ಟ್ವಿಟ್ಟರ್ ಖಾತೆ ತೆರೆದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
ಭಾಗವತ್ ಜೊತೆಗೆ, ಸುರೇಶ್ ಜೋಶಿ, ಸುರೇಶ್ ಸೋನಿ, ಕೃಷ್ಣ ಗೋಪಾಲ್, ವಿ.ಭಾಗಯ್ಯ, ಅರುಣ್ ಕುಮಾರ್ ಮತ್ತು ಅನಿರುದ್ ದೇಶಪಾಂಡೆ ಅವರು ಮೈಕ್ರೋ ಬ್ಲಾಗಿಂಗ್ ಸೈಟ್‌ಗೆ ಸೇರಿದ್ದಾರೆ.
ನವದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್)ದ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಸಂಘಟನೆಯ ಇತರ ಆರು ರಾಷ್ಟ್ರೀಯ ಕಾರ್ಯಕರ್ತರು ಟ್ವಿಟರ್‌ನಲ್ಲಿ ತಮ್ಮ ಖಾತೆ ತೆರೆದಿದ್ದಾರೆ.
ಭಾಗವತ್ ಜೊತೆಗೆ, ಸುರೇಶ್ ಜೋಶಿ, ಸುರೇಶ್ ಸೋನಿ, ಕೃಷ್ಣ ಗೋಪಾಲ್, ವಿ.ಭಾಗಯ್ಯ, ಅರುಣ್ ಕುಮಾರ್ ಮತ್ತು ಅನಿರುದ್ ದೇಶಪಾಂಡೆ ಅವರು ಮೈಕ್ರೋ ಬ್ಲಾಗಿಂಗ್ ಸೈಟ್‌ಗೆ ಸೇರಿದ್ದಾರೆ. ಇವರೆಲ್ಲರ ಟ್ವಿಟ್ಟರ್ ಖಾತೆಗಳೂ ವೆರಿಫೈಡ್ ಆಗಿವೆ.
ಆರ್‌ಎಸ್‌ಎಸ್ ನಲ್ಲಿ ಇದುವರೆಗೂ ಯಾರೂ ಸಹ ಟ್ವಿಟ್ಟರ್ ಖಾತೆ ಹೊಂದಿರಲಿಲ್ಲ. ಆದರೀಗ ಸಂಘಟನೆಯ ಮುಖ್ಯಸ್ಥ ಮೋಹನ್ ಭಾಗವತ್ ಟ್ವಿಟ್ಟರ್ ಸೇರುತ್ತಿದ್ದಂತೆಯೇ ಇತರ ಆರು ಮಂದಿ ಭಗವತ್ ಅವರನ್ನು ಅನುಸರಿಸಿದ್ದಾರೆ. ಆರ್‌ಎಸ್‌ಎಸ್ ನ ಅಧಿಕೃತ ಟ್ವಿಟರ್ ಹ್ಯಾಂಡಲ್ 1.3 ಮಿಲಿಯನ್ ಫಾಲೋವರ್ ಗಳನ್ನು ಹೊಂದಿದ್ದು, ಇದುವರೆಗೂ ಈ ಮೂಲಕವೇ ಸಂಘಟನೆಯ ಎಲ್ಲಾ ಮಾಹಿತಿಗಳು, ಹೇಳಿಕೆಗಳನ್ನು ಪೋಸ್ಟ್ ಮಾಡಲಾಗುತ್ತಿತ್ತು.