ನವದೆಹಲಿ: ಉಕ್ರೇನ್‌ನ ಖಾರ್ಕಿವ್ ನಗರದಲ್ಲಿ 21 ವರ್ಷದ ಭಾರತೀಯ ವೈದ್ಯಕೀಯ ವಿದ್ಯಾರ್ಥಿಯ ಸಾವಿನ ಬಗ್ಗೆ ರಷ್ಯಾ ತನಿಖೆ ನಡೆಸಲಿದೆ ಎಂದು ಭಾರತದಲ್ಲಿನ ರಷ್ಯಾದ ನಿಯೋಜಿತ ರಾಯಭಾರಿ ಡೆನಿಸ್ ಅಲಿಪೋವ್ ಬುಧವಾರದಂದು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಕರ್ನಾಟಕದ ಹಾವೇರಿ ಜಿಲ್ಲೆಯ ಚಳಗೇರಿ ಮೂಲದ ನವೀನ್ ಶೇಖರಪ್ಪ ಗ್ಯಾನಗೌಡರ್ ಅವರು ಖಾರ್ಕಿವ್ ರಾಷ್ಟ್ರೀಯ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ನಾಲ್ಕನೇ ವರ್ಷದ ವೈದ್ಯಕೀಯ ವಿದ್ಯಾರ್ಥಿಯಾಗಿದ್ದು, ಮಂಗಳವಾರ ಖಾರ್ಕಿವ್‌ನಲ್ಲಿ ಶೆಲ್ ದಾಳಿಗೆ ಸಾವನ್ನಪ್ಪಿದರು.


ಇದನ್ನೂ ಓದಿ: Russia-Ukraine War: ಭಾರತೀಯ ವಿದ್ಯಾರ್ಥಿಯ ಸಾವು ಹಿನ್ನೆಲೆ, ಸಮನ್ಸ್ ಜಾರಿಗೊಳಿಸಿದ ಭಾರತ ಸರ್ಕಾರ


ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅಲಿಪೋವ್,"ನವೀನ್ ಶೇಖರಪ್ಪ ಗ್ಯಾನಗೌಡರ್ (Naveen Shekarappa Gyanagoudar) ಅವರ ಕುಟುಂಬಕ್ಕೆ ಮತ್ತು ಇಡೀ ಭಾರತ ದೇಶಕ್ಕೆ ದುರಂತದ ಬಗ್ಗೆ ನಮ್ಮ ಸಂತಾಪವನ್ನು ವ್ಯಕ್ತಪಡಿಸಲು ಬಯಸುತ್ತೇನೆ.ತೀವ್ರ ಸಂಘರ್ಷದ ಪ್ರದೇಶಗಳಲ್ಲಿ ಭಾರತೀಯ ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ರಷ್ಯಾ ತನ್ನಿಂದ ಸಾಧ್ಯವಿರುವ ಎಲ್ಲ ಪ್ರಯತ್ನವನ್ನೂ ಮಾಡುತ್ತದೆ ಮತ್ತು ಈ ದುರದೃಷ್ಟಕರ ಘಟನೆಯ ಬಗ್ಗೆ ಸೂಕ್ತ ನಡೆಸಲಿದೆ"ಎಂದು ಅವರು ಹೇಳಿದ್ದಾರೆ.


ಉಕ್ರೇನ್‌ನೊಂದಿಗಿನ ರಷ್ಯಾದ ಸಂಘರ್ಷದ ವಿಚಾರದಲ್ಲಿ ಭಾರತದ ಸಮತೋಲಿತ ನಡೆಗಾಗಿ ಧನ್ಯವಾದಗಳನ್ನು ಅರ್ಪಿಸಿದ  ರಷ್ಯಾದ ರಾಯಭಾರಿಯು ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸುವಲ್ಲಿ ಮಾಸ್ಕೋ ಬೆಂಬಲ ನೀಡಲಿದೆ ಎಂದು ಅವರು ಭರವಸೆ ನೀಡಿದರು.ಭಾರತ ದೇಶವು ಈ ಬಿಕ್ಕಟ್ಟಿನ ಆಳವನ್ನು ಆರ್ಥ ಮಾಡಿಕೊಂಡಿದೆ' ಎಂದು ಅವರು ಹೇಳಿದರು.


