ನವದೆಹಲಿ : ಪಿಎಂಸಿ ಬ್ಯಾಂಕಿಂಗ್ ಹಗರಣದ ಹಿನ್ನೆಲೆಯಲ್ಲಿ ಇಡಿ ನೊಟೀಸ್ ಪಡೆದಿರುವ ಸಂಜಯ್ ರಾವತ್ ಪತ್ನಿ ವರ್ಷ ರಾವತ್ ಇಂದು ಇಡಿ ಮುಂದೆ ಹಾಜರಾಗುತ್ತಿಲ್ಲ. ಇ.ಡಿ ವಿಚಾರಣೆಗೆ ಹಾಜರಾಗಲು ಜನವರಿ 5 ತನಕ ಸಮಯ ಕೇಳಿದ್ದಾರೆ. ವರ್ಷಾ ರಾವತ್  ಜಾರಿ ನಿರ್ದೇಶನಾಲಯದ ಮುಂದೆ ಇಂದು ಹಾಜರಾಗಬೇಕಿತ್ತು. 


COMMERCIAL BREAK
SCROLL TO CONTINUE READING

ಶಿವಸೇನಾ (Shivasena) ಸಂಸದ ಸಂಜಯ್ ರಾವತ್ (Sanjay Raut) ಅವರ ಪತ್ನಿ ವರ್ಷಾ ರಾವತ್ (Varsha Raut) ಗೆ ಜಾರಿ ನಿರ್ದೇಶನಾಲಯ ಕಳುಹಿಸಿರುವ ನೊಟೀಸ್ ಮಹಾರಾಷ್ಟ್ರ ರಾಜಕಾರಣದಲ್ಲಿ ಬಹುದೊಡ್ಡ ಸಂಚಲನ ಸೃಷ್ಟಿಸಿದೆ. 


ವರ್ಷಾ ರಾವತ್ ಅವರಿಗೆ ಕಳೆದ ಭಾನುವಾರ ನೊಟೀಸ್ ರವಾನಿಸಿರುವ ಜಾರಿ ನಿರ್ದೇಶನಾಲಯವು (ED) ಡಿಸೆಂಬರ್ 29, ಅಂದರೆ ಇಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಜಾರಿ ನಿರ್ದೇಶನಾಲಯ ರವಾನಿಸಿರುವ ಮೂರನೇ ನೊಟೀಸ್ ಇದಾಗಿದೆ ಎಂದು ಹೇಳಲಾಗಿದೆ. 


ALSO READ: ನಟ ಸೋನು ಸೂದ್ ಬಿಜೆಪಿಯ ಮುಖವಾಡ ಎಂದ ಶಿವಸೇನೆ ನಾಯಕ ಸಂಜಯ್ ರೌತ್


ಉದ್ದವ್ ಠಾಕ್ರೆ ನೇತೃತ್ವದಲ್ಲಿ ನಡೆದ ತುರ್ತು ಸಭೆ :
 ಆರೋಗ್ಯ ಕಾರಣದಿಂದಾಗಿ ವರ್ಷಾ ರಾವತ್ ಹಿಂದಿನ ಎರಡು ನೊಟೀಸ್ ಗಳಿಗೆ ಸ್ಪಂದಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಮೂರನೇ ನೊಟೀಸ್ ಜಾರಿಯಾಗಿತ್ತು.  ಇಡಿ ಮೂರನೇ ನೊಟೀಸ್ ಜಾರಿ ಮಾಡಿದ ಬೆನ್ನಲ್ಲೇ , ಸೋಮವಾರ ಮುಖ್ಯಮಂತ್ರಿ ಉದ್ದವ್ ಠಾಕ್ರೆ (Uddhav Thackeray) ನೇತೃತ್ವದ ಮಹಾವಿಕಾಸ ಅಘಾಡಿ (MVA) ಸರ್ಕಾರದ ಹಿರಿಯ ನಾಯಕರ ಸಭೆ ನಡೆಸಿದ್ದರು.  ಸಂಸದ ಸಂಜಯ್ ರಾವತ್ ಕೂಡಾ ಈ ಸಭೆಯಲ್ಲಿ ಹಾಜರಿದ್ದರು. ಸುಮಾರು ಒಂದೂವರೆ ಗಂಟೆ ನಡೆದ  ಈ ಸಭೆಯಲ್ಲಿ ಸಮನ್ಸ್ ಕುರಿತಂತೆ ವಕೀಲರ ಸಲಹೆ ಪಡೆಯಲು ನಿರ್ಧರಿಸಲಾಗಿದೆ.  ವರ್ಷಾ ರಾವತ್ ಇಡಿ ಮುಂದೆ ಹಾಜರಾಗಬೇಕೇ, ಅಥವಾ ಬೇಡವೇ ಎಂಬುದು ವರ್ಷಾ ರಾವತ್ ಅವರ ವೈಯುಕ್ತಿಕ ನಿರ್ಧಾರವಾಗದೇ, ಮಹಾ ವಿಕಾಸ ಅಘಾಡಿ ಸರ್ಕಾರದ ರಾಜಕೀಯ ನಿರ್ಧಾರವಾಗಲಿದೆ ಎಂದು ಮೂಲಗಳು ತಿಳಿಸಿವೆ.


ALSO READ: ಶಿವಸೇನೆ ಮುಖಂಡ ಸಂಜಯ್ ರೌತ್ ಗೆ ಬೆದರಿಕೆ ಕರೆ ಮಾಡಿದ್ದಕ್ಕಾಗಿ ಕಂಗನಾ ಅಭಿಮಾನಿ ಬಂಧನ


ಪಿಎಂಸಿ ಬ್ಯಾಂಕ್ ಹಗರಣದ ಹಿನ್ನೆಲೆಯಲ್ಲಿ ಮನಿಲಾಂಡರಿಂಗ್ ಕಾಯಿದೆ ಅನ್ವಯ ವರ್ಷಾ ರಾವತ್ ಅವರಿಗೆ ಇಡಿ ಸಮನ್ಸ್ ಜಾರಿಯಾಗಿತ್ತು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G


iOS Link - https://apple.co/3loQYe
 
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.