ನವದೆಹಲಿ: ನಟಿ, ಗಾಯಕಿ ಹಾಗೂ ನೃತ್ಯಗಾರ್ತಿ ಸಪ್ನಾ ಚೌಧರಿ ತನ್ನ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಜನರನ್ನು ಹುಚ್ಚೇಬ್ಬಿಸುವ ಪರ್ಫಾರ್ಮೆನ್ಸ್ ಗಾಗಿ ಫೇಮಸ್ ಆಗಿದ್ದಾರೆ. ಹಲವಾರು ವರ್ಷಗಳಿಂದ ಸಪ್ನಾ ಹಾಡು ಮತ್ತು ನೃತ್ಯ ಅಭಿಮಾನಿಗಳಿಗೆ ಮರೆಯಲಾಗದ ಅನುಭವ ನೀಡುತ್ತಿವೆ. ದೇಸೀ ಕ್ವೀನ್ ಎಂದೇ ಖ್ಯಾತ ಸಪ್ನಾ ಚೌಧರಿ ಕುರಿತಾದ ಮತ್ತೊಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳಿಂದ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.


COMMERCIAL BREAK
SCROLL TO CONTINUE READING

ಈ ವಿಡಿಯೋದಲ್ಲಿ ಡಾನ್ಸರ್ ಸಪ್ನಾ ಚೌಧರಿ ತನ್ನ ಜಬರ್ದಸ್ತ್ ಹಾವ ಭಾವಗಳ ಮೂಲಕ ಅಭಿಮಾನಿಗಳ ಹೃದಯ ಬಡಿತ ಹೆಚ್ಚಿಸುತ್ತಿದ್ದಾಳೆ. ವಿಡಿಯೋದಲ್ಲಿ ಅಪಾರ ಸಂಖ್ಯೆಯಲ್ಲಿ ನೆರೆದ ಅಭಿಮಾನಿಗಳು ಸಪ್ನಾ ಚೌಧರಿ ಅವರ ಲೈವ್ ಪರ್ಫಾರ್ಮೆನ್ಸ್ ವಿಕ್ಷೀಸಿದ್ದಾರೆ. ಸಪ್ನಾ ಕೂಡ ತನ್ನ ಮೋಹಕ ಹಾವಭಾವಗಳ ಮೂಲಕ ಹೆಜ್ಜೆ ಹಾಕಿದ್ದಾರೆ.


ವೀಡಿಯೊ ವೀಕ್ಷಿಸಿ..
 




ತನ್ನ ಫ್ಯಾನ್ಸ್ ಗಳ ಜೊತೆ ಬೆರೆತು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಮತ್ತು ವಿಡಿಯೋಗಳನ್ನು ಶೇರ್ ಮಾಡುವುದರಲ್ಲಿ ಸಪ್ನಾ ಚೌದರಿ ನಿರತರಾಗಿರುತ್ತಾರೆ. ಸದ್ಯ ಸಪ್ನಾ ಸ್ಟೇಜ್ ಷೋ ಮತ್ತು ಡಾನ್ಸ್ ಶೋಗಳಲ್ಲಿ ಭಾರಿ ಬ್ಯೂಸಿ ಆಗಿದ್ದಾರೆ. ಅಷ್ಟೇ ಅಲ್ಲ ಟಿಕ್ ಟಾಕ್ ನಲ್ಲಿಯೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಈ ರೀತಿಯ ಇತರೆ ಆಪ್ ಗಳ ಮೇಲೂ ಕೂಡ ಸಕ್ರೀಯರಾಗಿರುವ ಸಪ್ನಾ ಒಂದೆಡೆ ತಮ್ಮದೇ  ಡಾನ್ಸ್ ನ  ವಿಡಿಯೋಗಳನ್ನು ಹರಿಬಿಟ್ಟರೆ, ಇನ್ನೊಂದೆಡೆ ಹಾಸ್ಯಪ್ರದಾನ ವಿಡಿಯೋಗಳನ್ನು ಕೂಡ ಹಂಚಿಕೊಳ್ಳುತ್ತಾರೆ.