ನವದೆಹಲಿ: ಚೀನಾದೊಂದಿಗೆ ಎಲ್‌ಎಸಿಯಲ್ಲಿ  ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ, ಉಪಗ್ರಹ ಚಿತ್ರಗಳು ಚೀನಾ ದೇಶವು ಭಾರತ ಭೂಪ್ರದೇಶಕ್ಕೆ ನುಸುಳಿದೆ ಎನ್ನುವುದನ್ನು ತೋರಿಸುತ್ತದೆ ಎಂದು ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.


COMMERCIAL BREAK
SCROLL TO CONTINUE READING

ಹಿಂದಿಯಲ್ಲಿ ಟ್ವೀಟ್  ಮಾಡಿರುವ ರಾಹುಲ್ ಗಾಂಧಿ' ಯಾರೂ ಒಳನುಗ್ಗಿಲ್ಲ ಮತ್ತು ನಮ್ಮ ಭೂಪ್ರದೇಶವನ್ನು ಯಾರೂ ಆಕ್ರಮಿಸಿಕೊಂಡಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ, ಆದರೆ ಪಂಗೊಂಗ್ ಸರೋವರದ ಬಳಿಯ ಚೀನಾ ಭಾರತ್ ಮಾತಾ ಪವಿತ್ರ ಭೂಮಿಯನ್ನು ಆಕ್ರಮಿಸಿಕೊಂಡಿದೆ ಎಂದು ಉಪಗ್ರಹ ಚಿತ್ರಗಳು ಸ್ಪಷ್ಟವಾಗಿ ತೋರಿಸುತ್ತವೆ' ಎಂದು ಕಿಡಿ ಕಾರಿದ್ದಾರೆ.


ಪ್ರಧಾನಿ Narendra Modi ಅವರನ್ನು 'Surender' Modi ಎಂದು ಕರೆದು ಪೇಚಿಗೆ ಸಿಲುಕಿದ Rahul Gandhi

ಜೂನ್ 15 ರಂದು ಪೂರ್ವ ಲಡಾಕ್‌ನ ಗಾಲ್ವಾನ್ ಕಣಿವೆಯಲ್ಲಿ ಚೀನಾದ ಪಿಎಲ್‌ಎ ಪಡೆಗಳೊಂದಿಗೆ ಅಭೂತಪೂರ್ವ ಹಿಂಸಾತ್ಮಕ ಘರ್ಷಣೆಯಲ್ಲಿ ಅಧಿಕಾರಿ ಸೇರಿದಂತೆ 20 ಭಾರತೀಯ ಸೈನಿಕರು ಸಾವನ್ನಪ್ಪಿದ್ದರು.