ನವದೆಹಲಿ: 1984ರ ಸಿಖ್ ವಿರೋಧಿ ದಂಗೆ ಬಗ್ಗೆ ತಾವು ನೀಡಿದ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾದ ಬೆನ್ನಲ್ಲೇ ಕಾಂಗ್ರೆಸ್ ಮುಖಂಡ ಸ್ಯಾಮ್ ಪಿತ್ರೋಡ ಕಹ್ಸಮೆ ಕೇಳಿದ್ದಾರೆ.


COMMERCIAL BREAK
SCROLL TO CONTINUE READING

ಸಿಖ್ ವಿರೋಧಿ ದಂಗೆ 'ಹುವಾ ತೋ ಹುವಾ' ಎಂದು ಹೇಳಿಕೆ ನೀಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೆ, ಕಾಂಗ್ರೆಸ್ ಪಕ್ಷ ಈ ಹೇಳಿಕೆಯಿಂದ ಮುಜಗರಕ್ಕೊಳಗಾಗಿತ್ತು. ಈ ಬೆನ್ನಲ್ಲೇ ಶುಕ್ರವಾರ ಸಂಜೆ ಕ್ಷಮೆ ಕೇಳಿದ್ದಾರೆ.


"ನಂಗೆ ಹಿಂದಿ ಜ್ಞಾನ ಕಡಿಮೆ. ಇಂಗ್ಲೀಷ್ನಲ್ಲಿ ಹೇಳುವುದನ್ನು ಭಾಷಾಂತರಿಸಿ ಹಿಂದಿಯಲ್ಲಿ ಹೇಳಲು ಪ್ರಯತ್ನಿಸಿದೆ. ಆದರೆ ಅದು ಇಷೆಲ್ಲಾ ವಿವಾದಕ್ಕೆ ಕಾರಣವಾಗಿದೆ. ಇದಕ್ಕೆ ನಾನು ವಿಷಾದಿಸುತ್ತೇನೆ. 1984ರಲ್ಲಿ ಏನು ನಡೆದಿದ್ಯೋ ಅದು ನಿಜವಾಗ್ಲೂ ಕೆಟ್ಟ ಘಟನೆಯಾಗಿತ್ತು ಅಂತಾ ಹೇಳೋದಷ್ಟೇ ನನ್ನ ಉದ್ದೇಶವಾಗಿತ್ತು" ಎಂದು ಸ್ಯಾಮ್ ಪಿತ್ರೋಡ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿ ಕ್ಷಮೆ ಕೋರಿದರು. 


ಮತ್ತೊಂದೆಡೆ, ಸ್ಯಾಮ್ ಪಿತ್ರೋಡ ನೀಡಿರುವ ಹೇಳಿಕೆ ಅವರ ವೈಯಕ್ತಿಕವಾದುದೇ ಹೊರತು ಪಕ್ಷದ ಹೇಳಿಕೆಯಲ್ಲ ಎಂದಿರುವ ಕಾಂಗ್ರೆಸ್, ಪಕ್ಷದ ಮುಖ್ನದರು ಹೇಳಿಕೆಗಳನ್ನು ನೀಡುವಾಗ ನಿಗಾ ವಹಿಸುವಂತೆ ತಿಳಿಸಿದೆ.