ಕೊನೆಗೂ ಭಾರತದಲ್ಲಿ ಬಿಡುಗಡೆಯಾಯ್ತು ಸ್ಯಾಮ್ಸಂಗ್ ಗ್ಯಾಲಕ್ಸಿ S10 LITE, ಬೆಲೆ ಎಷ್ಟು?
ಸ್ಯಾಮ್ಸಂಗ್ ಬಿಡುಗಡೆಗೊಳಿಸಿರುವ ಅಗ್ಗದ ಶ್ರೇಣಿಯ ಸ್ಮಾರ್ಟ್ ಫೋನ್ ಗಳಲ್ಲಿ ಒಂದಾಗಿರುವ ಈ ಫೋನ್ ಮಾರಾಟ ಫೆಬ್ರುವರಿ 4ಕ್ಕೆ ಆರಂಭವಾಗಲಿದೆ.
ನವದೆಹಲಿ:ಖ್ಯಾತ ಸ್ಮಾರ್ಟ್ ಫೋನ್ ತಯಾರಿಕ ಕಂಪನಿ ಸ್ಯಾಮ್ಸಂಗ್ ಕೊನೆಗೂ ಭಾರತದಲ್ಲಿ ತನ್ನ ಸ್ಯಾಮ್ಸಂಗ್ ಗ್ಯಾಲಕ್ಸಿ S10ನ ಲಘು ಆವೃತ್ತಿ ಬಿಡುಗಡೆಗೊಳಿಸಿದೆ. ಕಳೆದ ಹಲವು ದಿನಗಳಿಂದ ಈ ಫೋನ್ ಬಿಡುಗಡೆಗಾಗಿ ಸ್ಯಾಮ್ಸಂಗ ಪ್ರಿಯರು ಕಾದು ಕುಳಿತಿದ್ದರು. ಇದು ಸ್ಯಾಮ್ಸಂಗ್ ನ ಕೈಗೆಟಕುವ ದರದ ಸ್ಮಾರ್ಟ್ ಪೋನ್ ಆವ್ರುತ್ತಿಯಾಗಿದೆ. ಫೆಬ್ರುವರಿ 4 ರಂದು ಮಾರುಕಟ್ಟೆಯಲ್ಲಿ ಈ ಫೋನ್ ಮಾರಾಟಕ್ಕೆ ಲಭ್ಯವಿರಲಿದೆ. ಆದರೆ, ವಿವಿಧ ಇ-ಕಾಮರ್ಸ್ ತಾಣಗಳಲ್ಲಿ ಇದರ ಆನ್ಲೈನ್ ಬುಕಿಂಗ್ ಆರಂಭಗೊಂಡಿದೆ.
SAMSUNG GALAXY S10 LITE ವೈಶಿಷ್ಟ್ಯಗಳೇನು?
SAMSUNG GALAXY S10 LITE 6.7 ಇಂಚಿನ ಫುಲ್ HD+ ಸ್ಕ್ರೀನ್ ಹೊಂದಿದೆ. ಇದು ಸ್ಯಾಮ್ಸಂಗ್ ನ ಸೂಪರ್ ಅಮೊಲೆಡ್ ಡಿಸ್ಪ್ಲೇಯೊಂದಿಗೆ ಬರಲಿದೆ.ಈ ಸ್ಮಾರ್ಟ್ ಫೋನ್ ನಲ್ಲಿ 48MP, 12MP ಹಾಗೂ 5MP ನ ಒಟ್ಟು ಮೂರು ರೇರ್ ಕ್ಯಾಮರಾಗಳಿವೆ. ಇದರ ಜೊತೆಗೆ 32MP ಸೇಲ್ಫಿ ಕ್ಯಾಮರಾ ಕೂಡ ಇರಲಿದೆ. ಇದು 4500mAh ಬ್ಯಾಟರಿ ಬ್ಯಾಕಪ್ ಹೊಂದಿರಲಿದೆ. 8ಜಿಬಿ RAM, 128 GB ROM (ಆಂತರಿಕ ಶೇಖರಣೆ) ಸಾಮರ್ಥ್ಯ ಹೊಂದಿರುವ ಈ ಫೋನ್ ನ ಶೇಖರಣಾ ಸಾಮರ್ಥ್ಯವನ್ನು 1 TB ವರೆಗೆ ವಿಸ್ತರಿಸಬಹುದಾಗಿದೆ. ಈ ಫೋನ್ ಕ್ವಾಲಕಾಮ್ ಸ್ನ್ಯಾಪ್ ಡ್ರಾಗನ್ 855(SM8150) ಪ್ರಾಸೆಸ್ಸರ್ ಹೊಂದಿದೆ.
SAMSUNG GALAXY S10 LITE ಬೆಲೆ ಎಷ್ಟು?
ಕಂಪನಿ SAMSUNG GALAXY S10 LITE ನ ಮಾರುಕಟ್ಟೆ ಬೆಲೆಯನ್ನು ರೂ.39,999 ಕ್ಕೆ ನಿಗದಿಪಡಿಸಿದೆ. ಈ ಫೋನ್ ಅನ್ನು ಒಂದುವೇಳೆ ನೀವು ಮುಂಗಡವಾಗಿ ಬುಕಿಂಗ್ ಮಾಡಿದರೆ, ರೂ.5000 ರಿಯಾಯಿತಿ ಸಿಗಲಿದೆ. ಅಷ್ಟೇ ಅಲ್ಲ ಮುಂಗಡವಾಗಿ ಬುಕಿಂಗ್ ಮಾಡಿದರೆ, ಒಂದು ಬಾರಿ ಸ್ಕ್ರೀನ್ ರಿಪ್ಲೇಸ್ಮೆಂಟ್ ಜೊತೆಗೆ ರೂ.1999 ಬೆಲೆಯ ಆಕ್ಸಿಡೆಂಟಲ್ ಕವರೇಜ್ ಕೂಡ ಸಿಗಲಿದೆ. ಖ್ಯಾತ ಇ-ಕಾಮರ್ಸ್ ತಾಣ ಫ್ಲಿಪ್ ಕಾರ್ಟ್ ನಲ್ಲಿ ಇನ್ನೂ ಕೆಲವು ಆಕರ್ಷಕ ರಿಯಾಯಿತಿಗಳು ಸಿಗುತ್ತಿವೆ.