ಗುಜರಾತ್: ಗುಜರಾತ್ ನ ಭುಜ್ ಜಿಲ್ಲೆಯಲ್ಲಿ ಒಂದು ಬೆಚ್ಚಿಬೀಳಿಸುವ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿನ ಒಂದು ಇನ್ಸ್ಟಿಟ್ಯೂಟ್  ನ ಪ್ರಿನ್ಸಿಪಾಲ್, ವಿದ್ಯಾರ್ಥಿನಿಯರ ಹಾಸ್ಟೆಲ್ ಹೊರಗಡೆ ಸ್ಯಾನಿಟರಿ ಪ್ಯಾಡ್ ಸಿಕ್ಕಿದ್ದನ್ನು ನೆಪವಾಗಿಸಿಕೊಂಡು, ಪಿರಿಯಡ್ಸ್ ಪರೀಕ್ಷಿಸಲು ಹಾಸ್ಟೆಲ್ ನ ಸುಮಾರು 60 ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ್ದಾನೆ. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಭಾರಿ ಕೋಲಾಹಲ ಸೃಷ್ಟಿಯಾಗಿದೆ. ಒಂದೆಡೆ ಈ ಘಟನೆಯಿಂದ ವಿದ್ಯಾರ್ಥಿನಿಯರಲ್ಲಿ ಭಾರಿ ಕೋಪ ಉಂಟಾಗಿದ್ದರೆ, ಇನ್ನೊಂದೆಡೆ ಪೋಷಕರೂ ಕೂಡ ಪ್ರಿನ್ಸಿಪಾಲ್ ವಿರುದ್ಧ FIR ದಾಖಲಿಸಲು ಸಿದ್ಧತೆ ನಡೆಸಿದ್ದಾರೆ. ಅತ್ತ ಕಾಲೇಜು ಆಡಳಿತ ಮಂಡಳಿ ಈ ಪ್ರಕರಣವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ.


COMMERCIAL BREAK
SCROLL TO CONTINUE READING

ಭುಜ್ ಜಿಲ್ಲೆಯ ಮಿರ್ಜಾಪುರ್ ರೋಡ ಮೇಲೆ ನೂತನ ಸ್ವಾಮಿನಾರಾಯಣ ದೇವಸ್ಥಾನದ ವತಿಯಿಂದ ನಡೆಸಲಾಗುತ್ತಿರುವ ಶಹಜಾನಂದ್ ಗರ್ಲ್ಸ್ ಇನ್ಸ್ಟಿಟ್ಯೂಟ್ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಮಾಸಿಕ ಸರದಿಯನ್ನು ಚೆಕ್ ಮಾಡಲು ಬಟ್ಟೆ ಬಿಚ್ಚಿಸಲಾಗಿದೆ. ಸ್ವಾಮಿ ನಾರಾಯಣ ಸಂಪ್ರದಾಯದ ಪ್ರಕಾರ ಮಾಸಿಕ ಸರದಿಯ ವೇಳೆ ಯುವತಿಯರಿಗೆ ಬೇರೆ ಆಹಾರ ನೀಡಲಾಗುತ್ತದೆ. ಮಾಸಿಕ ಸರದಿ ಬಂದ ವಿದ್ಯಾರ್ಥಿನಿಯನ್ನು ಇತರೆ ವಿದ್ಯಾರ್ಥಿನಿಯರಿಂದ ದೂರ ಕೂರಿಸಲಾಗುತ್ತದೆ.


ಘಟನೆಯ ಕುರಿತು ಹೇಳಿಕೆ ನೀಡಿರುವ ಆಡಳಿತ ಮಂಡಳಿ, "ಹಾಸ್ಟೆಲ್ ನ ಎಲ್ಲ 60 ವಿದ್ಯಾರ್ಥಿನಿಯರನ್ನು ಕಾಲೇಜಿನ ಒಂದು ಕೊಠಡಿಯಲ್ಲಿ ಕರೆಸಲಾಗಿದೆ. ಬಳಿಕ ಕಾಲೇಜಿನ ಪ್ರಿನ್ಸಿಪಾಲ್ ಆಗಿರುವ ರೀತಾ ರನಿಗಾ, ಆಡಳಿತಗಾರ್ತಿ ಅನಿತಾ, ಪ್ರಾಧ್ಯಾಪಕಿಯಾಗಿರುವ ರಮಿಲಾ ಹಾಗೂ ನಯನಾ ವಿದ್ಯಾರ್ಥಿನಿಯರನ್ನು ಸರದಿಯಲ್ಲಿ ಪ್ರಾಂಶುಪಾಲೆಯ ಚೇಂಬರ್ ನಲ್ಲಿರುವ ವಾಶ್ ರೂಮ್ ಗೆ ಕರೆದೊಯ್ದು ಅವರ ಪಿರಿಯಡ್ಸ್ ಚೆಕ್ ಮಾಡಿದ್ದಾರೆ. ಈ ವೇಳೆ ಕೋಲಾಹಲ ಸೃಷ್ಟಿಯಾಗಿದ್ದು, ಸಹಜಾನಂದ್ ಟ್ರಸ್ಟ್ ಮಂಡಳಿ ಬ್ಯಾಕ್ ಫುಟ್ ಗೆ ಜಾರಿದೆ. ವಿದ್ಯಾರ್ಥಿನಿಯರ ಪೋಷಕರೂ ಕೂಡ ಹಾಸ್ಟೆಲ್ ಗೆ ಧಾವಿಸಿ, ಘಟನೆ ಒಂದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದಿದ್ದಾರೆ. ಈ ಘಟನೆಯ ಸುದ್ದಿ ತಿಳಿಯುತ್ತಲೇ ಘಟನಾ ಸ್ಥಳಕ್ಕೆ ಧಾವಿಸಿರುವ ಕಚ್ಚ್ ವಿಶ್ವವಿದ್ಯಾಲಯದ ಉಪಕುಲಪತಿ ಹಾಗೂ ಮಹಿಳಾ ಪ್ರಾಧ್ಯಾಪಕರ ತಂಡ ಘಟನೆಯ ಕುರಿತು ತನಿಖೆ ಆರಂಭಿಸಿದ್ದಾರೆ.