ಜಮ್ಮು-ಕಾಶ್ಮೀರ: ಕೇವಲ ಹತ್ತು ನಿಮಿಷ ವಿಳಂಬವಾಗಿ ತರಗತಿಯನ್ನು ತಲುಪಿದ ವಿದ್ಯಾರ್ಥಿಗಳಿಗೆ ಶಿಕ್ಷಕನೊಬ್ಬ ಕಠಿಣ ಶಿಕ್ಷೆ ನೀಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ದೋಡಾ ಪಟ್ಟಣದಲ್ಲಿರುವ ಶಾಲೆಯಲ್ಲಿ ಬೆಳಕಿಗೆ ಬಂದಿದೆ. ಮೊದಲಿಗೆ ಬಗ್ಗಿ ಮಂಡಿಯಿಂದ ಕೈಹಾಕಿ ಕಿವಿ ಹಿಡಿಯುವಂತೆ ಶಿಕ್ಷೆ ನೀಡಿದ್ದ ಶಿಕ್ಷಕ, ಅದರಿಂದ ಸಮಾಧಾನಗೊಳ್ಳದೆ ಕ್ರೂರವಾಗಿ ಮನಬಂದಂತೆ ಥಳಿಸಿದ್ದಾನೆ. ಕ್ರೂರ ಶಿಕ್ಷಕ ನಿರ್ದಯಿಯಾಗಿ ಮಕ್ಕಳಿಗೆ ಹೊಡೆಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಳಿಕ ಸ್ಥಳೀಯ ಆಡಳಿತ ಸಕ್ರಿಯವಾಗಿದ್ದು, ಆತನ ವಿರುದ್ಧ ಕ್ರಮ ಕೈಗೊಂಡಿದೆ.


COMMERCIAL BREAK
SCROLL TO CONTINUE READING

ಮೂಲಗಳ ಪ್ರಕಾರ, ಶಿಕ್ಷಕನ ನಿರ್ದಯತೆಗೆ ಬಲಿಯಾದ ಮಕ್ಕಳು ಗುಜ್ಜರ್ ಮತ್ತು ಬಕ್ಕರ್ವಾಲ್ ಹಾಸ್ಟೆಲ್ನಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಹಾಸ್ಟೆಲ್ನಲ್ಲಿ ವಾಸಿಸುವ ಮಕ್ಕಳು ತಮ್ಮ ತರಗತಿಗೆ ಹತ್ತು ನಿಮಿಷ ತಡವಾಗಿ ಬಂದಿದ್ದಾರೆ. ಮಕ್ಕಳನ್ನು ಮಂಡಿಯೂರಿ ಕಿವಿ ಹಿಡಿಯುವಂತೆ ಶಿಕ್ಷಿಸಿದ್ದಾನೆ. ಬಹಳ ಸಮಯ ಶಿಕ್ಷೆ ಅನುಭವಿಸಿದ ಮಕ್ಕಳು ಶಿಕ್ಷಕರ ಬಳಿ ಮಾತನಾಡಲು ಮುಂದಾದಾಗ, ಕ್ರೂರವಾಗಿ ವರ್ತಿಸಿದ ಶಿಕ್ಷಕ ಮಕ್ಕಳ ಮೈ ಮೇಲೆ ಬರೆ ಬರುವ ಮಟ್ಟಿಗೆ ಹೊಡೆದಿದ್ದಾರೆ.


ಮೂಲಗಳ ಪ್ರಕಾರ, ಶಾಲೆಯಲ್ಲಿ ಹಾಜರಿದ್ದ ಇತರೆ ಶಿಕ್ಷಕರು ಮಕ್ಕಳ ಬಳಿ ನಿರ್ದಯತೆಯಿಂದ ವರ್ತಿಸುತ್ತಿರುವ ಶಿಕ್ಷಕನ ಚಿತ್ರಗಳನ್ನು ತೆಗೆದುಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಛಾಯಾಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಸ್ಥಳೀಯ ಆಡಳಿತವು ಕಾರ್ಯೋನ್ಮುಖವಾಗಿದ್ದು, ಶಿಕ್ಷಕನ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಅದೇ ಸಮಯದಲ್ಲಿ, ಈ ವಿಷಯವನ್ನು ಬಹಿರಂಗಪಡಿಸಿದ ನಂತರ, ಮಕ್ಕಳ ಪೋಷಕರು ಸಹ ದೂರನ್ನು ದಾಖಲಿಸಿದ್ದಾರೆ.


ಈ ವಿಷಯದ ಬಗ್ಗೆ, ಕಾರ್ಡಿನೆಟ್ ಚೈಲ್ಡ್ ಲೈನ್ ವಿಭಾಗ ಶಿಕ್ಷಕನು ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಹೇಳುತ್ತದೆ. ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರಾಗುವಂತೆ ಶಿಕ್ಷಕನಿಗೆ ಸೂಚನೆ ನೀಡಲಾಗಿದೆ. ಈ ವಿಷಯದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಇಲಾಖೆ ತಿಳಿಸಿದೆ.