ಎಸ್ಬಿಐ ಖಾತೆದಾರರಿಗೆ ಒಳ್ಳೆಯ ಸುದ್ದಿ, ಈಗ ಸಿಗಲಿದೆ ಮೊದಲಿಗಿಂತ ಹೆಚ್ಚಿನ ಬಡ್ಡಿ
ನೀವು ಎಸ್ಬಿಐ ಖಾತೆದಾರರಾಗಿದ್ದರೆ ನಿಮಗಾಗಿಯೇ ತಂದಿದ್ದೇವೆ ಒಂದು ಒಳ್ಳೆಯ ಸುದ್ದಿ. ಎಸ್ಬಿಐ ಹೊಸ ನಿರ್ಧಾರಗಳು ಲಕ್ಷಾಂತರ ಕೋಟಿ ಗ್ರಾಹಕರಿಗೆ ಪ್ರಯೋಜನವನ್ನು ನೀಡುತ್ತದೆ. ವಾಸ್ತವವಾಗಿ, ಎಸ್ಬಿಐ ಸ್ಥಿರ ಠೇವಣಿ (FD) ಮೇಲೆ ಹೆಚ್ಚಿನ ಬಡ್ಡಿ ನೀಡಲಿದೆ.
ನವದೆಹಲಿ: ನೀವು ಎಸ್ಬಿಐ ಖಾತೆದಾರರಾಗಿದ್ದರೆ ನಿಮಗಾಗಿಯೇ ತಂದಿದ್ದೇವೆ ಒಂದು ಒಳ್ಳೆಯ ಸುದ್ದಿ. ಎಸ್ಬಿಐ ಹೊಸ ನಿರ್ಧಾರಗಳು ಲಕ್ಷಾಂತರ ಕೋಟಿ ಗ್ರಾಹಕರಿಗೆ ಪ್ರಯೋಜನವನ್ನು ನೀಡುತ್ತದೆ. ವಾಸ್ತವವಾಗಿ, ಎಸ್ಬಿಐ ಸ್ಥಿರ ಠೇವಣಿ (FD) ಮೇಲೆ ಹೆಚ್ಚಿನ ಬಡ್ಡಿ ನೀಡಲಿದೆ. 1 ಕೋಟಿಗಿಂತಲೂ ಕಡಿಮೆ ಮೊತ್ತದ ಸ್ಥಿರ ಠೇವಣಿಗಳು ಹಿಂದೆಂದಿಗಿಂತಲೂ ಹೆಚ್ಚಿನ ಬಡ್ಡಿ ಪಡೆಯುತ್ತವೆ. ಈ ಬದಲಾವಣೆ ಮೇ 28, 2018 ರಿಂದ ಜಾರಿಗೆ ಬರಲಿದೆ. ವಿವಿಧ ಸಮಯ ಮಿತಿಗಳ ಪ್ರಕಾರ ಬಡ್ಡಿದರಗಳನ್ನು ಹೆಚ್ಚಿಸಲಾಗಿದೆ.
5.75% ಕಡಿಮೆ ದರ
ಇದರರ್ಥ ನೀವು ಸ್ಥಿರ ಠೇವಣಿ ಮಾಡಲು ಯೋಜಿಸುತ್ತಿದ್ದರೆ, ನೀವು ವಿವಿಧ ಸಮಯ ಮಿತಿಗಳಿಗೆ ಎಷ್ಟು ಬಡ್ಡಿ ಎಂದು ತಿಳಿದುಕೊಂದ ನಂತರ ಮಾತ್ರ ಎಷ್ಟು ಸಮಯಕ್ಕೆ ಎಫ್ಡಿ ಇಡಬೇಕೆಂದು ನಿರ್ಧರಿಸಬೇಕು. ಎಸ್ಬಿಐನಲ್ಲಿ ಕಡಿಮೆ ಸಮಯದವರೆಗೆ, ಸ್ಥಿರ ಠೇವಣಿ 7 ದಿನಗಳಿಂದ 45 ದಿನಗಳವರೆಗೆ ಮಾಡಬಹುದಾಗಿದೆ. ಈ ಸಮಯದಲ್ಲಿ, ನೀವು 5.75 ಪ್ರತಿಶತದಷ್ಟು ಬಡ್ಡಿಯನ್ನು ಪಡೆಯುತ್ತೀರಿ. ಅದೇ ಸಮಯದಲ್ಲಿ, 5 ವರ್ಷ ಅಥವಾ ಅದಕ್ಕೂ ಹೆಚ್ಚಿನ ಕಾಲ, ಎಫ್ಡಿ ಮೇಲಿನ ಬಡ್ಡಿ ದರವು 6.75 ಶೇ. ಆಗಿದೆ.
