ಬಿಜೆಪಿ ಸೇರಿದ ಸಾಧ್ವಿ ಪ್ರಗ್ಯಾ ಠಾಕೂರ್; ಭೋಪಾಲ್ನಲ್ಲಿ ದಿಗ್ವಿಜಯ್ ಸಿಂಗ್ ವಿರುದ್ಧ ಸ್ಪರ್ಧೆ?
ಒಂದು ವೇಳೆ ಪಕ್ಷದ ಹೈಕಮ್ಯಾಂಡ್ ನಿರ್ಧರಿಸಿ ಟಿಕೆಟ್ ನೀಡಿದರೆ, ದಿಗ್ವಿಜಯ ಸಿಂಗ್ ವಿರುದ್ಧ ಸ್ಪರ್ಧಿಸುತ್ತೇನೆ ಎಂದು ಸಾಧ್ವಿ ಪ್ರಗ್ಯಾ ಠಾಕೂರ್ ಹೇಳಿದ್ದಾರೆ.
ಭೋಪಾಲ್: ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಆರೋಪಿ, ಆರು ವರ್ಷ ಸೆರೆ ವಾಸ ಅನುಭವಿಸಿದಿದ್ದ ಸಾಧ್ವಿ ಪ್ರಗ್ಯಾ ಠಾಕೂರ್ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಅಲ್ಲದೆ, ಮಧ್ಯಪ್ರದೇಶದ ಭೋಪಾಲ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ವಿರುದ್ಧ ಸಾಧ್ವಿ ಪ್ರಗ್ಯಾ ಕಣಕ್ಕಿಳಿಯುವ ಸಾಧ್ಯತೆಯಿದೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಾಧ್ವಿ ಪ್ರಗ್ಯಾ ಠಾಕೂರ್, ಒಂದು ವೇಳೆ ಪಕ್ಷದ ಹೈಕಮ್ಯಾಂಡ್ ನಿರ್ಧರಿಸಿ ಟಿಕೆಟ್ ನೀಡಿದರೆ, ದಿಗ್ವಿಜಯ ಸಿಂಗ್ ವಿರುದ್ಧ ಸ್ಪರ್ಧಿಸುತ್ತೇನೆ. ಎಬಿವಿಪಿ ಕಾರ್ಯಕರ್ತೆಯಾಗಿರುವ ನನಗೆ ಭೋಪಾಲ್ ಕ್ಷೇತ್ರದ ಪ್ರತಿ ಮನೆ, ಕುಟುಂಬವೂ ಪರಿಚಿತ. ನಾನು ರಾಷ್ಟ್ರೀಯವಾದಿ, ದಿಗ್ವಿಜಯ ಸಿಂಗ್ ರಾಷ್ಟ್ರದ ವಿರುದ್ಧ ಮಾತನಾಡುವವರು. ಹೀಗಾಗಿ ಅವರು ನನಗೆ ಪ್ರತಿಸ್ಪರ್ಧಿಯೇ ಅಲ್ಲ" ಎಂದಿದ್ದಾರೆ.
ತಮ್ಮ ನಿರ್ಧಾರ ಪ್ರಕಟಿಸುವುದಕ್ಕೂ ಮುನ್ನ ಬಿಜೆಪಿ ಕಚೇರಿಯಲ್ಲಿ ಹಿರಿಯ ನಾಯಕರಾದ ಶಿವರಾಜ್ ಸಿಂಗ್ ಚೌಹಾಣ್, ರಾಮಲಾಲ್, ಪ್ರಭಾತ್ ಜಾ ಅವರನ್ನು ಭೇಟಿ ಮಾಡಿದ ಪ್ರಗ್ಯಾ "ಭೂಪಾಲ್ ನ ಚುನಾವಣೆ ರಾಷ್ಟ್ರೀಯತೆ ಮತ್ತು ಧರ್ಮಯುದ್ಧದ ಆರಂಭ ಎಂದಿದ್ದಾರೆ.