ನವದೆಹಲಿ: ಶನಿವಾರದಂದು ಅಯ್ಯಪ್ಪ ದೇವಾಲಯದ ಯಾತ್ರಾ ಸ್ಥಳದಲ್ಲಿ ಸಂಘ ಪರಿವಾರದ ಹಿರಿಯ ನಾಯಕನನ್ನು ಬಂಧಿಸಿರುವ ಹಿನ್ನೆಲೆಯಲ್ಲಿ ಬಲಪಂಥೀಯ ಹಿಂದೂ ಸಂಘಟನೆಗಳು ಕೇರಳದಲ್ಲಿ ಮುಷ್ಕರಕ್ಕೆ ಕರೆ ನೀಡಿದೆ. 


COMMERCIAL BREAK
SCROLL TO CONTINUE READING

ಹಿಂದೂ ಐಕ್ಯವೇದಿ ರಾಜ್ಯ ಅಧ್ಯಕ್ಷ ಕೆ. ಪಿ. ಶಶಿಕಾಳ ಅವರನ್ನು ಶಬರಿಮಲೆ ಬಳಿ ಮರವಕ್ಕಂನ ಬಳಿ ಶನಿವಾರ 2.30 ಕ್ಕೆ ಬಂಧಿಸಲಾಗಿದೆ ಎಂದು ವಿಎಚ್ಪಿ ರಾಜ್ಯ ಅಧ್ಯಕ್ಷ ಎಸ್.ಆರ್.ಆರ್. ಕುಮಾರ್ ಆರೋಪಿಸಿದ್ದಾರೆ.


ಶಬರಿಮಲೆ ದೇವಸ್ಥಾನ ಶುಕ್ರವಾರ ಸಂಜೆ ಎರಡು ತಿಂಗಳ ಕಾಲ ತೀರ್ಥಯಾತ್ರೆ ಭಾಗವಾಗಿ   ಭದ್ರತೆಯ ನಡುವೆ ಪ್ರಾರಂಭವಾಯಿತು. ಇನ್ನೊಂದೆಡೆಗೆ ತೀರ್ಥಯಾತ್ರೆ ಕೈಗೊಳ್ಳಲು ಮುಂಬೈನಿಂದ ಕೊಚ್ಚಿನ್ ವಿಮಾನ ನಿಲ್ದಾಣಕ್ಕೆ ಆಗಮಿಸಿರುವ ಸಾಮಾಜಿಕ ಕಾರ್ಯಕರ್ತೆ ತೃಪ್ತಿ ದೇಸಾಯಿ ಅವರಿಗೆ ಭಕ್ತರು ವಿರೋಧ ವ್ಯಕ್ತ ಪಡಿಸಿದ ಕಾರಣ ಅವರನ್ನು 14 ಗಂಟೆಗಳ ಕಾಲ ವಿಮಾನ ನಿಲ್ದಾಣದಲ್ಲಿ ಸೆರೆಹಿಡಿಯಲಾಗಿತ್ತು. 


ಇದೇ ವೇಳೆ ಆರು ಮಹಿಳಾ ಸಹೋದ್ಯೋಗಿಗಳೊಂದಿಗೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ ದೇಸಾಯಿ ಅವರು ದೇವಾಲಯಕ್ಕೆ ಭೇಟಿ ನೀಡಿದರೆ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೂ ಸಹ ಅಯ್ಯಪ್ಪನ ದರ್ಶನವನ್ನು ಪಡೆಯಲು ಶೀಘ್ರದಲ್ಲೇ ರಾಜ್ಯಕ್ಕೆ ಮರಳಲು ಸಂಕಲ್ಪ ಮಾಡಿದರು.


ಮುಂಬಯಿ ವಿಮಾನ ನಿಲ್ದಾಣದ ಹೊರಗಡೆ ಪ್ರತಿಭಟನಾಕಾರರು ಸಹ ಕಾರ್ಯಕರ್ತರನ್ನು ಸ್ವಾಗತಿಸಿದರು. ಸಿಐಎಸ್ಎಫ್ ಮತ್ತು ಮುಂಬೈ ಪೊಲೀಸ್ ಸಿಬ್ಬಂದಿ ಅವರಿಗೆ ಬೆಂಗಾವಲು ನೀಡಬೇಕಾಯಿತು.