ಇದು ಅತೀ ದೊಡ್ಡ ಪ್ರಯೋಜನವಾಗಿದೆ
ನೀವು ಒಂದಕ್ಕಿಂತ ಹೆಚ್ಚು ವರ್ಷ ಮತ್ತು ಎರಡು ವರ್ಷಗಳಿಗಿಂತ ಕಡಿಮೆ ಅವಧಿಯವರೆಗೆ ಎಫ್ಡಿ ಇಟ್ಟಿದ್ದರೆ, ನೀವು 6.65 ಪ್ರತಿಶತದಷ್ಟು ಆಧಾರದ ಮೇಲೆ ಬಡ್ತಿ ಪಡೆಯುತ್ತೀರಿ. ಈ ಮೊದಲು ಈ ಅವಧಿಯಲ್ಲಿ, 6.40 ಪ್ರತಿಶತದಷ್ಟು ಬಡ್ಡಿಯನ್ನು ನೀಡಲಾಗುತ್ತಿತ್ತು. ಅಂತೆಯೇ, ಎರಡು ವರ್ಷಗಳಿಗಿಂತಲೂ ಹೆಚ್ಚು ವರ್ಷಗಳವರೆಗೆ ಮತ್ತು ಮೂರು ವರ್ಷಗಳಿಗಿಂತ ಕಡಿಮೆ ಅವಧಿಯವರೆಗೆ FD ಗಾಗಿ, 6.65 ರಷ್ಟು ಬಡ್ಡಿ ಸಹ ಲಭ್ಯವಿರುತ್ತದೆ. ಹಿಂದೆ ಇದು 6.60 ಶೇಕಡಾ ಆಗಿತ್ತು.
ಹಿರಿಯ ನಾಗರಿಕರಿಗೆ ಈಗ ಎಫ್ಡಿ 2 ರಿಂದ 3 ವರ್ಷಗಳವರೆಗೆ 7.15 ಪ್ರತಿಶತ ಬಡ್ಡಿಯನ್ನು ನೀಡಲಾಗುತ್ತದೆ. ಎಫ್ಡಿ ಯ ಮೇಲೆ 3 ವರ್ಷದಿಂದ 5 ವರ್ಷಗಳಿಗೊಮ್ಮೆ ಮತ್ತು 5 ವರ್ಷದಿಂದ 10 ವರ್ಷಗಳವರೆಗೆ ಎಫ್ಡಿ ಮೇಲಿನ ಬಡ್ಡಿಯಲ್ಲಿ ಯಾವುದೇ ಹೆಚ್ಚಳ ಕಂಡುಬಂದಿಲ್ಲ. ಏಪ್ರಿಲ್ನಲ್ಲಿ ಎಚ್ಡಿಎಫ್ಸಿ ಬ್ಯಾಂಕ್ ಕೂಡ ಸ್ಥಿರವಾದ ಠೇವಣಿ ದರವನ್ನು ಹೆಚ್ಚಿಸಿದೆ. ಎಚ್ಡಿಎಫ್ಸಿ ವರ್ಷಕ್ಕೆ ಎಫ್ಡಿಗೆ 7.35 ಶೇ. ಬಡ್ಡಿ ನೀಡುತ್ತದೆ.