ನವದೆಹಲಿ: ನೀವು ಎಸ್ಬಿಐ, ಐಸಿಐಸಿಐ, ಆಕ್ಸಿಸ್, ಎಸ್, ಸಿಟಿ ಮತ್ತು ಇಂಡಿಯನ್ ಬ್ಯಾಂಕ್ ಗ್ರಾಹಕರಾಗಿದ್ದಲ್ಲಿ ಈ ಕೂಡಲೇ ಎಚ್ಚರವಹಿಸಿ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ನಕಲಿ ಬ್ಯಾಂಕ್ ಆಪ್ ಗಳು ಸೃಷ್ಟಿಯಾಗುತ್ತಿದ್ದು, ಅದೆಷ್ಟೋ ಗ್ರಾಹಕರು ನಿಜವಾದ ಆಪ್ ಮತ್ತು ನಕಲಿ ಆಪ್ ಗಳ ನಡುವಿನ ವ್ಯತ್ಯಾಸ ತಿಳಿಯದೆ ಡೌನ್ ಲೋಡ್ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ವಂಚಕರು, ಅಮಾಯಕರ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಅಕೌಂಟ್ ನಂಬರ್ ಮತ್ತು ಪಿನ್ ಗಳ ಕಳ್ಳತನ ಮಾಡುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಹಾಗಿದ್ದರೆ, ಈ ರೀತಿ ಮೋಸ ಹೋಗುವುದನ್ನು ತಡೆಯುವುದು ಹೇಗೆ? ಮೊಬೈಲ್ ಬ್ಯಾಂಕಿಂಗ್ ನಲ್ಲಿ ವ್ಯವಹರಿಸುವಾಗ ಗಮನಿಸಬೇಕಾದ ಮುಖ್ಯ ಅಂಶಗಳೇನು ಎಂಬ ಬಗ್ಗೆ ಐಸಿಐಸಿಐ ಬ್ಯಾಂಕ್ ಕೆಲವು ಸಲಹೆಗಳನ್ನು ನೀಡಿದೆ...


1. ಇಮೇಲ್, ಮೊಬೈಲ್ ಅಲರ್ಟ್ ಗೆ ರಿಜಿಸ್ಟರ್ ಆಗಿ
ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸವನ್ನು ಬ್ಯಾಂಕ್ ಖಾತೆಯೊಂದಿಗೆ ರಿಜಿಸ್ಟರ್ ಮಾಡಿ. ಈ ಮೂಲಕ ನಿಮ್ಮ ಖಾತೆಯ ಪ್ರತಿಯೊಂದು ವ್ಯವಹಾರವನ್ನೂ ಟ್ರ್ಯಾಕ್ ಮಾಡಿ.


2. ಸ್ಟ್ರಾಂಗ್ ಪಾಸ್ವರ್ಡ್ ಮತ್ತು ಪಿನ್ ಸೆಟ್ ಮಾಡಿ
ನಿಮ್ಮ ಮೊಬೈಲ್ ನಲ್ಲಿ ಬ್ಯಾಂಕ್ ಅಪ್ಲಿಕೇಶನ್ ಅನ್ನು ಮತ್ತೊಬ್ಬರು ಸುಲಭವಾಗಿ ತೆರೆಯಲಾಗದ, ಉಹಿಸಲಾಗದಂತಹ ಪಾಸ್ವರ್ಡ್/ಪಿನ್ ಸೆಟ್ ಮಾಡಿ.


3. ಜಂಕ್ ಮೇಲ್, ಅನುಮಾನಕಾರಿ URLಗಳನ್ನು ಬಳಸಬೇಡಿ
ಜಂಕ್ ಮೆಸೇಜ್, ಸರಣಿ ಸಂದೇಶಗಳನ್ನು ಆಗಾಗ್ಗೆ ಡಿಲೀಟ್ ಮಾಡಿ. ನಿಮಗೆ ಅರಿಯದ ಯಾವುದೇ URLಗಳನ್ನು ಫಾಲೋ ಮಾಡಬೇಡಿ.


4. ಗೌಪ್ಯ ಮಾಹಿತಿಗಳನ್ನು ಮೊಬೈಲ್ ನಲ್ಲಿ ಸೇವ್ ಮಾಡಬೇಡಿ
ನಿಮ್ಮ ಬ್ಯಾಂಕ್ ಖಾತೆಗೆ ಸಂಬಂಧಿಸಿದ ಪಿನ್, ಪಾಸ್ವರ್ಡ್, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಸಂಖ್ಯೆಗಳನ್ನು ಮೊಬೈಲ್ ನಲ್ಲಿ ಸೇವ್ ಮಾಡಿಟ್ಟುಕೊಳ್ಳಬೇಡಿ.


5. ಆ್ಯಂಟಿ ಮಾಲ್ವೇರ್ ಸಾಫ್ಟ್ ವೇರ್ ಅಳವಡಿಸಿ
ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಪರಿಣಾಮಕಾರಿ ಮೊಬೈಲ್ ಆ್ಯಂಟಿ ಮಾಲ್ವೇರ್/ಆ್ಯಂಟಿ ವೈರಸ್ ಸಾಫ್ಟ್ ವೇರ್ ಅಳವಡಿಸಿ, ಆಗಾಗ ಅಪ್ಡೇಟ್ ಮಾಡಿ.


6. ಅನಗತ್ಯ ಸಾಫ್ಟ್ ವೇರ್'ಗಳ ಡೌನ್ಲೋಡ್ ಬೇಡ
ಮೊಬೈಲ್ ಗೆ ತೊಂದರೆ ಉಂಟುಮಾಡುವ ಅನಗತ್ಯ ಸಾಫ್ಟ್ ವೇರ್'ಗಳನ್ನು ಡೌನ್ಲೋಡ್ ಮಾಡಿಕೊಳ್ಳಬೇಡಿ. ಇವು ನಿಮ್ಮ ಮೊಬೈಲ್ನಲ್ಲಿರುವ ವೈಯಕ್ತಿಕ ಮಾಹಿತಿಯನ್ನು ಕದಿಯುವ ಸಾಧ್ಯತೆ ಇರುತ್ತದೆ.