Sarva Pitru Amavasya 2023 : ಅಮವಾಸ್ಯೆಗೆ ಹಿಂದೂ ಧರ್ಮದಲ್ಲಿ ಮಹತ್ತರವಾದ ಪ್ರಾಮುಖ್ಯತೆ ಇದೆ. ನವರಾತ್ರಿಯ ಆರಂಭದ ಮೊದಲು, ಮಹಾಲಯ ಸೇರಿಕೊಳ್ಳುತ್ತದೆ, ಇದನ್ನು ʼಸರ್ವ ಪಿತೃ ಅಮವಾಸ್ಯೆʼ ಎಂದು ಕರೆಯಲಾಗುತ್ತದೆ. ಇದು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದ್ದು, ಶ್ರಾದ್ಧ ಅವಧಿಯ ಕೊನೆಯ ದಿನವನ್ನು ಸೂಚಿಸುತ್ತದೆ. ಈ ದಿನದಂದು ಹಿಂದೂಗಳು ಪಿತೃ ಶಾಂತಿಗಾಗಿ ಪಿಂಡದಾನ ಮಾಡುತ್ತಾರೆ.


COMMERCIAL BREAK
SCROLL TO CONTINUE READING

ಅಲ್ಲದೆ, ಈ ವಿಶೇಷ ದಿನದಂದು ಶ್ರಾದ್ಧಾ ಮಾಡುವುದರಿಂದ ಪೂರ್ವಜರ ಆತ್ಮಕ್ಕೆ ಶಾಶ್ವತ ಶಾಂತಿ ಲಭಿಸುತ್ತದೆ. ಸರ್ವ ಪಿತೃ ಅಮಾವಾಸ್ಯೆಯೊಂದಿಗೆ ಪಿತೃ ಪಕ್ಷವು ಕೊನೆಗೊಳ್ಳುತ್ತದೆ. ಬನ್ನಿ ಈ ದಿನದ ದಿನಾಂಕ, ಸಮಯ ಮತ್ತು ಮಹತ್ವದ ಬಗ್ಗೆ ಸಂಪೂರ್ಣವಾಗಿ ತಿಳಿಯೋಣ.


ಇದನ್ನೂ ಓದಿ: 178 ವರ್ಷಗಳ ಬಳಿಕ ಸೂರ್ಯ ಗ್ರಹಣದಂದು ಈ ಯೋಗ ! ಮೂರು ರಾಶಿಯವರಿಗೆ ರಾಜ ವೈಭೋಗ


ಸರ್ವ ಪಿತೃ ಅಮವಾಸ್ಯೆ 2023: ದಿನಾಂಕ ಮತ್ತು ಸಮಯ


  • ಅಮವಾಸ್ಯೆ ಶ್ರಾದ್ಧ ದಿನಾಂಕ: ಅಕ್ಟೋಬರ್ 14, 2023 (ಶನಿವಾರ)

  • ಕುಟುಪ್ ಮುಹೂರ್ತ - 11:44 AM ನಿಂದ 12:30 PM

  • ರೋಹಿಣ ಮುಹೂರ್ತ - 12:30 PM ರಿಂದ 01:16 PM

  • ಅಪರಾಹ್ನ ಕಾಲ - 01:16 PM ರಿಂದ 03:35 PM

  • ಅಮವಾಸ್ಯೆ ತಿಥಿ ಆರಂಭ - ಅಕ್ಟೋಬರ್ 13, 2023 ರಂದು ರಾತ್ರಿ 09:50 ಕ್ಕೆ

  • ಅಮಾವಾಸ್ಯೆ ತಿಥಿ ಕೊನೆಗೊಳ್ಳುತ್ತದೆ - ಅಕ್ಟೋಬರ್ 14, 2023 ರಂದು ರಾತ್ರಿ 11:24


 


ಸರ್ವ ಪಿತೃ ಅಮಾವಾಸ್ಯೆಯ ಮಹತ್ವ : ಪೂರ್ವಜರ ತಿಥಿ ಅಥವಾ ಶ್ರಾದ್ಧ ಕಾರ್ಯ ಹಾಗೂ ತರ್ಪಣ ಮತ್ತು ಪಿಂಡದಾನ ಮಾಡಲು ಈ ದಿನ ತುಂಬಾ ವಿಶೇಷವಾಗಿದೆ. ದೃಕ್ ಪಂಚಾಂಗದ ಪ್ರಕಾರ, "ಯಾರಾದರೂ ತಮ್ಮ ಪೂರ್ವಜರ ತಿಥಿ ಅಥವಾ ಶ್ರಾದ್ಧವನ್ನು ಮಾಡಿಲ್ಲವಾದರೆ, ಈ ದಿನದಂದು ಮಾಡುವ ಶಾದ್ಧಾ ಕುಟುಂಬದಲ್ಲಿನ ಎಲ್ಲಾ ಹಿರಿಯರ ಆತ್ಮಕ್ಕೆ ಶಾಂತಿಯನ್ನು ನೀಡುತ್ತದೆ. ಒಂದು ವೇಳೆ ನೀವು ನಿಮ್ಮ ಪೂರ್ವಜರ ಮರಣ ವಾರ್ಷಿಕೋತ್ಸವ ಮರೆತಿದ್ದರೆ ಈ ತಿಥಿಯಂದು ಶ್ರಾದ್ಧ ಮಾಡಬಹುದು. ಆದ್ದರಿಂದ ಈ ಅಮವಾಸ್ಯೆಯನ್ನು ಸರ್ವಪಿತ್ರ ಮೋಕ್ಷ ಅಮಾವಾಸ್ಯೆ ಎಂದೂ ಕರೆಯುತ್ತಾರೆ.


