ಕೇಂದ್ರ ಸರ್ಕಾರದ ಉಜ್ವಲ್ ಯೋಜನೆ ಬಗ್ಗೆ ಸಂಶಯ ವ್ಯಕ್ತಪಡಿಸುತ್ತದೆ ಈ ಸಂಬಿತ್ ಪಾತ್ರಾ ವೀಡಿಯೋ
ಭಾನುವಾರ ಬಿಜೆಪಿ ಸಂಬಿತ್ ಪಾತ್ರ ಶೇರ್ ಮಾಡಿರುವ ವೀಡಿಯೋ ಈಗ ಮೋದಿ ಸರ್ಕಾರದ ಉಜ್ವಲ ಯೋಜನೆಯ ಯಶಸ್ಸಿನ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿದೆ.
ನವದೆಹಲಿ: ಭಾನುವಾರ ಬಿಜೆಪಿ ಸಂಬಿತ್ ಪಾತ್ರ ಶೇರ್ ಮಾಡಿರುವ ವೀಡಿಯೋ ಈಗ ಮೋದಿ ಸರ್ಕಾರದ ಉಜ್ವಲ ಯೋಜನೆಯ ಯಶಸ್ಸಿನ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿದೆ.
ಈ ಯೋಜನೆ ಪ್ರಮುಖವಾಗಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಉಚಿತ ಅಡುಗೆ ಅನಿಲದ ಸಂಪರ್ಕವನ್ನು ನೀಡುತ್ತದೆ.2016 ರಲ್ಲಿ ಚಾಲನೆ ದೊರೆತಿದ್ದ ಯೋಜನೆಯನ್ನು ಮೋದಿ ಸರ್ಕಾರದ ಯಶಸ್ವಿ ಯೋಜನೆಗಳಲ್ಲಿ ಒಂದು ಎಂದು ಬಿಂಬಿಸಲಾಗಿತ್ತು.
ಆದರೆ ಈಗ ಪುರಿ ಕ್ಷೇತ್ರದ ಅಭ್ಯರ್ಥಿಯಾಗಿರುವ ಸಂಬಿತ್ ಪಾತ್ರಾ ಪ್ರಚಾರದ ವೇಳೆ ಬಡ ಮಹಿಳೆಯ ಮನೆಗೆ ಹೋಗಿದ್ದಾಗ.ಅಲ್ಲಿ ಮಹಿಳೆಯೊಬ್ಬಳು ಎಂದರೆ ಕಟ್ಟಿಗೆಯನ್ನು ಸುಡುವ ಮೂಲಕ ಅಡುಗೆ ಮಾಡುತ್ತಿದ್ದಾಳೆ.ಈಗ ಈ ವಿಡಿಯೋ ದೃಶ್ಯ ಟ್ವಿಟ್ಟರ್ ನಲ್ಲಿ ಹಲವರಿಗೆ ಅಚ್ಚರಿ ಮೂಡಿಸಿದೆ.
ಇದು ಈಗ ಟ್ವಿಟ್ಟರ್ ನಲ್ಲಿ ಸಂಬಿತ್ ಪಾತ್ರಾ ಈ ವೀಡಿಯೋವೊಂದನ್ನು ಶೇರ್ ಮಾಡಿ " ಇದು ನನ್ನ ಮನೆ, ತಾಯಿ ನನಗೆ ಊಟವನ್ನು ಬಡಿಸಿದ್ದಾಳೆ. ನಾನು ಕೂಡ ಅವಳಿಗೆ ನನ್ನ ಕೈಯಾರೆ ತಿನ್ನಿಸಿದೆ. ಮಾನವನಿಗೆ ಮಾಡುವ ಸೇವೆಯೇ ದೇವರಿಗೆ ಮಾಡುವ ಅತಿ ದೊಡ್ಡ ಸೇವೆ ಎಂದು ನಾನು ನಂಬಿದ್ದೇನೆ ಎಂದು ಒರಿಯಾ ಭಾಷೆಯಲ್ಲಿ ಬರೆದುಕೊಂಡಿದ್ದಾರೆ.
ಕೇಂದ್ರ ಸರ್ಕಾರವು ಅಂತರಾಷ್ಟ್ರೀಯ ಮಹಿಳಾ ದಿನದಂದು 7 ಕೋಟಿ ಕುಟುಂಬಗಳಿಗೆ ಗ್ಯಾಸ್ ಸಂಪರ್ಕ ಕಲ್ಪಿಸಿದೆ ಎಂದು ಹೇಳಿತ್ತು.ಪ್ರಧಾನಿ ಮೋದಿ ಸ್ವಾತಂತ್ರ ದಿನದಂದು 2020ರ ವೇಳೆಗೆ 8 ಕೋಟಿ ಗ್ಯಾಸ್ ಸಂಪರ್ಕದ ಗುರಿ ತಲುಪುವ ಬಗ್ಗೆ ಹೇಳಿದ್ದರು.ಈಗ ಈ ವಿಡಿಯೋ ನೋಡಿದ ಜನರು ಉಜ್ವಲ ಯೋಜನೆ ಯಶಸ್ವಿಯಾಗಿರುವ ಬಗ್ಗೆ ಹಲವರು ಸಂಶಯ ವ್ಯಕ್ತಪಡಿಸಿದ್ದಾರೆ.