಾಡಿಲ್ಲ`
ನಮಗೆ ಚುನಾವಣೆಯ ಚಿಂತೆ ಇಲ್ಲ, ನಮಗೆ ಮತಗಳ ಚಿಂತೆ ಕೂಡ ಇಲ್ಲ ಎಂದು ಮೋಹನ್ ಭಾಗವತ್ ಹೇಳಿದ್ದಾರೆ.
ಬರೇಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕರಾಗಿರುವ ಡಾ.ಮೋಹನ್ ಭಾಗವತ್ ರವಿವಾರ ಬರೇಲಿ ತಲುಪಿದ್ದಾರೆ. 'ಭವಿಷ್ಯದ ಭಾರತದ ಕುರಿತು ಸಂಘದ ದೃಷ್ಟಿಕೋನ' ಉಪನ್ಯಾಸದ ವೇಳೆ ಮಾತನಾಡಿರುವ ಅವರು, ಜನಸಂಖ್ಯೆಯ ಕುರಿತು ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳನ್ನು ತಾವು ಖಂಡಿಸುತ್ತಿರುವುದಾಗಿ ಹೇಳಿದ್ದಾರೆ. ಜೊತೆಗೆ ಪರೋಕ್ಷವಾಗಿ ವಿರೋಧಿ ಪಕ್ಷಗಳ ಮೇಲೆ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಜನಸಂಖ್ಯಾ ಕಾನೂನು ಅಥವಾ ಎರಡು ಮಕ್ಕಳ ಕಾನೂನಿನ ಕುರಿತು ಮಾಧ್ಯಮಗಳಲ್ಲಿ ಬಿತ್ತರಗೊಳ್ಳುತ್ತಿರುವ ವರದಿಗಳನ್ನು ಖಂಡಿಸಿರುವ ಮೋಹನ್ ಭಾಗವತ್, ಪರೋಕ್ಷವಾಗಿ ವಿರೋಧಿ ಪಕ್ಷಗಳ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ವೇಳೆ ಮಾತನಾಡಿರುವ ಅವರು, "ತಾವು ಎರಡು ಮಕ್ಕಳ ಕಾನೂನಿನ ಮಾತನಾಡಿಲ್ಲ. ಜನಸಂಖ್ಯೆ ಒಂದು ಸಮಸ್ಯೆಯ ಜೊತೆಗೆ ಒಂದು ಸಾಧನವೂ ಆಗಿದ್ದು, ಈ ಕುರಿತು ಚಿಂತನೆ ನಡೆಸಿ ನೀತಿ ರೂಪಿಸುವ ಅಗತ್ಯತೆ ಇದೆ. ಸರ್ಕಾರ ಈಗಾಗಲೇ ನೀತಿ ರೂಪಿಸಿದ್ದು, ನೀತಿಯ ಕುರಿತು ಹೆಚ್ಚಿನ ಚಿಂತನೆ ನಡೆಸುವುದು ಅಗತ್ಯವಿದೆ. ಎಲ್ಲರ ಒಮ್ಮತ ಪಡೆದು ನೀತಿ ರೂಪಿಸುವ ಅಗತ್ಯತೆ ಇದ್ದು , ಬಳಿಕ ಅದು ಎಲ್ಲರ ಮೇಲೂ ಜಾರಿಗೊಳ್ಳಬೇಕು" ಎಂದಿದ್ದಾರೆ.
ಸಂಘದ ಇತಿಹಾಸದಲ್ಲಿ ಇಂತಹ ಸಾಕಷ್ಟು ಪ್ರಸಂಗಗಳು ಎದುರಾಗಿದ್ದು, ಸಂಘವನ್ನು ಮೊಟಕುಗೊಳಿಸಲು ಸಾಕಷ್ಟು ಪ್ರಯತ್ನಗಳು ನಡೆದವು, ಆದರೆ, ಸಂಘ ಅವುಗಳನ್ನೆಲ್ಲ ಮೀರಿ ಬೆಳೆದಿದೆ. ಜನರಲ್ಲಿ ಭೀತಿ ಹುಟ್ಟಿಸಿ ಗುಂಪು ತಯಾರಿಸಬಹುದು, ಆದರೆ ಗುಂಪು ತಯಾರಿಸುವುದರಲ್ಲಿ ನಮ್ಮ ನಂಬಿಕೆ ಇಲ್ಲ. ನಾವು ಯಾರನ್ನೂ ಸೋಲಿಸಲು ಬಯಸುವುದಿಲ್ಲ. ನಮಗೆ ಯಾರೂ ಶತ್ರುಗಳೂ ಇಲ್ಲ. ಈ ರೀತಿ ಅಥವಾ ಆ ರೀತಿ ವರ್ತಿಸುವರು ಎಲ್ಲರೂ ನಮ್ಮವರೇ. ನಾವು ಅವರೆಲ್ಲರನ್ನು ಒಂದುಗೂಡಿಸಲು ಬಯಸುತ್ತೇವೆ. ಅವರಲ್ಲಿ ಯಾರನ್ನೂ ಕೈಬಿಡಲಾಗುವುದಿಲ್ಲ. ಅವರೆಲ್ಲರೂ ನಮ್ಮವರೇ. ಯಾರ ಮೇಲೂ ನಮ್ಮ ದ್ವೇಷ, ಕೋಪ ಇಲ್ಲ . ಪ್ರಚಾರಕ್ಕಾಗಿ ಕೈಗೊಳ್ಳುವ ಈ ರೀತಿಯ ನಿಲುವುಗಳು ಅಜ್ಞಾನದ ಕಾರಣ ನಿರ್ಮಾಣಗೊಳ್ಳುತ್ತವೆ.
ನಮಗೆ ಚುನಾವಣೆಯ ಚಿಂತೆ ಇಲ್ಲ, ನಮಗೆ ಮತಗಳ ಚಿಂತೆ ಕೂಡ ಇಲ್ಲ ಎಂದು ಮೋಹನ್ ಭಾಗವತ್ ಹೇಳಿದ್ದಾರೆ. ಇದೇ ವೇಳೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕೇಂದ್ರ ಸಚಿವ ಸಂತೋಷ್ ಗಂಗ್ವಾರ್, ಜನಸಂಖ್ಯೆಯ ಕುರಿತು ಸಂಘದ ಮುಖ್ಯಸ್ಥರು ನೀಡಿರುವ ದಿಕ್ಕು ಹಾಗೂ ನಿರ್ದೇಶನಗಳ ಮೇಲೆ ನಾವು ಕಾರ್ಯನಿರ್ವಹಿಸಬೇಕಾಗಿದೆ. CAA ಹಾಗೂ NRC ವಿರೋಧಿಸುವವರಿಗೆ, ಈ ಕಾಯ್ದೆಯ ಕುರಿತು ಸರಿಯಾದ ಮಾಹಿತಿಯೇ ಇಲ್ಲ ಎಂದಿದ್ದಾರೆ.