ಬ್ಯಾಂಕ್ ಮ್ಯಾನೇಜರ್ ಕೀ ಮೂಲಕ 20 ಲಕ್ಷ ರೂ ವಂಚಿಸಿದ ಖಜಾ೦ಚಿ
ಆಂಧ್ರಪ್ರದೇಶದ ವಿಜಯವಾಡದಲ್ಲಿ ಎಸ್ ಬಿ ಐ ಖಜಾಂಚಿಯು ಬ್ಯಾಂಕ್ ಮ್ಯಾನೇಜರ್ ಬಳಿ ಇದ್ದ ಕೀ ಮೂಲಕ ಲಾಕರ್ ನಲ್ಲಿ 20 ಲಕ್ಷ ರೂಗಳನ್ನು ವಂಚಿಸಿದ್ದಾನೆ ಎಂದು ಎಂದು ಪೋಲೀಸು ತಿಳಿಸಿದ್ದಾರೆ.
ನವದೆಹಲಿ: ಆಂಧ್ರಪ್ರದೇಶದ ವಿಜಯವಾಡದಲ್ಲಿ ಎಸ್ ಬಿ ಐ ಖಜಾಂಚಿಯು ಬ್ಯಾಂಕ್ ಮ್ಯಾನೇಜರ್ ಬಳಿ ಇದ್ದ ಕೀ ಮೂಲಕ ಲಾಕರ್ ನಲ್ಲಿ 20 ಲಕ್ಷ ರೂಗಳನ್ನು ವಂಚಿಸಿದ್ದಾನೆ ಎಂದು ಎಂದು ಪೋಲೀಸು ತಿಳಿಸಿದ್ದಾರೆ.
ಈಗ ಇತನನ್ನು ಪೊಲೀಸರು ಬಂಧಿಸಿದ್ದು, ಆರೋಪಿಯನ್ನು ಜಿ ಶ್ರೀನಿವಾಸ್ ರಾವ್ ಎಂದು ಹೇಳಲಾಗಿದೆ. ಇವನು ಎಸ್ಬಿಐ ನಲ್ಲಿರುವ ಪರಿತಲಾ ಶಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಪೊಲೀಸರ ಪ್ರಕಾರ ರೂ. 20.75 ಲಕ್ಷ ನಗದು, 61 ಲಕ್ಷ ಮೌಲ್ಯದ 2,200 ಗ್ರಾಂ ಚಿನ್ನ 6 ಲಕ್ಷ ರೂ. ಮೌಲ್ಯದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಮಾಜಿ ಶಾಖಾ ವ್ಯವಸ್ಥಾಪಕ ಯೋಗಿತಾ ಅವರೊಂದಿಗೆ ಆಪ್ತರಾಗಿದ್ದ ಈ ಖಜಾಂಚಿಗೆ ಅವರು ಬ್ಯಾಂಕ್ ಲಾಕರ್‌ನ ಕೀಲಿಗಳನ್ನು ಇಟ್ಟುಕೊಳ್ಳಲು ಅವಕಾಶ ಮಾಡಿಕೊಟ್ಟರು, ಆದರೆ ಅದು ನಿಯಮಗಳಿಗೆ ವಿರುದ್ಧವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಿಯಮಗಳ ಪ್ರಕಾರ, ಬ್ಯಾಂಕ್ ಮ್ಯಾನೇಜರ್ ಮಾತ್ರ ಲಾಕರ್ ಕೀಗಳನ್ನು ತಮ್ಮೊಂದಿಗೆ ಇಟ್ಟುಕೊಳ್ಳಬಹುದು ಎನ್ನಲಾಗಿದೆ.
"ಈ ಪರಿಸ್ಥಿತಿಯ ಲಾಭವನ್ನು ಪಡೆದುಕೊಂಡ ರಾವ್ ಅವರು ಲಾಕರ್‌ನಲ್ಲಿ ಇಟ್ಟಿದ್ದ 19 ಲಕ್ಷ ರೂ.ಹಾಗೂ ಚಿನ್ನ ಇದ್ದ ಮೂರು ಚೀಲಗಳನ್ನು ಸಹ ಅವರು ಕದ್ದಿದ್ದಾರೆ. ಅಡಮಾನದಂತೆ ಇಟ್ಟುಕೊಂಡಿದ್ದ ಚಿನ್ನದ ತುಂಡನ್ನು ಕದ್ದು ನಕಲಿ ಹೆಸರಿನ ಮೇಲೆ ಸಾಲವನ್ನು ತೆಗೆದುಕೊಂಡ ರೀತಿಯಲ್ಲಿ ಬರೆದಿದ್ದಾರೆ ಎಂದು "ಹಿರಿಯ ಪೊಲೀಸ್ ಅಧಿಕಾರಿ ರವೀಂದ್ರ ಬೇಬಿ ಹೇಳಿದ್ದಾರೆ.