ನವದೆಹಲಿ: ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (ಎಸ್ಬಿಐ) ಖಾತೆಯನ್ನು ಹೊಂದಿದ್ದರೆ ಮತ್ತು ನೀವು ನೆಟ್ ಬ್ಯಾಂಕಿಂಗ್ ಅನ್ನು ಬಳಸುತ್ತಿದ್ದರೆ, ಈ ಸುದ್ದಿ ನಿಮಗೆ ಬಹಳ ಮುಖ್ಯವಾಗಿದೆ. ಡಿಸೆಂಬರ್ 1 ರ ಮೊದಲು ನೀವು ನಿಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಣಿ ಮಾಡದಿದ್ದರೆ, ನಿಮ್ಮ ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಎಸ್ಬಿಐ ನಿರ್ಬಂಧಿಸಬಹುದು. ಕೆಲವು ಕಾರಣಗಳಿಗಾಗಿ ಗ್ರಾಹಕರು ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಲು ಸಾಧ್ಯವಾಗದಿದ್ದರೂ, ಅವರು ಬ್ಯಾಂಕಿನ ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಬಳಸಲು ಸಾಧ್ಯವಾಗುವುದಿಲ್ಲ ಎಂದು ಎಸ್ಬಿಐ ಅಧಿಕೃತ ವೆಬ್ಸೈಟ್ ಮೂಲಕ ತಿಳಿಸಿದೆ.


COMMERCIAL BREAK
SCROLL TO CONTINUE READING

ಆದಷ್ಟು ಬೇಗ ನಿಮ್ಮ ಮೊಬೈಲ್ ನಂಬರ್ ನೋಂದಾಯಿಸಿ:
'ಇಂಟರ್ನೆಟ್ ಬ್ಯಾಂಕಿಂಗ್ ಬಳಕೆದಾರರು ದಯವಿಟ್ಟು ಗಮನಿಸಿ ನೀವು ಸಾಧ್ಯವಾದಷ್ಟು ಬೇಗ ನಿಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿ, ನೀವು ಹಾಗೆ ಮಾಡದಿದ್ದರೆ, ನಂತರ ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಡಿಸೆಂಬರ್ 1, 2018 ರಿಂದ ಸ್ಥಗಿತಗೊಳಿಸಲಾಗುತ್ತದೆ'. ಎಸ್ಬಿಐ ನೀಡಿದ ಮಾಹಿತಿಯನ್ನು ನೆನಪಿನಲ್ಲಿಡಿ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಅನ್ನು ಬಳಸಲು ಮೊದಲು ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿ ಎಂದು ಎಸ್ಬಿಐ ವೆಬ್ಸೈಟ್ ನಲ್ಲಿ ತಿಳಿಸಿದೆ.


ATM ನಗದು ಹಿಂಪಡೆಯುವ ಮಿತಿ ಕಡಿತ:
ವರದಿ ಪ್ರಕಾರ, ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ ನಗದು ಹಿಂತೆಗೆದುಕೊಳ್ಳುವ ಮಿತಿಯನ್ನು ದಿನಕ್ಕೆ 40,000 ರೂ. ನಿಂದ 20,000 ರೂಪಾಯಿಗೆ ಇಳಿಸಿದೆ. "ಎಟಿಎಂಗಳಲ್ಲಿ ಮೋಸದ ವಹಿವಾಟುಗಳ ಬಗ್ಗೆ ಬ್ಯಾಂಕುಗಳು ಸ್ವೀಕರಿಸಿದ ದೂರುಗಳ ಸಂಖ್ಯೆಯ ಹೆಚ್ಚಳ ಮತ್ತು ಡಿಜಿಟಲ್ ಮತ್ತು ಹಣವಿಲ್ಲದ ವಹಿವಾಟುಗಳನ್ನು ಉತ್ತೇಜಿಸಲು, "ಕ್ಲಾಸಿಕ್" ಮತ್ತು  "ಮೆಸ್ಟ್ರೋ" ಪ್ಲ್ಯಾಟ್ಫಾರ್ಮ್ಗಳಲ್ಲಿ ವಿತರಿಸಲ್ಪಟ್ಟ ಡೆಬಿಟ್ ಕಾರ್ಡ್ಗಳ ನಗದು ಹಿಂತೆಗೆದುಕೊಳ್ಳುವ ಮಿತಿಗಳನ್ನು ಕಡಿಮೆ ಮಾಡಲು ನಿರ್ಧರಿಸಲಾಗಿದೆ ಎಸ್ಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೊಸ ನಿಯಮ ಅಕ್ಟೋಬರ್ 31 ರಿಂದ ಅನ್ವಯವಾಗುತ್ತದೆ. ಅಂದರೆ, ನೀವು ಅಕ್ಟೋಬರ್ 30 ರೊಳಗೆ ಹಣ ಹಿಂಪಡೆಯಲು ಬಯಸಿದರೆ, ನೀವು 40 ಸಾವಿರ ರೂಪಾಯಿಗಳನ್ನು ಹಿಂದಕ್ಕೆ ಪಡೆಯಬಹುದು. ಈ ನಿಟ್ಟಿನಲ್ಲಿ, ಎಸ್ಬಿಐ ತನ್ನ ಎಲ್ಲಾ ಶಾಖೆಗಳಿಗೆ ಸೂಚನೆಗಳನ್ನು ಜಾರಿಗೊಳಿಸಿದೆ.


ಇತ್ತೀಚಿನ ದಿನಗಳಲ್ಲಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವಂಚನೆ ಪ್ರಕರಣ ಹೆಚ್ಚಾಗಿದ್ದು, ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ 5,555.48 ಕೋಟಿ ರೂ. ವಂಚನೆಯ 1,329 ಪ್ರಕರಣಗಳಿದ್ದವು. ಚಂದ್ರಶೇಖರ್ ಗೌರ್, ಮಧ್ಯಪ್ರದೇಶದ ನಿಮಾಚ್ನ ಆರ್ಟಿಐ ಕಾರ್ಯಕರ್ತರು ಈ ಮಾಹಿತಿಯನ್ನು ಮಾಹಿತಿ ಹಕ್ಕು ಕಾಯಿದೆಯಡಿಯಲ್ಲಿ ಪಡೆದುಕೊಂಡಿದ್ದಾರೆ. ಆರ್ಟಿಐ ಅರ್ಜಿಯಲ್ಲಿ ಅವರು ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್-ಜೂನ್) 669 ಪ್ರಕರಣಗಳಲ್ಲಿ ಬ್ಯಾಂಕ್ನ ವಂಚನೆ ಪ್ರಕರಣ 723.06 ಕೋಟಿ ಎಂದು ವರದಿ ಮಾಡಿದೆ.