ಇದನ್ನೂ ಓದಿ: ದೇವರ ಕೋಣೆಯಲ್ಲಿ ಈ ವಸ್ತು ಇದ್ದರೆ ನವರಾತ್ರಿಗೂ ಮುನ್ನ ತೆಗೆದು ಬಿಡಿ ! ನಿಮ್ಮ ಮೇಲಿರುವುದು ದುರ್ಗೆಯ ಸಂಪೂರ್ಣ ಕೃಪಾ ಕಟಾಕ್ಷ


ಪಿತೃಪಕ್ಷದ ಸಮಯದಲ್ಲಿ ಅಗಲಿದ ಪೂರ್ವಜರ ಆತ್ಮವು ಮರಳಿ ಕುಟುಂಬವನ್ನು ಸಂಪರ್ಕಿಸುತ್ತದೆ ಎಂದು ಅನೇಕ ಹಿಂದೂಗಳು ನಂಬುತ್ತಾರೆ. ಪೂರ್ವಜರ ಆತ್ಮಕ್ಕೆ ಶಾಂತಿ ಸಿಗಲಿಲ್ಲವೆಂದರೆ ಜೀವನದಲ್ಲಿ ಸಾಕಷ್ಟು ನಷ್ಟ ಅನುಭವಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ. ಸಂಪತ್ತಿನ ನಷ್ಟ, ಕುಟುಂಬದ ಸಮಸ್ಯೆಗಳು ಮತ್ತು ಇತರ ಸಮಸ್ಯೆಗಳೂ ಸಹ ಪ್ರಾರಂಭವಾಗುತ್ತವೆ. ಆದ್ದರಿಂದ ತಮ್ಮ ಹಿರಿಯರಿಗೆ ಯಾರಾದರೂ ಪಿಂಡ ಪ್ರಧಾನ ಮಾಡಲು ಮರೆತಿದ್ದರೆ, ಈ ದಿನ ಮಾಡುವ ಮೂಲಕ ಹಿರಿಯರ ಆತ್ಮಕ್ಕೆ ಶಾಂತಿ ನೀಡಬಹುದು.


ಸರ್ವ ಪಿತೃ ಅಮಾವಾಸ್ಯೆಯನ್ನು ಮಹಾಲಯ ಅಮಾವಾಸ್ಯೆ ಎಂದೂ ಕರೆಯುತ್ತಾರೆ. ಪಶ್ಚಿಮ ಬಂಗಾಳದಲ್ಲಿ ವಿಶೇಷವಾಗಿ, ಮಹಾಲಯ ಅಮವಾಸ್ಯೆಯು ದುರ್ಗಾಪೂಜಾ ಉತ್ಸವದ ಆರಂಭವನ್ನು ಸೂಚಿಸುತ್ತದೆ. ಈ ದಿನದಂದು ದುರ್ಗಾ ದೇವಿಯು ಭೂಮಿಗೆ ಇಳಿದಳು ಎಂದು ನಂಬಲಾಗಿದೆ.


ಸರ್ವ ಪಿತೃ ಅಮಾವಾಸ್ಯೆ 2023ಯಂದು ಮಾಡಬೇಕಾದ ಮತ್ತು ಮಾಡಬಾರದ ಕೆಲಸಗಳು


  • ನೀವು ಶ್ರಾದ್ಧವನ್ನು ಮಾಡುತ್ತಿದ್ದರೆ, ನೀವು ಬಿಳಿ ಬಟ್ಟೆಗಳನ್ನು ಧರಿಸಬೇಕು.

  • ಯಾವಾಗಲೂ ನದಿ ಅಥವಾ ಸರೋವರದ ದಡದಲ್ಲಿ ಪಿಂಡದಾನ ಮಾಡಿ

  • ಪೂರ್ವಜರಿಗೆ ಹೂವುಗಳನ್ನು ಅರ್ಪಿಸಿ

  • ಸರ್ವಪಿತೃ ಅಮಾವಾಸ್ಯೆಯಂದು ಗೌರವಾನ್ವಿತ ಬ್ರಾಹ್ಮಣರಿಗೆ ಊಟ ಬಡಿಸಿ

  • ಕಡಲೆ, ಕೆಂಪು ಉದ್ದು, ಹಸಿರು ಸಾಸಿವೆ, ಬಾರ್ಲಿ, ಜೀರಿಗೆ, ಮೂಲಂಗಿ, ಕಪ್ಪು ಉಪ್ಪುಗಳಿಂದ ದೂರವಿರಿ. , ಈ ದಿನ ಸೋರೆಕಾಯಿ, ಸೌತೆಕಾಯಿ ಮತ್ತು ಹಳಸಿದ ಊಟ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.