ನವದೆಹಲಿ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಈಗ 2024 ರ ಚುನಾವಣೆಗೆ ಮೂವರು ಪ್ರಧಾನಮಂತ್ರಿ ಅಭ್ಯರ್ಥಿಗಳನ್ನು ಹೆಸರಿಸಿದ್ದಾರೆ.


COMMERCIAL BREAK
SCROLL TO CONTINUE READING

ಹಿಂದಿ ದೈನಿಕ ನವಭಾರತ್ ಟೈಮ್ಸ್ ವರದಿ ಮಾಡಿದಂತೆ, ಅಖಿಲೇಶ್ ಯಾದವ್ ಅವರು ಮೂರು ಪ್ರಮುಖ ರಾಜಕಾರಣಿಗಳನ್ನು ಹೆಸರಿಸಿದ್ದಾರೆ. ಅದರಲ್ಲಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಮತ್ತು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಹೆಸರನ್ನು ಉಲ್ಲೇಖಿಸಲಾಗಿದೆ.


ಇದನ್ನೂ ಓದಿ: Keerthy Suresh‌ Marriage : ಶೀಘ್ರದಲ್ಲೇ ನಟಿ ಕೀರ್ತಿ ಸುರೇಶ್ ಮದುವೆ


ಇತ್ತೀಚಿನ ದಿನಗಳಲ್ಲಿ ಪ್ರತಿಪಕ್ಷಗಳ ಪ್ರಧಾನಿ ಅಭ್ಯರ್ಥಿಗೆ ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ಹೆಸರು ಚರ್ಚೆಗೆ ವೇಗ ಪಡೆದುಕೊಂಡಿದೆ. ನಿತೀಶ್ ಕುಮಾರ್ ಅವರ ದಂಗೆಯ ರಾಜಕೀಯವನ್ನು 2017 ರಲ್ಲಿ ಅಖಿಲೇಶ್ ಯಾದವ್ ಅವರು ತೀವ್ರವಾಗಿ ಟೀಕಿಸಿದರು. ಆದರೆ, ನಿತೀಶ್ ಅವರು ಮತ್ತೆ ಪಕ್ಷವನ್ನು ಬದಲಾಯಿಸಿ ಆರ್ಜೆಡಿ, ಕಾಂಗ್ರೆಸ್ ಜೊತೆ ಕೈಜೋಡಿಸಿದ್ದಾರೆ.ಆದರೆ ಅವರಿಗೆ ಮಿತ್ರ ಪಕ್ಷಗಳಿಂದ ಎಷ್ಟರ ಮಟ್ಟಿಗೆ ಬೆಂಬಲ ಸಿಗುತ್ತದೆ ಎನ್ನುವುದನ್ನು ನೋಡಬೇಕಾಗಿದೆ.


ಇದನ್ನೂ ಓದಿ: BBK OTT: ಭಾರತದ ರಾಷ್ಟ್ರಪತಿ ನರೇಂದ್ರ ಮೋದಿ ಎಂದ ‘ಬಿಗ್ ಬಾಸ್’ ಸ್ಪರ್ಧಿ!


ಇನ್ನೊಂದೆಡೆಗೆ ಕಾಂಗ್ರೆಸ್ ಪಕ್ಷವು ಲೋಕಸಭಾ ಚುನಾವಣೆಯನ್ನು ರಾಹುಲ್ ಗಾಂಧಿ ನೇತೃತ್ವದಲ್ಲಿ ಎದುರಿಸಲಾಗುವುದು ಎಂದು ಹೇಳುತ್ತಿದೆ. ಒಂದು ವೇಳೆ ಅವರು ಸ್ಪರ್ಧೆಯಿಂದ ಹಿಂದೆ ಸರಿದರೆ ಕಾಂಗ್ರೆಸ್ ಪಕ್ಷವು ಶರದ್ ಪವಾರ್, ಕೆಸಿಆರ್ ಮತ್ತು ಮಮತಾ ಬ್ಯಾನರ್ಜೀ ಈ ಮೂವರಲ್ಲಿ ಯಾರನ್ನು ಪ್ರಧಾನಿ ಅಭ್ಯರ್ಥಿಗೆ ಸ್ವೀಕರಿಸುತ್ತದೆಯೋ ನೋಡಬೇಕು. ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲವಿಲ್ಲದೆ ಯಾವುದೇ ಅಭ್ಯರ್ಥಿ ಬಿಜೆಪಿ ವಿರುದ್ಧ ಪ್ರಬಲ ಶಕ್ತಿಯಾಗಲು ಸಾಧ್ಯವಿಲ್ಲ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.