ರಷ್ಯಾದ ಭೂಪ್ರದೇಶದ ಮೂಲಕ ಉಕ್ರೇನ್‌ನಲ್ಲಿ ಸಿಲುಕಿರುವ ತನ್ನ ನಾಗರಿಕರನ್ನು ತುರ್ತು ಸ್ಥಳಾಂತರಿಸಲು ಭಾರತವು ರಷ್ಯಾಕ್ಕೆ ಮನವಿ ಮಾಡಿದೆ ಎಂದು ಅಲಿಪೋವ್ ಮಾಹಿತಿ ನೀಡಿದರು. ಇದಲ್ಲದೆ, ಖಾರ್ಕಿವ್ ಮತ್ತು ಪೂರ್ವ ಉಕ್ರೇನ್‌ನ ಇತರ ಪ್ರದೇಶಗಳಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸುವ ಬಗ್ಗೆ ರಷ್ಯಾ ಭಾರತೀಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ ಎಂದು ಅಲಿಪೋವ್ ಹೇಳಿದರು.


ಇದನ್ನೂ ಓದಿ: 'ಭಾರತದ ಹೆಚ್ಚುತ್ತಿರುವ ಶಕ್ತಿಯಿಂದಾಗಿ ಸ್ಥಳಾಂತರಿಸುವಿಕೆ ಸಾಧ್ಯವಾಗಿದೆ'- ಪ್ರಧಾನಿ ಮೋದಿ


'ರಷ್ಯಾದ ಪ್ರದೇಶದ ಮೂಲಕ ಅಲ್ಲಿ ಸಿಲುಕಿರುವ ಎಲ್ಲರನ್ನು ತುರ್ತು ಸ್ಥಳಾಂತರಿಸಲು ನಾವು ಭಾರತದ ವಿನಂತಿಗಳನ್ನು ಸ್ವೀಕರಿಸಿದ್ದೇವೆ. ಅಂತಹ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಮತ್ತು ಅಲ್ಲಿನ ಜನರನ್ನು ಸ್ಥಳಾಂತರಿಸಲು ಮಾನವೀಯ ಕಾರಿಡಾರ್ ಅನ್ನು ಒದಗಿಸಲು ನಾವು ಎಲ್ಲಾ ಮಾರ್ಗಗಳು ಮತ್ತು ವಿಧಾನಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ" ಎಂದು ಅವರು ಭರವಸೆ ನೀಡಿದರು.


ನವೀನ್ ಸಾವಿನ ನಂತರ, ಖಾರ್ಕಿವ್ ಮತ್ತು ಇತರ ಸಂಘರ್ಷ ವಲಯಗಳಲ್ಲಿ ಉಳಿದಿರುವ ಭಾರತೀಯ ಪ್ರಜೆಗಳಿಗೆ "ತುರ್ತು ಸುರಕ್ಷಿತ ಮಾರ್ಗ" ವನ್ನು ಖಚಿತಪಡಿಸಿಕೊಳ್ಳಲು ಭಾರತವು ರಷ್ಯಾ (Russia Ukraine War) ಮತ್ತು ಉಕ್ರೇನ್ ಎರಡೂ ರಾಯಭಾರಿಗಳನ್ನು ಕೇಳಿಕೊಂಡಿದೆ.


ನವೀನ್ ಅವರ ಸ್ನೇಹಿತರ ಪ್ರಕಾರ, ಅವರು ದಿನಸಿ ಖರೀದಿಸಲು ಹೊರಗೆ ಹೋಗಿದ್ದರು ಮತ್ತು ಅಂಗಡಿಯೊಂದರಲ್ಲಿ ಸಾಲಿನಲ್ಲಿ ಕಾಯುತ್ತಿದ್ದಾಗ ಅವರು ಸಾವನ್ನಪ್ಪಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶೃಂಗ್ಲಾ ತಿಳಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ... 
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.