ನವದೆಹಲಿ : ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರ ವೈಯಕ್ತಿಕ ಟ್ವಿಟರ್ ಖಾತೆಯಿಂದ ಕಳೆದ 6 ತಿಂಗಳಿಂದ ಯಾವುದೇ ಟ್ವಿಟ್ ಮಾಡದ ಕಾರಣ, ಅವರ ಖಾತೆಗೆ ನೀಡಲಾಗಿದ್ದಂತ ಬ್ಲೂ ಬ್ಯಾಡ್ಜ್ ಟಿಕ್ಕರ್ ಅನ್ನು, ಟ್ವಿಟ್ಟರ್ ತೆಗೆದು ಹಾಕಿತ್ತು. ಇದೀಗ ಈ ಬಳಿಕ RSS ನ ಅನೇಕ ನಾಯಕರ ಟ್ವಿಟ್ಟರ್ ಖಾತೆಯ ಬ್ಲೂ ಬ್ಯಾಡ್ಜ್ ತೆಗೆದು ಹಾಕಿ, ಮತ್ತೆ ವಿವಾದಕ್ಕೆ ಸಿಲುಕಿದೆ.


COMMERCIAL BREAK
SCROLL TO CONTINUE READING

ಐಟಿ ನಿಯಮ ಪಾಲನೆ ಮಾಡದ ಕಾರಣ ಸೇರಿದಂತೆ, ಟ್ವಿಟ್ ನಿಯಮ ಉಲ್ಲಂಘನೆ, ವಿವಾದಾತ್ಮಕ ಪೋಸ್ಟ್, ಭಾಷಣದ ಕಾರಣ ನೀಡಿ, ಟ್ವಿಟ್ಟರ್ ಅನೇಕ ರಾಜಕೀಯ ಮುಖಂಡರ ಟ್ಟಿಟ್ಟರ್ ಖಾತೆಯ ಬ್ಲೂ ಟಿಕ್(Twitter Blue Ticks) ಮಾರ್ಕ್ ಅನ್ನೇ ತೆಗೆದು ಹಾಕುತ್ತಾ ಬರುತ್ತಿದೆ. ಇಂದು ಬೆಳಿಗ್ಗೆ ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರ ವೈಯಕ್ತಿಕ ಖಾತೆಯ ಬ್ಲೂ ಟಿಕ್ ಮಾರ್ಕ್ ತೆಗೆದು ಹಾಕಿತ್ತು. ಆನಂತ್ರ ಟ್ವಿಟ್ ವಿರುದ್ಧದ ಆಕ್ರೋಶದ ಬಳಿಕ ಮರು ಸ್ಥಾಪಿಸಿತ್ತು.


ಇದನ್ನೂ ಓದಿ : Realme: ಜಿಯೋಫೋನ್‌ಗೆ ಟಕ್ಕರ್ ನೀಡಲು ಮುಂದಾದ ರಿಯಲ್ಮೆ ಫೀಚರ್ ಫೋನ್


ಈಗ ಈ ಬ್ಲೂ ವೆರಿಫೈಡ್ ಮಾರ್ಕ್ ತೆಗೆದು ಹಾಕೋದನ್ನು ಟ್ವಿಟ್ಟರ್ ಮುಂದುವರೆಸಿದ್ದು, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು(Venkaiah Naidu) ಅವರ ನಂತರ, ಟ್ವಿಟರ್ ಈಗ ಮೋಹನ್ ಭಾಗವತ್ ಅವರ 'ಬ್ಲೂ ಟಿಕ್' ಅನ್ನು ತೆಗೆದುಹಾಕಿದೆ. ಉಪರಾಷ್ಟ್ರಪತಿ ನಾಯ್ಡು ಅವರಿಂದ ಪರಿಶೀಲಿಸಿದ ಬ್ಯಾಡ್ಜ್ ಅನ್ನು ತೆಗೆದುಹಾಕಿದ ನಂತರ ಮತ್ತು ಅದನ್ನು ಪುನಃಸ್ಥಾಪಿಸಿದ ನಂತರ, ಟ್ವಿಟರ್ ಈಗ RSS ಮುಖ್ಯಸ್ಥ ಮೋಹನ್ ಭಾಗ್ವತ್ ಅವರ ಹ್ಯಾಂಡಲ್ ನಿಂದ ನೀಲಿ ಟಿಕ್ ಅನ್ನು ತೆಗೆದುಹಾಕಿದೆ. ಮೇ 2019ರಲ್ಲಿ ಟ್ವಿಟರ್ ಗೆ ಸೇರಿದ ಭಾಗ್ವತ್ 2 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದರು.


ಇದನ್ನೂ ಓದಿ : Gas Booking on Paytm: ಪೇಟಿಎಂನಲ್ಲಿ ಎಲ್ಪಿಜಿ ಬುಕ್ ಮಾಡಿ, 800 ರೂ.ವರೆಗೆ ಕ್ಯಾಶ್ಬ್ಯಾಕ್ ಪಡೆಯಿರಿ


ಮೋಹನ್ ಭಾಗವತ್(Mohan Bhagwat) ಖಾತೆ ಅಲ್ಲದೇ, RSS ಜಂಟಿ ಕಾರ್ಯದರ್ಶಿ ಕೃಷ್ಣ ಗೋಪಾಲ್, ಅರುಣ್ ಕುಮಾರ್, RSS ಮಾಜಿ ಪ್ರಧಾನ ಕಾರ್ಯದರ್ಶಿ ಸುರೇಶ್ ಜೋಷಿ ಆಲಿಯಾಸ್ ಭಯ್ಯಾಜಿ, ಮಾಜಿ ಜಂಟಿ ಪ್ರಧಾನ ಕಾರ್ಯದರ್ಶಿ ಸುರೇಶ್ ಸೋನಿ ಹಾಗೂ RSS ಸಂಪರ್ಕ ಪ್ರಮುಖ್ ಅನಿರುದ್ಧ ದೇಶಪಾಂಡೆ ಅವರ ಟ್ವಿಟ್ಟರ್ ಖಾತೆಯ ಬ್ಲೂ ಟಿಕ್ ಅನ್ನು ಕೂಡ ತೆಗೆದು ಹಾಕಿ, ಮತ್ತೆ ವಿವಾದಕ್ಕೆ ಸಿಲುಕುವಂತಾಗಿದೆ.


ಇದನ್ನೂ ಓದಿ : 7th Pay Commission : ಕೇಂದ್ರ ಸರ್ಕಾರದ ಕುಟುಂಬ ಪಿಂಚಣಿ ನಿಯಮಗಳಲ್ಲಿ ಪ್ರಮುಖ ಬದಲಾವಣೆ! ಇಲ್ಲಿದೆ ಮಾಹಿತಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