ಬೆಂಗಳೂರು : ಗುಜರಾತ್ ಮತ್ತು ಕರ್ನಾಟಕ ಅಂಚೆ ವಲಯದಲ್ಲಿ ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಭಾರತೀಯ ಅಂಚೆ ಇಲಾಖೆ ನೇಮಕಾತಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಪ್ರಕ್ರಿಯೆ 21 ಡಿಸೆಂಬರ್ 2020 ರಿಂದ ಪ್ರಾರಂಭವಾಗಿದೆ. ಸರ್ಕಾರಿ ಕೆಲಸಕ್ಕೆ ಅರ್ಜಿ ಸಲ್ಲಿಸಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು (Sarkari Naukri) 2021 ಜನವರಿ 20 ರೊಳಗೆ ಅರ್ಜಿ ಸಲ್ಲಿಸಬೇಕು.  ಈ ಪೋಸ್ಟ್‌ಗಳಿಗೆ ಆನ್‌ಲೈನ್ ಮೂಲಕ ಸಲ್ಲಿಸುವ ಅಪ್ಲಿಕೇಶನ್‌ಗಳು ಮಾತ್ರ ಮಾನ್ಯವಾಗಿರುತ್ತವೆ.


COMMERCIAL BREAK
SCROLL TO CONTINUE READING

10 ನೇ ತರಗತಿ ಪಾಸ್ ಆದವರು ಅರ್ಜಿ ಸಲ್ಲಿಸಬಹುದು :  
ಆಸಕ್ತ ಅಭ್ಯರ್ಥಿಗಳು ಕನಿಷ್ಠ ಶೈಕ್ಷಣಿಕ ಅರ್ಹತೆ ಜೊತೆಗೆ ಮಾನ್ಯತೆ ಪಡೆದ ಸಂಸ್ಥೆಯಿಂದ 10 ನೇ ತರಗತಿ ಉತ್ತೀರ್ಣರಾಗಿರಬೇಕು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳ ಕನಿಷ್ಠ ವಯಸ್ಸನ್ನು 18 ವರ್ಷ ಮತ್ತು ಗರಿಷ್ಠ ವಯಸ್ಸನ್ನು 40 ವರ್ಷ ಎಂದು ನಿಗದಿಪಡಿಸಲಾಗಿದೆ. ಈ ಹುದ್ದೆಗಳಿಗೆ ಅಭ್ಯರ್ಥಿಗಳ ಆಯ್ಕೆ ಅರ್ಹತಾ ಪಟ್ಟಿಯನ್ನು ಆಧರಿಸಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿ ಅಧಿಸೂಚನೆಗಳನ್ನು ಪರಿಶೀಲಿಸಬಹುದು.


ಶೀಘ್ರದಲ್ಲೇ ಅಪ್ಲೈ ಮಾಡಿ :


  • ನೋಂದಣಿ ಮತ್ತು ಅರ್ಜಿ ಶುಲ್ಕ ಸಲ್ಲಿಕೆ ಪ್ರಾರಂಭ - ಡಿಸೆಂಬರ್ 21, 2020

  • ನೋಂದಣಿ ಮತ್ತು ಅರ್ಜಿ ಶುಲ್ಕ ಸಲ್ಲಿಕೆಗೆ ಕೊನೆಯ ದಿನಾಂಕ - 20 ಜನವರಿ 2021


ಅಪ್ಲಿಕೇಶನ್ ಆನ್‌ಲೈನ್‌ನಲ್ಲಿರುತ್ತದೆ :
ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಅಂಚೆ ಇಲಾಖೆಯ (Postal Department) ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಅಲ್ಲಿ ನೀಡಿರುವ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ ಮತ್ತು ಓದಿ. ಇದರ ಆಧಾರದ ಮೇಲೆ ಮತ್ತು ಕೋರಿದ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಅಭ್ಯರ್ಥಿಗಳ ಆಯ್ಕೆ ಅರ್ಹತಾ ಪಟ್ಟಿ (Merit List) ಯನ್ನು ಆಧರಿಸಿರುತ್ತದೆ.


ಇದನ್ನೂ ಓದಿ - JOBS: ಡಿಗ್ರಿ ಮುಗಿಸಿದವರಿಗೆ ಗುಡ್​ ನ್ಯೂಸ್​: SSCಯಲ್ಲಿ 6,506 ಹುದ್ದೆಗಳ ಭರ್ತಿಗೆ ಅರ್ಜಿ!


ಅರ್ಜಿ ಶುಲ್ಕ : 


  • ಜನರಲ್ / ಒಬಿಸಿ / ಇಡಬ್ಲ್ಯೂಎಸ್ ಪುರುಷ ವರ್ಗಕ್ಕೆ 100 ರೂ.ಗಳ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ.

  • ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ ಮತ್ತು ಮಹಿಳಾ ವಿಭಾಗವು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ.


ಖಾಲಿಯಿರುವ ಹುದ್ದೆಗಳು :


  • ಒಟ್ಟು 4269 ಹುದ್ದೆಗಳು ಖಾಲಿ ಇವೆ

  • ಗ್ರಾಮೀಣ ಡಾಕ್ ಸೇವಕ್ (ಗುಜರಾತ್) - 1826 ಪೋಸ್ಟ್ಗಳು

  • ಗ್ರಾಮೀಣ ಡಾಕ್ ಸೇವಕ್ (ಕರ್ನಾಟಕ) - 2443 ಹುದ್ದೆಗಳು


ಇದನ್ನೂ ಓದಿ -  CEIL ನಲ್ಲಿ 109 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.