ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗೆ ಸುರಕ್ಷಿತ ಬ್ಯಾಂಕಿಂಗ್ ವಹಿವಾಟುಗಳನ್ನು ಒದಗಿಸಲು ಮತ್ತು ಅವರ ಠೇವಣಿ ಬಂಡವಾಳವನ್ನು ಸುರಕ್ಷಿತವಾಗಿಡಲು ನಿರಂತರವಾಗಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಒಮ್ಮೆ ಬ್ಯಾಂಕ್ ತನ್ನ ಗ್ರಾಹಕರಿಗೆ ಸುರಕ್ಷಿತ ವಹಿವಾಟಿನ ಕುರಿತು ಟಿಪ್ಸ್ ಗಳನ್ನು ಸಹ ನೀಡುತ್ತಿದ್ದರೆ, ಮತ್ತೊಮ್ಮೆ ಅದು ತನ್ನ ಸೇವೆಗಳಿಗೆ ಹೊಸ ವೈಶಿಷ್ಟ್ಯಗಳನ್ನು ಜೋಡಿಸುತ್ತದೆ. ಸದ್ಯ ಈ ನಿಟ್ಟಿನಲ್ಲಿ ಹೊಸ ಹೆಜ್ಜೆ ಇಟ್ಟಿದೆ. ಎಟಿಎಂ ವಂಚನೆಯಿಂದ ಗ್ರಾಹಕರನ್ನು ರಕ್ಷಿಸಲು ಹೊಸ ವೈಶಿಷ್ಟ್ಯವನ್ನು ಬಿಡುಗಡೆ ಮಾಡಲಾಗಿದೆ ಎಂದು ಎಸ್‌ಬಿಐ ತನ್ನ ಟ್ವಿಟ್ಟರ್ ಹ್ಯಾಂಡಲ್‌ನಿಂದ ಮಾಹಿತಿ ನೀಡಿದೆ.


COMMERCIAL BREAK
SCROLL TO CONTINUE READING

ಬ್ಯಾಂಕ್ ಬರೆದುಕೊಂಡಿರುವ ಟ್ವೀಟ್ ಪ್ರಕಾರ, ಹೊಸ ವೈಶಿಷ್ಟ್ಯವೆಂದರೆ ಎಟಿಎಂನಿಂದ ಬ್ಯಾಲೆನ್ಸ್ ವಿಚಾರಣೆ ಅಥವಾ ಮಿನಿ ಸ್ಟೇಟ್ಮೆಂಟ್ಗಾಗಿ ಬ್ಯಾಂಕ್ ವಿನಂತಿಯನ್ನು ಸ್ವೀಕರಿಸಿದಾಗ, ಎಸ್‌ಬಿಐ ಆ ಡೆಬಿಟ್ / ಎಟಿಎಂ ಕಾರ್ಡ್‌ಗೆ ಸಂಬಂಧಿಸಿದ ಗ್ರಾಹಕರನ್ನು ಎಸ್‌ಎಂಎಸ್ ಕಳುಹಿಸುವ ಮೂಲಕ ಎಚ್ಚರಿಸುತ್ತದೆ. ಸ್ವತಃ ಗ್ರಾಹಕರೇ ಈ ವ್ಯವಹಾರ ನಡೆಸುತ್ತಿದ್ದಾರೆಯೋ ಅಥವಾ ಬ್ರಾಹಕರ ಡೆಬಿಟ್ ಕಾರ್ಡ್ ಬಳಸಿ ಇತರರು ಈ ವ್ಯವಹಾರ ನಡೆಸುತ್ತಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಇದರ ಹಿಂದಿನ ಉದ್ದೇಶ.  ವಹಿವಾಟು ಬೇರೊಬ್ಬರಿಂದ ಮಾಡಲ್ಪಟ್ಟರೆ, ಗ್ರಾಹಕನು ಬ್ಯಾಂಕಿನಿಂದ ಎಸ್‌ಎಂಎಸ್ ಮೂಲಕ ವಹಿವಾಟು ಸ್ವೀಕರಿಸಿದ ಕೂಡಲೇ ಅವನ ಅಥವಾ ಅವಳ ಡೆಬಿಟ್ ಕಾರ್ಡ್ ಅನ್ನು ನಿರ್ಬಂಧಿಸಲು ಸಾಧ್ಯವಾಗುತ್ತದೆ ಎಂದು ಎಸ್‌ಬಿಐ ಹೇಳಿದೆ.



ಬ್ಯಾಂಕ್ ನಿಂದ ಬಂದ್ SMS ಅನ್ನು ನಿರ್ಲಕ್ಷಿಸಬೇಡಿ
ಒಂದು ವೇಳೆ ನೀವು ಮಿನಿ ಸ್ಟೇಟ್ ಮೆಂಟ್ ಅಥವಾ ಬ್ಯಾಲೆನ್ಸ್ ಎನ್ಕ್ವೈರೀ ರಿಕ್ವೆಸ್ಟ್ ಹಾಕಿರದ ಸಂದರ್ಭದಲ್ಲಿ ಬ್ಯಾಂಕ್ ನಿಂದ ಬಂದ SMS ಅನ್ನು ನಿರ್ಲಕ್ಷಿಸಬೇಡಿ ಎಂದು ಬ್ಯಾಂಕ್ ಎಚ್ಚರಿಸಿದೆ. ನಿಮ್ಮ ಬ್ಯಾಂಕ್ ಖಾತೆಯಲ್ಲಿ ಬಾಕಿ ಉಳಿದಿರುವ ಹಣದ ಮಾಹಿತಿ ಪಡೆಯುವುದು ಫ್ರಾಡ್ ವ್ಯಕ್ತಿ ನಡೆಸಿರುವ ವಹಿವಾಟು ಇದಾಗಿರಬಹುದು ಎಂದು ಬ್ಯಾಂಕ್ ಹೇಳಿದೆ. ಹೀಗಾಗಿ ಇಂತಹ ಯಾವುದೇ ಸಂದರ್ಭದಲ್ಲಿ ನೀವು ನಿಮ್ಮ ಬ್ಯಾಂಕ್ ಗೆ ಮಾಹಿತಿ ನೀಡಿ ಕಾರ್ಡ್ ಅನ್ನು ಫ್ರೀಜ್ ಮಾಡಬಹುದು.